ಗ್ಯಾಸ್ ಏಜೆನ್ಸಿ ಮಾಲೀಕನ ಬಂಧನ
ಕ.ಪ್ರ.ವಾರ್ತೆ ಚಳ್ಳಕೆರೆ ಮಾ.9
ಕಳೆದ 30 ವರ್ಷಗಳಿಂದ ತಾಲೂಕಿನ ಗ್ರಾಹಕರಿಗೆ ಗ್ಯಾಸ್ ವಿತರಿಸುತ್ತಿದ್ದ ಇಲ್ಲಿನ ಕೈಲಾಸ್ ಗ್ಯಾಸ್ ಮಾಲೀಕ ಜಿ.ಎಸ್. ಶಂಕರಲಿಂಗಯ್ಯರನ್ನು ತಹಸೀಲ್ದಾರ್ರವರ ದೂರಿನ ಮೇಲೆ ಶನಿವಾರ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಇವರ ವಿರುದ್ಧ ಸಾರ್ವಜನಿಕರು ಅನೇಕ ಬಾರಿ ದೂರು ನೀಡಿದ್ದರು. ಇವರು ನೀಡುವ ಸೇವೆ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಒಂದೇ ಸಮನೆ ದೂರುಗಳು ಬರುತ್ತಿದ್ದವು. ಇವುಗಳನೆಲ್ಲಾ ಪರಿಶೀಲಿಸಿ ತಿದ್ದಿಕೊಳ್ಳುವಂತೆ ಗ್ಯಾಸ್ ಮಾಲೀಕರಿಗೆ ಸಾಕಷ್ಟು ಅವಕಾಶ ನಿಡಿದ್ದರು ಮತ್ತೆ ಸಾರ್ವಜನಿಕರ ಮೇಲೆ ಗ್ಯಾಸ್ ಏಜನ್ಸಿ ಮಾಲೀಕರು ಹೌಹಾರುವ ಪ್ರಕ್ರಿಯೆ ಮುಂದುವರೆಸುತ್ತಲೆ ಬಂದಿದ್ದರು. ಕಳೆದ ಎರಡು ದಿನಗಳ ಹಿಂದೆ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ಡಿ.ಕೆ. ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದರು.
ಆದರೂ ತಹಸೀಲ್ದಾರ್ರವರ ಸೂಚನೆ ಉಲ್ಲಂಘಿಸಿ ರಜೆ ಮುಂದುವರೆಸಿದ್ದರು. ಇದರಿಂದ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ಹಿನ್ನಲೆಯಲ್ಲಿ ಈತನ ವಿರುದ್ಧ ತಹಸೀಲ್ದಾರ್ ರವರು ಪೊಲೀಸರಿಗೆ ದೂರು ನೀಡಿದ್ದರು.
ಶನಿವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿದ ಉಪನಿರೀಕ್ಷಕ ಬಿ.ಪಂಪಾಪತಿ ಮತ್ತು ಡಿ.ಜಿ. ಶ್ರೀನಿವಾಸ್ ಠಾಣೆಗೆ ಬಂದು ವಿವರ ನೀಡುವಂತೆ ಮನವಿ ಮಾಡಿದರು. ಇವರ ಮೇಲೆ ಶಂಕರಲಿಂಗಯ್ಯ ಮತ್ತೆ ಹಳೆದಾಟಿಯಲ್ಲೆ ಉದ್ದಟ ತನದ ಉತ್ತರ ನೀಡಿದ ಎನ್ನಲಾಗಿದೆ. ಇದರಿಂದ ಕಾನೂನಿಗೆ ಗೌರವ ಕೊಡದ ಹಿನ್ನಲೆಯಲ್ಲಿ ಪೊಲೀಸರು ