ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಪ್ರಕಟ
ಚಿತ್ರದುರ್ಗ: ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾದರಿ ನೀತಿ ಸಂಹಿತೆಯು ಫೆ.15 ರಿಂದಲೇ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ಪಿ. ಇಕ್ಕೇರಿ ತಿಳಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಚುನಾವಣಾ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.
ನಾಮಪತ್ರ ಸಲ್ಲಿಕೆಗೆ ಫೆ.23 ಕೊನೆಯ ದಿನವಾಗಿರುತ್ತದೆ. ಫೆ.25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಫೆ.27 ಕೊನೆಯ ದಿನವಾಗಿರುತ್ತದೆ. ಮಾ.7 ಮತದಾನ ನಡೆಯಲಿದ್ದು, ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಾ.11ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.
ಫ್ಲೆಕ್ಸ್ ಬ್ಯಾನರ್ ತೆರವಿಗೆ ಸೂಚನೆ: ಚಿತ್ರದುರ್ಗ ನಗರಸಭೆ, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ಪುರಸಭೆ ಹಾಗೂ ಮೊಳಕಾಲ್ಮುರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯುತ್ತಿದೆ. ಈ ನಗರ, ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಮತ್ತು ರಾಜಕೀಯ ಪಕ್ಷಗಳ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಕಬಾರದು ಮತ್ತು ಈಗಾಗಲೇ ಹಾಕಿರುವ ಫ್ಲೆಕ್ಸ್ಗಳನ್ನು ತಕ್ಷಣ ತೆರವು ಮಾಡಲು ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು. ಚಿತ್ರದುರ್ಗ ನಗರದ ಹೊಸ ನಗರಸಭೆ ಕಟ್ಟಡದಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಉಳಿದಂತೆ ಎಲ್ಲಾ ತಾಲೂಕುಗಳಲ್ಲಿ ಆಯಾ ತಾಲೂಕು ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ.
ಅನುಮತಿ ಕಡ್ಡಾಯ: ಚುನಾವಣಾಧಿಕಾರಿಗಳು ಫೆ.16ರಿಂದ ನಾಮಪತ್ರ ಸ್ವೀಕರಿಸಲಿದ್ದು, ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಚುನಾವಣಾ ಪ್ರಚಾರಕ್ಕೆ ಬಳಸುವ ವಾಹನದ ಅನುಮತಿಯನ್ನು ಮುಂಚಿತವಾಗಿ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಮೀಸಲು ಎಲ್ಲಿ, ಎಷ್ಟು? ಜಿಲ್ಲೆಯಲ್ಲಿ ಚಿತ್ರದುರ್ಗ ನಗರಸಭೆ 34 ವಾರ್ಡ್ಗಳನ್ನು ಹೊಂದಿದೆ. ಚಳ್ಳಕೆರೆ ಮತ್ತು ಹಿರಿಯೂರು ಪುರಸಭೆಗಳು ತಲಾ 27 ಸದಸ್ಯರನ್ನು ಹೊಂದಿದ್ದು, ಹೊಸದುರ್ಗ ಪುರಸಭೆ 23 ಸ್ಥಾನಗಳನ್ನು ಪಡೆದಿದೆ. ಹೊಳಲ್ಕೆರೆ ಮತ್ತು ಮೊಳಕಾಲ್ಮುರು ಪಟ್ಟಣ ಪಂಚಾಯಿತಿಗಳು ತಲಾ 15 ಸ್ಥಾನಗಳ ಬಲ ಪಡೆದಿವೆ.
