ಚಿಕ್ಕಮಗಳೂರು

ಸಂಭ್ರಮದ ಬಸರೀಕಟ್ಟೆ ನೇಮೋತ್ಸವ

Published On :

ಬಾಳೆಹೊನ್ನೂರು: ಸಮೀಪದ ಬಸರೀಕಟ್ಟೆ ನೇಫಾ ರಸ್ತೆಯ ಸೋಮೇಶ್ವರಖಾನ್‌ನಲ್ಲಿ ಕಳೆದ ಮೂರು ದಿನಗಳ ಹಿಂದೆ ಆರಂಭಗೊಂಡ ಸತ್ಯಸಾರಮಣಿ, ಬ್ರಹ್ಮದೇವರು ಮತ್ತು ಪರಿವಾರ ದೇವತೆಗಳ ದೇವಸ್ಥಾನ ನವೀಕರಣ, ಪುನಃ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಗ್ರಾಮಸ್ಥರ ಸಹಕಾರದಿಂದ ಸುಮಾರು ಎಂಟು ಲಕ್ಷ ರು. ವೆಚ್ಚದಲ್ಲಿ ನವೀಕರಣಗೊಂಡ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ ಹಾಗೂ ನೇಮೋತ್ಸವವು ವಿವಿಧ ಧಾರ್ಮಿಕ ವಿಧಿ- ವಿಧಾನಗಳೊಂದಿಗೆ ಆರಂಭಗೊಂಡು ಸಂಪ್ರದಾಯಬದ್ಧವಾಗಿ ಭಾನುವಾರದವರೆಗೆ ನಡೆಯಿತು.
ಶುಕ್ರವಾರ ರಾತ್ರಿ ಪುಣ್ಯಾಹವಾಚನ, ಆಲಯ ಸ್ವೀಕಾರ, ವಾಸ್ತು ಹೋಮ, ದಿಕ್ಪಾಲಕ ಬಲಿ, ಕಲಶ ಮಂಡಲ ರಚನೆ ಕಾರ್ಯಕ್ರಮ ನಡೆಯಿತು. ಶನಿವಾರ ಕಲಶ ಪ್ರತಿಷ್ಠೆ, ದೇವತೆಗಳ ಪ್ರತಿಷ್ಠೆ, ಕಲಶಾಭಿಷೇಕ, ದೈವಗಳ ದರ್ಶನ ನಡೆಯಿತು.
ಸತ್ಯಸಾರಮಣಿ ದೈವದ ದರ್ಶನ ಹಾಗೂ ಅಲೇರ ಪಂಜುರ್ಲಿ ದೈವದ ಗಗ್ಗರ ಸೇವೆ, ಚಾಮುಂಡೇಶ್ವರಿ ಮತ್ತು ಪರಿವಾರ ದೈವಗಳಾದ ರಾಹುಗುಳಿಗೆ ನೇಮೋತ್ಸವ ಸಾವಿರಾರು ಭಕ್ತಾದಿಗಳ ನಡುವೆ ನಡೆಯಿತು. ಭಕ್ತರು ಆಗಮಿಸಿ ದೈವದ ಆಶೀರ್ವಾದ ಪಡೆದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.