ಚಿತ್ರದುರ್ಗ

ಇಂದು ಶಿವರಾತ್ರಿ

Published On :

ಶ್ರೀರಾಂಪುರ: ಇಲ್ಲಿನ ಐತಿಹಾಸಿಕ ಹಿನ್ನೆಲೆಯುಳ್ಳ 13ನೇ ಶತಮಾನದಲ್ಲಿ ಸ್ಥಾಪಿಸಲಾಗಿರುವ ಶ್ರೀ ಗಂಗಾಧರೇಶ್ವರ ದೇವಾಲಯದಲ್ಲಿ ಮಾ.10ರಂದು ಶಿವರಾತ್ರಿ ಪ್ರಯುಕ್ತ ವಿಶೇಷ  ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ ದೇವಾಲಯದಲ್ಲಿ ಅಭಿಷೇಕ ಪೂಜೆ ನಡೆಯಲಿದ್ದು, ಸಂಜೆ ರುದ್ರಾಭಿಷೇಕ, ಸಹಸ್ರ ದೀಪೋತ್ಸವ, ಭಜನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಧಾರ್ಮಿಕ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
ಇಂದು ಶಿವರಾತ್ರಿ
ವಿಶೇಷ ಪೂಜೆ
ಹೊಳಲ್ಕೆರೆ: ಪಟ್ಟಣದ ಹೊರವಲಯದಲ್ಲಿರುವ ಹಳ್ಳದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಾ.10 ರಂದು ಭಾನುವಾರ ರಾತ್ರಿ ಸ್ವಾಮಿಗೆ ಅಭಿಷೇಕ 101 ಬಿಲ್ವಾರ್ಚನೆಯ ವಿಶೇಷ ಪೂಜೆ ಮತ್ತು ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ನಡೆಯಲಿದೆ.   
ಸೋಮವಾರ ಬೆಳಗ್ಗೆ 10 ಗಂಟೆಗೆ ಹಳ್ಳದ ವೀರಭದ್ರಸ್ವಾಮಿಯ ಕೆಂಡದಾರ್ಚನೆ ವಿಜೃಭಣೆಯಿಂದ ಜರುಗಲಿದೆ. ಭಕ್ತರಿಗೆ ಅನ್ನ ಸಂತರ್ಪಣೆಯನ್ನೂ ಏರ್ಪಡಿಸಲಾಗಿದ್ದು, ಭಕ್ತರು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಅಭಿವೃದ್ಧಿ ಸಮಿತಿಯವರು ತಿಳಿಸಿದ್ದಾರೆ.
ಇಂದು 14ನೇ
ವಾರ್ಷಿಕೋತ್ಸವ
ಮೊಳಕಾಲ್ಮುರು: ತಾಲೂಕಿನ ತಮ್ಮೇನಹಳ್ಳಿ ಗ್ರಾಮದಲ್ಲಿ 10 ರಂದು ಶ್ರೀಜಂಬಣ್ಣ ತಾತಾ ಹಾಗೂ ಜಡೀ ತಾತಾನವರ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ 14ನೇ ವರ್ಷದ ವಾರ್ಷಿಕೋತ್ಸವ ಜರುಗಲಿದೆ.  
ಬೆಳಿಗ್ಗೆ 10 ಗಂಟೆಗೆ ಜಡೀ ತಾತಾನವರ ಗರ್ಭಗುಡಿ ಗೋಪುರ ಉದ್ಘಾಟನೆ ಬೆಳಿಗ್ಗೆ 9 ಗಂಟೆಗೆ ಕಳಶ ಸ್ಥಾಪನೆ ಸಂಜೆ 6 ಗಂಟೆಗೆ ಜಂಬಣ್ಣ ತಾತಾ ಹಾಗೂ ಶ್ರೀ ಜಡಿ ತಾತಾನವರ ಕುಂಬಾಭೀಷೆಕ ಉತ್ಸವ ರಾತ್ರಿ 7 ಗಂಟೆಗೆ ಶ್ರೀ ವೆಂಕಟೇಶ ತಾತಾನವರ ಮಹಾರಾಜ ಕುದುರೆಗಳೊಂದಿಗೆ ಅಲಂಕಾರಿಕ ರಥದ ಮೆರವಣಿಗೆ ಜರುಗಲಿದೆ. ಅದೇ ದಿನ ರಾತ್ರಿ ಮಹಾಶಿವರಾತ್ರಿ ಜಾಗರಣೆ, 11ರ ಸೋಮವಾರ ತಾತಾನವರ ಮಹಾ ದಾಸೋಹ ಕಾರ್ಯಕ್ರಮ ಜರುಗಲಿದೆ ಎಂದು ಭಕ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.