ಚಿತ್ರದುರ್ಗ

'ಕಷ್ಟದಿಂದ ಪಾರಾಗಲು ಭಗವಂತನ ಸ್ಮರಿಸಿ'

Published On :

ಚಿತ್ರದುರ್ಗ: ಭಗವಂತನ ಸ್ಮರಣೆಯಿಂದ ಮಾತ್ರ ಕಾಲ, ಕರ್ಮ ಹಾಗೂ ಮಾಯೆಯಿಂದ ಪಾರಾಗಲು ಸಾಧ್ಯ ಎಂದು ಹುಬ್ಬಳ್ಳಿಯ ಶ್ರೀ ಸಿದ್ದರೂಢಾಶ್ರಮದ ಶ್ರೀರಮಾನಂದ ಸ್ವಾಮೀಜಿ ಹೇಳಿದರು.
ನಗರದ ಶ್ರೀಕಬೀರಾನಂದ ಮಠದಲ್ಲಿ ಹಮ್ಮಿಕೊಂಡಿರುವ 83ನೇ ಮಹಾ ಶಿವರಾತ್ರಿ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲ ಜಗತ್ ಭಕ್ಷಕ. ಕಾಲ ಎಲ್ಲವನ್ನು ನುಂಗಿ ಬಿಡುತ್ತದೆ. ಅದೇ ರೀತಿ ಮಾಹೆಯು ಕೂಡ. ಯಾರು ಮಾಯೆಗೆ ಒಳಗಾಗುತ್ತಾರೋ ಅವರು ಕ್ಷಣಾರ್ಧದಲ್ಲಿ ತಮ್ಮ ಜೀವನವನ್ನೇ ನಶ್ವರ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಇವೆಲ್ಲವುಗಳಿಂದ ಪಾರಾಗಬೇಕಾದರೆ ಭಗವಂತನ ಸ್ಮರಣೆಯನ್ನು ಮಾಡಬೇಕು ಎಂದರು.
ನಂಬಿಲ್ಲ ಕೆಟ್ಟವರಿಲ್ಲ: ಶ್ರೀಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀನಿಜಗುಣ ದೇವರು ಮಾತನಾಡಿ, ಪರಮಾತ್ಮನಲ್ಲಿ ಭಕ್ತಿ, ಸ್ಮರಣೆ ಮಾಡಿದಲ್ಲಿ ಯಮಧೂತನು ನಮ್ಮಿಂದ ದೂರ ಹೋಗುತ್ತಾನೆ. ಯಾಕೆಂದರೆ ಭಕ್ತಿಯಲ್ಲಿ ಅಂತಹ ಶಕ್ತಿ ಇದೆ. ನಂಬಿ ಬಂದಂತಹ ಭಕ್ತರನ್ನು ಭಗವಂತ ಎಂದಿಗೂ ಕೈಬಿಡುವುದಿಲ್ಲ ಎಂದು ಹೇಳಿದರು.
ಬೀದರ್‌ನ ಶ್ರೀಗುರುದೇವಾಶ್ರಮದ ಶ್ರೀಗಣೇಶಾನಂದ ಮಹಾರಾಜರು ಮಾತನಾಡಿ, ಯಾರ ಆತ್ಮದಲ್ಲಿ ಪರಮಾತ್ಮನಿಗೆ ಭಕ್ತಿ ಇರುವುದಿಲ್ಲವೋ ಅವನು ಪರಮಾತ್ಮನ ನಿಯಂತ್ರಣದಿಂದ ಹೊರಗಿರುತ್ತಾನೆ ಎಂದು ಹೇಳಿದ ಅವರು, ಪರಮಾತ್ಮನಲ್ಲಿ ಭಕ್ತಿ ಇದ್ದಲ್ಲಿ ಯಾವುದೇ ಕಾರ್ಯಗಳು ಸರಾಗವಾಗಿ ನಡೆಯುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋಸಾಯಿ ಭವಾನಿ ಪೀಠದ ಶ್ರೀಸರೇಶ್ವರಾನಂದ ಭಾರತಿ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀಗುಣನಾಥ ಸ್ವಾಮೀಜಿ, ಬಾಗಲಕೋಟೆ ಶ್ರೀಸಿದ್ದಾರೂಡಶ್ರಮದ ಶ್ರೀಮಾದವಾನಂದ ಸ್ವಾಮೀಜಿ, ನಗರಸಭೆ ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ, ವಾಣಿಜ್ಯೋದ್ಯಮಿ ಶಂಕರಮೂರ್ತಿ, ಡಾ.ಪಿ.ವಿ.ಶ್ರೀಧರಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.