ಚಿಕ್ಕಮಗಳೂರು

ಕೃಷಿಕರಿಗೆ ಜಾಗತಿಕ ಮಾರುಕಟ್ಟೆ ಜಾಗೃತಿ ಅಗತ್ಯ: ಶ್ರೀಕಾಂತ್

Published On :

ಸೊರಬ:  ಇಂದು ಬೆಳೆಗೆ ಅತಿ ಹೆಚ್ಚು ರಾಸಾಯನಿಕ ಬಳಕೆ ಆಗುತ್ತಿರುವುದರಿಂದ ಇಳುವರಿ ಕಡಿಮೆ ಆಗುತ್ತಿದೆ. ಬೆಳೆಗೆ ರೋಗಗಳ ಸಂಖ್ಯೆ ಸಹ ಹೆಚ್ಚುತ್ತಿದೆ ಎಂದು ನವಭಾರತ ಫರ್ಟಿಲೃಸರ್ ಕಂಪನಿ ಶಾಖಾ ವ್ಯವಸ್ಥಾಪಕ ಸಿ.ಡಿ.ಶ್ರೀಕಾಂತ್ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ತತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಕಬ್ಬೂರು ಗ್ರಾಮದ ಪರಮೇಶ್ವರಪ್ಪ ಗೋಡರೆಮನಿ ಅವರ ಜಮೀನಿನಲ್ಲಿ ನವಭಾರತ ಫರ್ಟಿಲೃಸರ್ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ ಬತ್ತದ ಬೆಳೆ ಕ್ಷೇತ್ರೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸಬೇಕಾಗಿರುವ ಕೃಷಿಕರು ಇಂದು ಈ ನಿಟ್ಟಿನಲ್ಲಿ ಜಾಗೃತರಾಗುವ ಅವಶ್ಯಕತೆ ಇದೆ. ಭೂಮಿಯಲ್ಲಿನ ಪೋಷಕಾಂಶಗಳನ್ನು ಉಳಿಸುವುದರೊಂದಿಗೆ ಫಲವತ್ತತೆ ಬಗ್ಗೆಯೂ ಸಹ ಕಾಳಜಿ ಮುಖ್ಯ. ಆದ್ದರಿಂದ ಸಾವಯವ ಗೊಬ್ಬರವನ್ನು ಹೆಚ್ಚು ಬಳಸಿ ಅಧಿಕ ಇಳುವರಿ ಪಡೆಯಿರಿ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಡಿವಾಳಪ್ಪ ಹಾವಕನವರ್ ಮಾತನಾಡಿ, ಸಾವಯವ ಗೊಬ್ಬರದ ಬಳಕೆ ನೈಸರ್ಗಿಕವಾಗಿದೆ. ಮಣ್ಣಿನಲ್ಲಿನ ತೇವಾಂಶ ಸಹ ಇಲ್ಲಿ ಅಧಿಕವಾಗಿದೆ. ನೈಸರ್ಗಿಕ ಕೃಷಿಯ ಅಳವಡಿಕೆಯಿಂದ ಆರೋಗ್ಯವು ಸಹಾ ವೃದ್ಧಿಸುತ್ತದೆ ಎಂದರು.
ನವಭಾರತ್ ಫರ್ಟಿಲೈಸರ್ಸ್‌ನ ಅಧಿಕಾರಿ ಮಲ್ಲಿಕಾರ್ಜುನ ಹಳ್ಳಿ, ಗ್ರಾಪಂ ಉಪಾಧ್ಯಕ್ಷ ಹೇಮಪ್ಪ, ಕಾರ್ಯದರ್ಶಿ ಮಲ್ಲೇಶಪ್ಪ, ಗ್ರಾಮಸ್ಥರಾದ ಪ್ರಭುಗೌಡ, ಮಧುಕೇಶವ, ಮೃತ್ಯುಂಜಯ, ಮಂಜು, ಶಿವರಾಜ್ ಸೇರಿಹಿರೇಕಬ್ಬೂರು ಗ್ರಾಮದ ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.