ಚಿತ್ರದುರ್ಗ

ವಿವಿಧ ಸಮುದಾಯ ಭವನಕ್ಕೆ ನಿವೇಶನ: ಗೂಳಿಹಟ್ಟಿ

Published On :

ಹೊಸದುರ್ಗ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸರಕಾರದಿಂದ ವಿವಿಧ ಸಮಾಜಗಳ ಸಮುದಾಯ ಭವನಕ್ಕೆ ಹಣ ಬಿಡುಗಡೆಯಾಗಿದ್ದು, ನ್ಛಿಜ್ಗಣಕ್ಕೆ ಅಗತ್ಯವಾದ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ತಿಳಿಸಿದರು.
ಪಟ್ಟಣದ ಶಾಂತಿನಗರದಲ್ಲಿ ಹರಿಜನ ಸಮಾಜದ ಸಮುದಾಯ ಭವನಕ್ಕೆ ನೀಡಿರುವ ನಿವೇಶನದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ, ಪಟ್ಟಣದಲ್ಲಿ ಬಾಬುಜಗಜೀವನ ರಾಂ ಸಮುದಾಯ ಭವನಕ್ಕೆ ರು.1 ಕೋಟಿ, ಭೋವಿ ಸಮಾಜದ ಸಮುದಾಯ ಭವನಕ್ಕೆ ರು.1 ಕೋಟಿ, ಲಂಬಾಣಿ ಸಮಾಜಕ್ಕೆ 1 ಕೋಟಿ, ಯಾದವ ಸಮಾಜಕ್ಕೆ 50  ಲಕ್ಷ, ಉಣ್ಣೆ ನೇಕಾರರ ಸಮುದಾಯ ಭವನಕ್ಕೆ 50 ಲಕ್ಷ, ಸರ್ಪ ಒಕ್ಕಲಿಗರ ಸಮುದಾಯ ಭವನಕ್ಕೆ 25 ಲಕ್ಷ, ಭಗೀರಥ ಸಮುದಾಯ ಭವನಕ್ಕೆ 1 ಕೋಟಿ ಸರಕಾರದಿಂದ ಹಣ ಬಿಡುಗಡೆಯಾಗಿದೆ. ಅಗತ್ಯವಿರುವ ನಿವೇಶನಗಳನ್ನು ಶಾಂತಿ ನಗರದಲ್ಲಿ ನೀಡಲಾಗಿದೆ ಎಂದರು.
ಜೈನ ಸಮಾಜ, ಸಾಧು ಸದ್ಧರ್ಮ ಸಮಾಜ, ಮತ್ತಿತರೆ ಸಮಾಜಗಳಿಗೆ ನಿವೇಶನಗಳನ್ನು ನೀಡಲಾಗಿದೆ. ದೇವಾಂಗ ಸಮಾಜಕ್ಕೆ 2 ಕೋಟಿ ಸಮುದಾಯ ಭವನ, ದೈವಜ್ಞ ಸಮಾಜಕ್ಕೆ 25 ಲಕ್ಷ, ಕುಂಚಟಿಗ ಸಮಾಜಕ್ಕೆ 50 ಲಕ್ಷ ನೀಡಲಾಗಿದೆ. ಆ ಸಮಾಜಗಳಿಗೆ ನಿವೇಶನ ಲಭ್ಯವಿರುವ ಕಾರಣ ನಿರ್ಮಾಣ ಕಾರ್ಯ ಆರಂಭಗೊಳ್ಳಲಿವೆ ಎಂದರು.
ಪಟ್ಟಣದಲ್ಲಿ ಖಾಲಿ ಇರುವ ಆಶ್ರಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಸೂಚಿಸಲಾಗಿದ್ದು, ಶಾಂತಿ ನಗರದ ಪ್ರಮುಖ ರಸ್ತೆಯಲ್ಲಿರುವ ಆಶ್ರಯ ವ್ಯಾಪ್ತಿಯ ಮನೆಗಳನ್ನು ಹರಾಜು ಮಾಡಲು ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು. ಎಸ್.ಆರ್. ದೇವೀರಪ್ಪ, ಪುರಸಭಾ ಸದಸ್ಯ ಶೀತಲ್ ಕುಮಾರ್, ಕಾಂಚನ್ ಕುಮಾರ್, ಮಲ್ಲಿಕಾರ್ಜುನ್, ದೊಡ್ಡಘಟ್ಟದ ತಿಪ್ಪಣ್ಣ, ಕೈನಡು ಚಂದ್ರಪ್ಪ, ರಂಗಪ್ಪ ದಿಬ್ಬ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.