ಜಿಪಂ ಸಿಇಓ ಕೆ.ಎಂ. ನಾರಾಯಣಸ್ವಾಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಾಂತರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೀಸಲು ವಿವರ
ವಾರ್ಡ್ ಸಂಖ್ಯೆ 1 - ಸಾಮಾನ್ಯ, 2 - ಸಾಮಾನ್ಯ, 3 - ಸಾಮಾನ್ಯ, 4 - ಹಿಂದುಳಿದ ವರ್ಗ ಎ, 5 - ಹಿಂದುಳಿದ ವರ್ಗ ಎ, 6 - ಹಿಂದುಳಿದ ವರ್ಗ ಎ, 7 - ಸಾಮಾನ್ಯ, 8 - ಹಿಂದುಳಿದ ವರ್ಗ ಬಿ, 9 - ಸಾಮಾನ್ಯ, 10 - ಹಿಂದುಳಿದ ವರ್ಗ ಎ ಮಹಿಳೆ, 11 - ಸಾಮಾನ್ಯ ಮಹಿಳೆ, 12 - ಸಾಮಾನ್ಯ ಮಹಿಳೆ, 13 - ಹಿಂದುಳಿದ ವರ್ಗ ಎ ಮಹಿಳೆ, 14 - ಹಿಂದುಳಿದ ವರ್ಗ ಎ ಮಹಿಳೆ, 15 - ಪ.ಜಾ, 16 - ಪ.ಪಂ, 17 - ಪ.ಜಾ ಮಹಿಳೆ,
18 - ಸಾಮಾನ್ಯ ಮಹಿಳೆ, 19 - ಹಿಂದುಳಿದ ವರ್ಗ ಬಿ, 20 - ಹಿಂದುಳಿದ ವರ್ಗ ಎ, 21 - ಸಾಮಾನ್ಯ, 22 - ಸಾಮಾನ್ಯ, 23 - ಸಾಮಾನ್ಯ, 24 - ಸಾಮಾನ್ಯ, 25 - ಪ.ಜಾ, 26 - ಹಿಂ.ವ. ಎ, 27 - ಸಾಮಾನ್ಯ, 28 - ಸಾಮಾನ್ಯ, 29 - ಸಾ. ಮಹಿಳೆ, 30 - ಪ.ಪಂ, 31 - ಪ.ಜಾ, 32 - ಪ.ಪಂ ಮಹಿಳೆ, 33 - ಪರಿಶಿಷ್ಟ ಜಾತಿ ಮಹಿಳೆ, 34 - ಹಿಂದುಳಿದ ವರ್ಗ ಎ, 35 - ಹಿಂದುಳಿದ ವರ್ಗ ಬಿ ಮಹಿಳೆ.
ವಾರ್ಡ್ ಸಂಖ್ಯೆ 1 - ಪ.ಪಂ, 2 - ಪ.ಪಂ, 3 - ಸಾಮಾನ್ಯ ಮಹಿಳೆ, 4 - ಸಾಮಾನ್ಯ, 5 - ಪ.ಪಂ, 6 - ಪ.ಪಂ ಮಹಿಳೆ, 7 - ಪ.ಪಂ ಮಹಿಳೆ, 8 - ಹಿಂದುಳಿದ ವರ್ಗ ಎ, 9 - ಹಿಂದುಳಿದ ವರ್ಗ ಎ, 10 - ಪ.ಪಂ ಮಹಿಳೆ, 11 - ಸಾಮಾನ್ಯ, 12 - ಸಾಮಾನ್ಯ ಮಹಿಳೆ, 13 - ಸಾಮಾನ್ಯ, 14 - ಹಿಂದುಳಿದ ವರ್ಗ ಎ ಮಹಿಳೆ, 15 - ಪ.ಜಾ, 16 - ಸಾಮಾನ್ಯ, 17 - ಹಿಂದುಳಿದ ವರ್ಗ ಎ, 18 - ಪ.ಜಾ ಮಹಿಳೆ, 19 - ಹಿಂದುಳಿದ ವರ್ಗ ಬಿ ಮಹಿಳೆ, 20 - ಹಿಂದುಳಿದ ವರ್ಗ ಬಿ, 21 - ಸಾಮಾನ್ಯ, 22 - ಪ.ಜಾ, 23 - ಹಿಂದುಳಿದ ವರ್ಗ ಎ, 24 - ಹಿಂದುಳಿದ ವರ್ಗ ಎ ಮಹಿಳೆ, 25 - ಪರಿಶಿಷ್ಟ ಪಂಗಡ, 26 - ಪ.ಪಂ, 27 - ಹಿಂದುಳಿದ ವರ್ಗ ಎ.
