ಚಿಕ್ಕಮಗಳೂರು

ಅರ್ಥ್ ಕೇರ್ ಅವಾರ್ಡ್ಸ್ ಪ್ರದಾನ

Published On :

ಕ.ಪ್ರ.ವಾರ್ತೆ ್ಣ ಚಿಕ್ಕಮಗಳೂರು ್ಣ ಮೇ 16
ಬತ್ತಿ ಹೋದ ಅಂತರ್ಜಲ ಪುನಶ್ಚೇತನಗೊಳಿಸುವ ಸಂಪೂರ್ಣ ಕ್ರಾಂತಿಕಾರಕ ಹಾಗೂ ಸುಧಾರಿತ ದೇಶೀಯ ತಂತ್ರಜ್ಞಾನದಲ್ಲಿ ಮುಂಚೂಣಿ ಸಾಧಿಸಿರುವ ನಗರದ ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್(ಎಫ್‌ಎಲ್‌ಆರ್‌ಡಬ್ಲ್ಯುಎಚ್‌ಎಸ್) ಸಂಸ್ಥೆಗೆ ಅರ್ಥ್ ಕೇರ್ ಅವಾರ್ಡ್ಸ್- 2014 ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿದೆ.
ಮುಂಬೈನ ಜೆಎಸ್‌ಡಬ್ಲ್ಯೂ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಐಪಿಸಿಸಿ ಮಹಾ ನಿರ್ದೇಶಕರಾದ ಡಾ. ರಾಜೇಂದ್ರ ಕೆ. ಪಚೋರಿ ಅವರು ಸಂಸ್ಥೆಯ ಮುಖ್ಯಸ್ಥರಾದ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ತಂತ್ರಜ್ಞಾನವು ವಿಶೇಷವಾಗಿ ಶುಷ್ಕ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಪುನರುಜ್ಜೀವನಗೊಳಿಸುವಲ್ಲಿ ನೆರವಾಗಲಿದೆ ಹಾಗೂ ಹೊಸ ಬೋರ್‌ವೆಲ್‌ಗಳ ವಿವೇಚನಾರಹಿತ ಇಂಗುವಿಕೆಯನ್ನು ಹಾಗೆಯೇ ಟ್ಯಾಂಕರ್‌ಗಳ ಮೂಲಕ ನೀರನ್ನು ಪೂರೈಸುವಿಕೆಯ ಅಗತ್ಯ ತಪ್ಪಿಸುತ್ತದೆ.
ಅನ್ವೇಷಣಾತ್ಮಕ ವಿ-ವೈರ್ ಇಂಜೆಕ್ಷನ್ ವೆಲ್ ತಂತ್ರಜ್ಞಾನವು ಕೃತಕ ಪುನಶ್ಚೇತನ ಮತ್ತು ಜಲ ಸಂಗ್ರಹ ಹಾಗೂ ಚೇತರಿಕೆಗೆ ಸಹಕಾರಿಯಾಗುತ್ತದೆ. ಈ ನವೀನ ತಂತ್ರಜ್ಞಾನವು ಅಂತರ್ಜಲ ಪುನಶ್ಚೇತನ, ಜಲ ಸಂವರ್ಧನೆ, ಮೇಲ್ಪದರದ ಮಣ್ಣಿನ ನಷ್ಟ ಇಳಿಕೆ, ಕರಾವಳಿ ಪ್ರದೇಶಗಳಿಗೆ ಸಮುದ್ರದ ನೀರು ಸೇರ್ಪಡೆ ನಿಯಂತ್ರಣ ಹಾಗೂ ಅಂತರ್ಜಲ ಮೂಲದಲ್ಲಿ ಗಡಸುತನ ಮತ್ತು ಲವಣಾಂಶ ಕಡಿಮೆ ಮಾಡಲು ಸಹ ನೆರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜೆಎಸ್‌ಡಬ್ಲ್ಯೂ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶೇಷಗಿರಿರಾವ್ ಹಾಗೂ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್ ಸಂಸ್ಥೆಯ ವಿಜಯರಾಜ್, ಸುನೀಲ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.