ನಿತ್ಯ ಕರ್ಮಗಳೇ ಭಗವಂತನ ಪೂಜೆಯಾಗಲಿ
ಕ.ಪ್ರ.ವಾರ್ತೆ, ತರೀಕೆರೆ, ಮೇ 18
ನಿತ್ಯ ಮಾಡುವ ಕರ್ಮಗಳೇ ಭಗವಂತನಿಗೆ ಪೂಜೆಯಾಗಬೇಕು ಎಂದು ಹರಿಹರಪುರ ಶ್ರೀಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಶ್ರೀ ಹೇಳಿದರು.
ಶನಿವಾರ ಬ್ರಾಹ್ಮಣ ಸೇವಾ ಸಮಿತಿ, ಶ್ರೀವತ್ಸ ಭಜನಾ ಮಂಡಳಿ ಶ್ರೀಮಾತಾ ಗಾಯತ್ರಿ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಮಾನವ ಜೀವನ ಜಾಗೃತಿ ಅಭಿಯಾನದ ಸತ್ಸಂಗ ಉದ್ಘಾಟಿಸಿ ಮಾತನಾಡಿದರು.
ಕರ್ತವ್ಯ ವಂಚನೆ ಸಲ್ಲ: ನಮ್ಮ ಕರ್ತವ್ಯದಲ್ಲಿ ವಂಚಿತರಾಗಬಾರದು. ಇಷ್ಟವಾದ ಕಾರ್ಯದಿಂದ ಪರಿಪೂರ್ಣತೆ ದೊರೆಯುತ್ತದೆ.
ಸತ್ಸಂಗದಿಂದ ಸ್ಪಷ್ಟ ಅರಿವು ಸಾಧ್ಯ, ಅರಿವಿನ ಅಭಾವವೇ ದುಃಖಕ್ಕೆ ಕಾರಣ, ಪೂರ್ವದಲ್ಲಿ ಮಾಡಿದ ಕರ್ಮಾನುಸಾರ ಸುಖ ದುಃಖ ನಿರ್ಧಾರವಾಗುತ್ತದೆ, ದುಃಖವನ್ನು ಪೂರ್ತಿಯಾಗಿ ಹೋಗಲಾಡಿಸಲು ಆಗುವುದಿಲ್ಲ, ಪ್ರತಿಯೊಬ್ಬರಿಗೂ ಸಮಸ್ಯೆಗಳು ಇದ್ದೇ ಇರುತ್ತದೆ ಎಂದವರು ತಿಳಿಸಿದರು.
ಧ್ಯಾನ ಎಂದರೆ ಏಕಾಗ್ರತೆಯ ಕಲೆ, ಧ್ಯಾನದಿಂದ ಅಭಿವ್ಯಕ್ತಿ ಸಾಮರ್ಥ್ಯ ನೆನಪಿನ ಮತ್ತು ಗ್ರಹಣ ಶಕ್ತಿ ಹೆಚ್ಚುತ್ತದೆ. ಪೋಷಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಹೇಳಿಕೊಡಬೇಕು. ಭಗವಂತನಿಂದ ಪಕ್ಷಪಾತ ನಡೆಯದೇ ಎಲ್ಲರನ್ನೂ ಸಮನಾಗಿ ಕಾಣುತ್ತಾನೆ ಎಂದರು.
ಶ್ರೀಮಾತಾ ಗಾಯತ್ರಿ ಪ್ರತಿಷ್ಠಾನದ ಗೌರವಾಧ್ಯಕ್ಷ ವೇ.ಬ್ರ.ಶ್ರೀ ಕೆ.ಟಿ. ಲಕ್ಷ್ಮೀನಾರಾಯಣ ಭಟ್ ಮಾತನಾಡಿ, ಮಾನವ ಧರ್ಮ ಅತ್ಯಂತ ಶ್ರೇಷ್ಠವಾದುದು, ಒಳ್ಳೆಯ ಸಂಸ್ಕಾರ ರೂಢಿಸಿಕೊಳ್ಳಬೇಕು. ಧರ್ಮದ ಜೊತೆಯಲ್ಲೇ ತೆಗೆದುಕೊಂಡು ಹೋಗಬೇಕು ಎಂದರು.
ವಿಶೇಷ ಸಂದರ್ಭ: ಹರಿಹರಪುರ ಶ್ರೀಮಠದ ರಘುನಾಥ ಶಾಸ್ತ್ರಿ ಮಾತನಾಡಿ, ಇದೊಂದು ವಿಶೇಷ ಸಂದರ್ಭ. ಭಾರತ ದೇಶ ವಿಶಿಷ್ಟಪೂರ್ಣವಾದುದು, ಸರ್ವವನ್ನೂ ಪರಿತ್ಯಾಗ ಮಾಡುವಂತಹ ವ್ಯಕ್ತಿಗಳಿದ್ದಾರೆ, ಸನಾತನ ಧರ್ಮದ ಅಂತಸತ್ವವನ್ನು ಬೋಧಿಸಬೇಕು, ಶ್ರೀಶಂಕರರು ಕಾಲಿಟ್ಟ ಕಡೆಯಲ್ಲೆಲ್ಲಾ ಒಂೊದಂದು ವಿಶೇಷ ನಡೆದಿದೆ ಎಂದರು. ಭಾಮಾ ಸುಬ್ರಹ್ಮಣ್ಯ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್, ಸಮಿತಿ ಸದಸ್ಯರು, ಶ್ರೀವತ್ಸ ಭಜನಾ ಮಂಡಳಿ ಸದಸ್ಯರು, ಶ್ರೀಮಾತಾ ಗಾಯತ್ರಿ ಪ್ರತಿಷ್ಠಾನದ ಅಧ್ಯಕ್ಷರು ಬಿ.ಎಸ್. ಭಗವಾನ್, ಪ್ರತಿಷ್ಠಾನದ ಸದಸ್ಯರು ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಗಣಪತಿ ದೇವಸ್ಥಾನದ ಬಳಿ ಪೂರ್ಣಕುಂಭ ಸ್ವಾಗತ ನೀಡಿ ಶ್ರೀಗಳನ್ನು ಸ್ವಾಗತಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