ವಾರ್ಡ್ ಸಂಖ್ಯೆ 1 - ಸಾಮಾನ್ಯ, 2 - ಪ.ಜಾ ಮಹಿಳೆ, 3 - ಪ.ಜಾ, 4-ಪ.ಜಾ ಮಹಿಳೆ, 5 - ಸಾಮಾನ್ಯ, 6 - ಸಾಮಾನ್ಯ ಮಹಿಳೆ, 7 - ಸಾಮಾನ್ಯ ಮಹಿಳೆ, 8 - ಹಿಂದುಳಿದ ವರ್ಗ ಎ ಮಹಿಳೆ, 9 - ಹಿಂದುಳಿದ ವರ್ಗ ಎ ಮಹಿಳೆ, 10 - ಹಿಂದುಳಿದ ವರ್ಗ ಎ, 11 - ಹಿಂ. ವ. ಎ, 12 - ಹಿಂದುಳಿದ ವರ್ಗ ಎ, 13 - ಸಾಮಾನ್ಯ, 14 - ಸಾಮಾನ್ಯ, 15 - ಪಜಾ, 16 - ಸಾಮಾನ್ಯ ಮಹಿಳೆ,
17- ಪ.ಜಾ, 18 - ಸಾಮಾನ್ಯ, 19 - ಹಿಂದುಳಿದ ವರ್ಗ ಎ ಮಹಿಳೆ, 20 - ಸಾಮಾನ್ಯ, 21 - ಸಾಮಾನ್ಯ ಮಹಿಳೆ, 22 - ಹಿಂ. ವ. ಎ, 23 - ಸಾಮಾನ್ಯ, 24 - ಪ.ಪಂ ಮಹಿಳೆ, 25 - ಪ.ಪಂ, 26 - ಹಿಂದುಳಿದ ವರ್ಗ ಬಿ, 27 - ಹಿಂ. ವ. ಬಿ ಮಹಿಳೆ.
ವಾ.ಸಂ 1 - ಸಾಮಾನ್ಯ, 2 - ಸಾಮಾನ್ಯ, 3 - ಹಿಂದುಳಿದ ವರ್ಗ ಬಿ ಮಹಿಳೆ, 4 - ಹಿಂದುಳಿದ ವರ್ಗ ಎ, 5 - ಸಾಮಾನ್ಯ ಮಹಿಳೆ, 6 - ಸಾಮಾನ್ಯ, 7 - ಹಿಂದುಳಿದ ವರ್ಗ ಎ, 8 - ಪ.ಜಾ, 9 - ಹಿಂ. ವ. ಎ ಮಹಿಳೆ, 10 - ಹಿಂ. ವ. ಬಿ, 11 - ಹಿಂದುಳಿದ ವರ್ಗ ಎ, 12 - ಪ.ಜಾ, 13 - ಸಾಮಾನ್ಯ ಮಹಿಳೆ, 14 - ಸಾಮಾನ್ಯ, 15 - ಸಾಮಾನ್ಯ, 16 - ಹಿಂದುಳಿದ ವರ್ಗ ಎ ಮಹಿಳೆ, 17 - ಪ.ಜಾ ಮಹಿಳೆ, 18 - ಪ.ಪಂ ಮಹಿಳೆ, 19 - ಹಿಂದುಳಿದ ವರ್ಗ ಎ, 20 - ಸಾಮಾನ್ಯ, 21 - ಸಾಮಾನ್ಯ ಮಹಿಳೆ, 22 - ಸಾಮಾನ್ಯ, 23 - ಸಾಮಾನ್ಯ ಮಹಿಳೆ.
ವಾ.ಸಂ 1 - ಸಾಮಾನ್ಯ, 2 - ಸಾಮಾನ್ಯ, 3 - ಸಾಮಾನ್ಯ, 4 - ಸಾಮಾನ್ಯ ಮಹಿಳೆ, 5 - ಹಿಂದುಳಿದ ವರ್ಗ ಬಿ ಮಹಿಳೆ, 6 - ಸಾಮಾನ್ಯ ಮಹಿಳೆ, 7 - ಸಾಮಾನ್ಯ, 8 - ಹಿಂದುಳಿದ ವರ್ಗ ಎ ಮಹಿಳೆ, 9 - ಹಿಂದುಳಿದ ವರ್ಗ ಎ, 10 - ಪ.ಪಂ ಮಹಿಳೆ, 11 - ಸಾಮಾನ್ಯ, 12 - ಪ.ಜಾ ಮಹಿಳೆ, 13 - ಹಿಂ. ವ. ಎ, 14 - ಹಿಂ. ವ. ಎ, 15 - ಪ.ಜಾ.
ವಾ.ಸಂ 1 - ಹಿಂ. ವ. ಎ, 2 - ಪ.ಜಾ ಮಹಿಳೆ, 3 - ಪ.ಪಂ ಮಹಿಳೆ, 4 - ಸಾಮಾನ್ಯ, 5 - ಹಿಂ. ವ. ಎ, 6 - ಸಾ., 7 - ಸಾ., 8 - ಪ.ಪಂ, 9 - ಸಾ., 10 - ಹಿಂ. ವ. ಎ, 11 - ಪ.ಜಾ, 12 - ಹಿಂ. ವ. ಬಿ ಮಹಿಳೆ, 13 - ಹಿಂ. ವ. ಎ, ಮಹಿಳೆ, 14 - ಸಾ. ಮ., 15 - ಸಾಮಾನ್ಯ ಮಹಿಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

