ಚಿತ್ರದುರ್ಗ

ದೇವಾಲಯ ಉದ್ಘಾಟನೆ

Published On :

ಚಳ್ಳಕೆರೆ: ಗ್ರಾಮೀಣ ಭಾಗದ ಸೊಗಡು ಸಾರುವ ಜಾತ್ರೆಗಳಲ್ಲಿ ಒಂದು ಎನ್ನುವಂತೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಕಾಟಲಿಂಗೇಶ್ವರ ದೇವಾಲಯದ ಜೀರ್ಣೋದ್ದಾರ ಸಮಿತಿಯಿಂದ ನೂತನ ಕಳಸ ಸ್ಥಾಪನೆ ಮಾಡಲಾಯಿತು.
ನಂತರ ಗಣಪತಿ ಪೂಜೆ, ಗಂಗಾಪೂಜೆ, ವಾಸ್ತುಪೂಜೆ, ನವಗ್ರಹ ಪೂಜೆ, ಪಂಚಕಳಸ, ರುದ್ರಾಭಿಷೇಕ, ಗಣಹೋಮ, ರುದ್ರಹೋಮ, ನವಗ್ರಹಹೋಮ, ಆದಿವಾಸಿಗಳ ಶಿಖರ ಪ್ರತಿಷ್ಠಾಪನಾ ಹೋಮ, ಮೂಲ ವಿಗ್ರಹಕ್ಕೆ ಅಭಿಷೇಕ,  ಶಿಖರ ಪ್ರತಿಷ್ಠಾಪನೆ, ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಬುಧವಾರ ಬೆಳಿಗ್ಗೆ 11.30ಕ್ಕೆ ಕಾಟಂಲಿಂಗೇಶ್ವರಸ್ವಾಮಿಯ ನೂತನ ದೇವಾಲಯ ಉದ್ಘಾಟನೆ ಮತ್ತು ಕಳಸ ಸ್ಥಾಪನಾ ಮಹೋತ್ಸವ ನೆರವೇರಿಸಲಾಯಿತು.
ಆಗಮಿಸಿದ ಭಕ್ತರು: ದೇವಾಲಯದ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯ ಹುಳಿಯಾರು, ಚಿಕ್ಕನಾಯ್ಕನಹಳ್ಳಿ ತಾಲೂಕುಗಳಿಂದ 9 ದೇವರು ಆಗಮಿಸಿದ್ದವು. ಸಿ.ಬಿ.ಕೆರೆ ಕರಿಯಮ್ಮದೇವಿ, ಮೇಲನಹಳ್ಳಿ ಗ್ರಾಮದ ಆಂಜನೇಯಸ್ವಾಮಿ, ಭೂತರಾಯಸ್ವಾಮಿ, ನಾಗಸಮುದ್ರ ಗ್ರಾಮದ ಕೆಂಪಮ್ಮದೇವಿ, ಯರೇಹಳ್ಳಿ ಕೆಂಪಮ್ಮದೇವಿ, ಕಾಮಲಾಪುರದ ಆಚಿಂಜನೇಯಸ್ವಾಮಿ, ಕರಿಯಮ್ಮ, ಗೋಪನಹಳ್ಳಿ ಗ್ರಾಮದ ಮೈಲಾರಲಿಂಗೇಶ್ವರ, ರಂಗನಾಥಸ್ವಾಮಿ ದೇವರ ಸಮ್ಮುಖದಲ್ಲಿ ತುಮಕೂರು, ಚಿತ್ರದುರ್ಗ, ಹಿರಿಯೂರು, ಚಿಕ್ಕನಾಯ್ಕನಹಳ್ಳಿ, ಹುಳಿಯಾರು, ಹೊಸದುರ್ಗ ಹಾಗೂ ವಿವಿಧ ಗ್ರಾಮಗಳಿಂದ ಭಕ್ತರು ಅಗಮಿಸಿದ್ದರು.
ಸಮಿತಿಯ ಅಧ್ಯಕ್ಷ ನಿಂಗಪ್ಪ, ಗೌರವ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಸಿದ್ದಲಿಂಗಪ್ಪ, ಮುರುಳಿ, ಮಂಜುನಾಥ, ಕೆಂಪನಿಂಗಯ್ಯ, ಮುನಿಯಪ್ಪ, ಸುವರ್ಣಮ್ಮ, ಪರಮೇಶ್, ನಾಗೇಂದ್ರಯ್ಯ, ರಾಮಲಿಂಗಪ್ಪ, ರುದ್ರಣ್ಣ, ಮೋಹನ್, ಶಿವಣ್ಣ, ಲೋಕೇಶ್ ನಾಯಕ, ಜೆಡಿಎಸ್ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಭೂಮಿದಾನಿಗಳಾದ ಪುಷ್ಪಲತಾ ಚಂದ್ರಣ್ಣ, ಪಟ್ಟೀರಮ್ಮ ಚಂದ್ರಣ್ಣ ಜಿ. ನವೀನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.