ಚಿತ್ರದುರ್ಗ

ಕಾಗಿನೆಲೆ ಶಾಖಾ ಪೀಠದ ದಶಮಾನೋತ್ಸವ

Published On :

ಹೊಸದುರ್ಗ: ತಾಲೂಕಿನ ಕೆಲ್ಲೋಡು ಸಮೀಪದ ವೇದಾವತಿ ನದಿ ತಟದಲ್ಲಿರುವ ಬೆಂಗಳೂರು ವಿಭಾಗದ ಕಾಗಿನೆಲೆ ಮಹಾ ಸಂಸ್ಥಾನ ಹೊಸದುರ್ಗ ಪೀಠದ ದಶಮಾನೋತ್ಸವ ಸಮಾರಂಭವನ್ನು ಫೆ 13 ರಿಂದ 15ರವರೆಗೆ ಆಯೋಜಿಸಲಾಗಿದೆ.
 ಕಾಗಿನೆಲೆ ಮಹಾ ಸಂಸ್ಥಾನದ ಬೆಂಗಳೂರು ವಿಭಾಗದ ಶಾಖಾ ಮಠದ ಈಶ್ವರಾನಂದಪುರಿ ಶ್ರೀ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಫೆ.13 ರಂದು ಕಾಗಿನೆಲೆ ಕ್ಷೇತ್ರದ ನಿರಂಜನಾನಂದಪುರಿ ಶ್ರೀ ಸಮ್ಮುಖದಲ್ಲಿ ಧರ್ಮ ಸಭೆ ನಡೆಯಲಿದೆ. ಭಗೀರಥ ಪುರುಷೋತ್ತಮಾನಂದಪುರಿ ಶ್ರೀ, ಕುಂಚಟಿಗ ಶ್ರೀ ಶಾಂತವೀರ ಶ್ರೀ,  ಈಡಿಗ ರೇಣುಕಾನಂದ ಶ್ರೀ, ಮಹಾಲಕ್ಷ್ಮೀ ಪೀಠದ ಜ್ಞಾನಾನಂದಪುರಿ ಶ್ರೀ, ತಮ್ಮಡಿಹಳ್ಳೀ ಶ್ರೀ, ಕುಪ್ಪೂರು ಶ್ರೀ, ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ, ಬಸವನಾಗಿದೇವ ಶ್ರೀ, ಸಾನ್ನಿಧ್ಯ ವಹಿಸಲಿದ್ದಾರೆ.
ಡಿಸಿಎಂ ಉದ್ಘಾಟನೆ: ಧರ್ಮಸಭೆಯನ್ನು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಸಚಿವ ವರ್ತೂರು ಪ್ರಕಾಶ್, ಮಾಜಿ ಸಚಿವ ವಿಜಯಶಂಕರ್, ರಘುನಾಥರಾವ್ ಮಲ್ಕಾಪುರೆ ಭಾಗವಹಿಸಲಿದ್ದಾರೆ. ಅಂದು ಸಂಜೆ ಭರತನಾಟ್ಯ, ಕೀರ್ತನ, ಗಾಯನ, ವೀಣಾ ವಾದನ ಕಾರ್ಯಕ್ರಮ ಏರ್ಪಡಿಸಲಾಗಿದೆ.
 ಫೆ.14 ರಂದು ಕನಕ ಮಹಿಳಾ ಸಮಾವೇಶ ಏರ್ಪಡಿಸಲಾಗಿದ್ದು, ಡಾ. ಶಿವಮೂರ್ತಿ ಮುರುಘಾ ಶರಣರು, ಕಬೀರಾನಂದಾಶ್ರಮದ ಶಿವಲಿಂಗಾನಂದ ಶ್ರೀ, ಮಡಿವಾಳ ಮಾಚಿದೇವ ಶ್ರೀ, ಭೋವಿಗುರು ಪೀಠದ ಇಮ್ಮಡಿ ಸಿದ್ಧರಾಮ ಶ್ರೀ, ಮಾದಾರ ಚನ್ನಯ್ಯ ಶ್ರೀ, ಬಸವಪ್ರಭು ಕೇತೇಶ್ವರ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ.
  ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚರಿತ್ರೆ ಮತ್ತು ಮಹಿಳೆ ಕುರಿತು ಪ್ರಾಧ್ಯಾಪಕಿ ಮಲ್ಲಿಕಾ ಘಂಟಿ ಉಪನ್ಯಾಸ ನೀಡಲಿದ್ದಾರೆ. ಶಾಸಕ ಸುರೇಶ್ ಬಾಬು, ಡಾ. ಹುಲಿ ನಾಯ್ಕರ್, ಗಾಯತ್ರಿ ಶಾಂತೇಗೌಡ, ನಾಗಣ್ಣ, ಸಮಾಜದ ಮುಖಂಡರುಗಳು ಭಾಗವಹಿಸಲಿದ್ದಾರೆ.
ದಶಮಾನೋತ್ಸವ: ದಶಮಾನೋತ್ಸವ ಸಂಭ್ರಮವನ್ನು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಕ್ಯಾಲೆಂಡರ್ ಬಿಡುಗಡೆಯನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ. ಪರಮೇಶ್ವರ್ ನೆರವೇರಿಸಲಿದ್ದಾರೆ ಎಂದು ಕಾಗಿನೆಲೆ ಮಹಾಸಂಸ್ಥಾನದ ಆಡಳಿತಾಧಿಕಾರಿ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.