ಸಹಕಾರ ಸಾರಿಗೆ ಕಚೇರಿಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ
ಕೊಪ್ಪ: ಕಾರ್ಮಿಕರ ಹೋರಾಟ ಒಗ್ಗಟಿನಿಂದ ಕಟ್ಟಿರುವ ಸಹಕಾರ ಸಾರಿಗೆ ಸಂಸ್ಥೆಯನ್ನು ಶತಮಾನದತ್ತ ಮುನ್ನಡೆಸುವ ಸಂಕಲ್ಪ ಮಾಡೋಣ ಎಂದು ಸಹಕಾರ ಸಾರಿಗೆ ಅಧ್ಯಕ್ಷ ಇ.ಎಸ್.ಧರ್ಮಪ್ಪ ಹೇಳಿದರು. ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಸಹಕಾರ ಸಾರಿಗೆ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕ್ರಾಂತಿಕಾರಿ ಕಾರ್ಮಿಕ ನಾಯಕ ದಿ. ಬಿ.ಕೆ. ಸುಂದರೇಶ್ ಮಾರ್ಗದರ್ಶನದಲ್ಲಿ ಸಂಸ್ಥೆ ಕಾರ್ಮಿಕರ ಹಿತಕ್ಕಾಗಿ ಸ್ಥಾಪನೆಗೊಂಡಿದೆ. ಇದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮದು ಎಂದರು. ಸಂಸ್ಥೆ ಉಪಾಧ್ಯಕ್ಷ ಕೆ.ಟಿ. ಸುಂದರೇಶ, ನಿರ್ದೇಶಕರಾದ ವಿ.ರಮೇಶ್, ಗಾಡ್ವೀನ್ ಜಯಪ್ರಕಾಶ್, ಗಾಯತ್ರಿ, ಜಿ.ಆರ್. ವಿಶ್ವನಾಥ್, ವೆಂಕಟರಾಮ್, ತಿಮ್ಮಪ್ಪಗೌಡ, ಶೋಭ ಮೊದಲಾದವರಿದ್ದರು.
ಬಾಂಬ್ ಸ್ಫೋಟ: ಬಿಜೆಪಿ ಖಂಡನೆ
ಶಿವಮೊಗ್ಗ: ಬೆಂಗಳೂರು- ಚೆನ್ನೈನಲ್ಲಿ ಸೆಂಟ್ರಲ್ ರೇಲ್ವೆ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ಜಿಲ್ಲಾ ಬಿಜೆಪಿ ಖಂಡಿಸಿದ್ದು, ಭಯೋತ್ಪಾದಕರ ಈ ದುಷ್ಕೃತ್ಯ ಖಂಡನಾರ್ಹ. ಸ್ಫೋಟದಲ್ಲಿ ಮರಣಹೊಂದಿದ ಯುವತಿ ಸ್ವಾತಿಯ ಕುಟುಂಬಕ್ಕೆ ಭಗವಂತ ದುಃಖಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದೆ. ಅಲ್ಲಿನ ರಾಜ್ಯ ಸರ್ಕಾರ ಹಾಗೂ ರೇಲ್ವೆ ಇಲಾಖೆಯಿಂದ ಇನ್ನೂ ಹೆಚ್ಚಿನ ಪರಿಹಾರವನ್ನು ಘೋಷಣೆ ಮಾಡಬೇಕು. ಈ ಪ್ರಕರಣದ ಕುರಿತು ತಮಿಳುನಾಡು ರಾಜ್ಯ ಸರ್ಕಾರ, ಕೇಂದ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

