ಚಿತ್ರದುರ್ಗ

ಕನಕ ಗುರು ಪೀಠದ ದಶಮಾನೋತ್ಸವ

Published On :

ಹೊಸದುರ್ಗ: ತಾಲೂಕಿನ ಕೆಲ್ಲೋಡು ಸಮೀಪದ ವೇದಾವತಿ ನದಿ ತಟದಲ್ಲಿರುವ ಬೆಂಗಳೂರು ವಿಭಾಗದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಹೊಸದುರ್ಗ ಪೀಠದ ದಶಮಾನೋತ್ಸವ ಸಮಾರಂಭದಲ್ಲಿ ಫೆ.14 ರಂದು ಕನಕ ಮಹಿಳಾ ಸಮಾವೇಶ ಏರ್ಪಡಿಸಲಾಗಿದೆ.
ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು, ಶ್ರೀ ಶಿವಲಿಂಗಾನಂದ ಶ್ರೀಗಳು, ಮಾಚಿದೇವ ಶ್ರೀಗಳು, ಇಮ್ಮಡಿ ಸಿದ್ಧರಾಮ ಶ್ರೀಗಳು, ಮಾದಾರ ಚನ್ನಯ್ಯ ಶ್ರೀಗಳು, ಬಸವಪ್ರಭು ಕೇತೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಸಮಾರಂಭವನ್ನು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಉದ್ಘಾಟಿಲಿದ್ದಾರೆ. ಚರಿತ್ರೆ ಮತ್ತು ಮಹಿಳೆ ಕುರಿತು ಪ್ರಾಧ್ಯಾಪಕಿ ಮಲ್ಲಿಕಾಘಂಟಿ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಶಾಸಕರಾದ ಸುರೇಶ್ ಬಾಬು, ಡಾ. ಹುಲಿನಾಯ್ಕರ್, ಗಾಯತ್ರಿ ಶಾಂತೇಗೌಡ, ಸಂಪಾದಕ ನಾಗಣ್ಣ, ಸಮಾಜದ ಮುಖಂಡರುಗಳು ಭಾಗವಹಿಸಲಿದ್ದಾರೆ.
ಚಿಂತನಾ ಗೋಷ್ಠಿಯಲ್ಲಿ ತಿಂಥಿಣಿ ಶಾಖಾ ಮಠದ ಶ್ರೀ ಸಿದ್ಧರಾಮಾನಂದಪುರಿಸ್ವಾಮಿ, ಯಾದವ ಗುರು ಪೀಠದ ಶ್ರೀ ಯಾದವಶ್ರೀಗಳ ಸಾನ್ನಿಧ್ಯ ವಹಿಸುವರು. ಮಾಜಿ ಸಚಿವೆ ಲಲಿತಾ ನಾಯಕ್ ಅಧ್ಯಕ್ಷತೆಯಲ್ಲಿ ಹಿಂದುಳಿದ ಮಠಗಳ ಸಾಮಾಜಿಕ ಸವಾಲುಗಳ ಕುರಿತು ಹಂಪಿ ಕನ್ನಡ ವಿವಿಯ ಡಾ.ಪುಟ್ಟಯ್ಯ, ಪತ್ರಕರ್ತ ಲಕ್ಷ್ಮಣ್ ಹೂಗಾರ್ ಜಾತಿ ಸಮಾನತೆ ಮತ್ತು ಮಠಗಳು ಕುರಿತು ಮಾತನಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.