ಚಿಕ್ಕಮಗಳೂರು

ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯ ಕಲಿಸಿ

Published On :

ಕ.ಪ್ರ.ವಾರ್ತೆ, ತರೀಕೆರೆ, ಏ.29
ಪೋಷಕರು ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಪ್ರದಾಯ ಹೇಳಿಕೊಡಬೇಕು ಎಂದು ಮಾಜಿ ಶಾಸಕ ಟಿ.ಎಚ್. ಶಿವಶಂಕರಪ್ಪ ತಿಳಿಸಿದ್ದಾರೆ.
ಸಮೀಪದ ಗಡೀಹಳ್ಳಿಯಲ್ಲಿ ಕಂಸಾಗರ ಬೀರಲಿಂಗೇಶ್ವರಸ್ವಾಮಿ, ಕೆರೆಕೋಡು ಬೀರಲಿಂಗೇಶ್ವರಸ್ವಾಮಿ, ಮಾದಾಳಯ್ಯ ಬೀರಲಿಂಗೇಶ್ವರಸ್ವಾಮಿ, ಚೆನ್ನಬಸವೇಶ್ವರಸ್ವಾಮಿ ತೋಪು ಜಾತ್ರಾ ಮಹೋತ್ಸವ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಎಲ್ಲೆಡೆ ಉತ್ಸವ: ನಮ್ಮ ಸಂಪ್ರದಾಯ ತಿಳಿದುಕೊಳ್ಳಬೇಕು, ವಾಡಿಕೆ ಬಿಡಬಾರದು, ನೀರಿದ್ದರೆ ಜಾತ್ರೆ, ದೇವರಿಗಿಂತ ದೊಡ್ಡವರು ಯಾರೂ ಇಲ್ಲ, ಶ್ರದ್ಧೆ ಬಹಳ ಮುಖ್ಯ, ಜಾತ್ರೆ ಉತ್ಸವಗಳು ಎಲ್ಲಾ ಕಡೆ ನಡೆಯಬೇಕು ಎಂದರು.
ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಜಾತ್ರೆ ಉತ್ಸವಗಳಿಂದ ದೈವಬಲ ಹೆಚ್ಚುತ್ತದೆ. ಎಲ್ಲಾ ಅಣ್ಣತಮ್ಮಂದಿರು ಒಟ್ಟಿಗೆ ಸೇರುವುದು ಸಂತೋಷದ ವಿಷಯ. ಜಾತ್ರಾ ಮಹೋತ್ಸವ ಕಾರ್ಯಕ್ರಮ ಬಹಳ ಚೆನ್ನಾಗಿ ನಡೆದಿದೆ. ಎಲ್ಲಾ ಕಡೆ ಒಳ್ಳೆಯ ಮಳೆ ಬೆಳೆಯಾಗಲಿ ಎಂದು ತಿಳಿಸಿದರು,.
ಬೆಳಕು ಚೆಲ್ಲಲಿ: ಜಾತ್ರಾ ಮಹೋತ್ಸವದ ಗೌರವಾಧ್ಯಕ್ಷ ಟಿ.ವಿ. ಶಿವಶಂಕರಪ್ಪ ಮಾತನಾಡಿ, 12 ವರ್ಷಕ್ಕೊಮ್ಮೆ  ನಡೆಯುವ ಇಂತಹ ಜಾತ್ರಾ ಮಹೋತ್ಸವಗಳ ಬಗ್ಗೆ ಲೇಖಕರು ಬೆಳಕು ಚೆಲ್ಲಬೇಕು ಎಂದು ತಿಳಿಸಿದರು.
ಅಂಕಣಕಾರ ಚಂದ್ರೇಗೌಡ ಮಾತನಾಡಿ, ಬದುಕಿನಲ್ಲಿ ಆಚರಿಸುವಂತದ್ದನ್ನು ಹೇಳಬೇಕು. ಜಾತ್ರೆಯಲ್ಲಿ ಸಮುದಾಯ ಪರಸ್ಪರ ತಮ್ಮ ಕಷ್ಟಸುಖ ಹಂಚಿಕೊಳ್ಳುತ್ತಾರೆ. ಬದುಕಿನ ಸಕಲ ಸಾಮಗ್ರಿಗಳೂ ಜಾತ್ರೆಗೆ ಬರುತ್ತದೆ.  ಜಾತ್ರೆಗಳು ಕಡಿಮೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ನಿರ್ದೇಶಕ ಟಿ.ಕೆ.ಹಾಲುವಜ್ರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಮಾದರಿಯಾಗಬೇಕು, ಜಾತ್ರೆಗಳು ಜಾತ್ಯತೀತತೆಯನ್ನು ಪ್ರತಿನಿಧಿಸುತ್ತದೆ.  ಅಚ್ಚುಕಟ್ಟಾಗಿ ಜಾತ್ರೆ ನಡೆಯಲು ಸಹಕರಿಸಿದ ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತು ಸರ್ಕಾರಕ್ಕೆ ಅವರು ಕೃತಜ್ಞತೆ ಅರ್ಪಿಸಿದರು.
ಬಿಜಿಪಿ ಜಿಲ್ಲಾ ಉಪಾಧ್ಯಕ್ಷ ಆರ್. ದೇವಾನಂದ್, ರಾಷ್ಟ್ರೀಯ ಕೋಮು ಸೌಹಾರ್ದ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಜಾತ್ರಾ ಸಮಿತಿ ಕಾರ್ಯಾಧ್ಯಕ್ಷ ಟಿ.ಎಂ. ಭೋಜರಾಜ್ ಮೊದಲಾದವರು ಮಾತನಾಡಿದರು.
ಪುರಸಭೆ ಸದಸ್ಯ ಪದ್ಮರಾಜ್, ಪ್ರಕಾಶ್ ವರ್ಮ, ಟಿ.ಎಸ್. ಧರ್ಮರಾಜ್, ಟಿ.ಜಿ. ಸದಾನಂದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸವರಾಜ್, ಮೋಹನ್ ಕುಮಾರ್, ತಾಲೂಕು ಬಚಾವ್ ಆಂದೋಲನ ಸಮಿತಿ ಪ್ರಧಾನ ಸಂಚಾಲಕ ಎನ್‌ರಾಜು, ಟಿ.ಜಿ. ಸದಾನಂದ್ ಮಹಂತೇಶ್ ಮೊದಲಾದರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಾಧ್ಯಕ್ಷ ಟಿ.ಎಂ. ಬೋಜರಾಜ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.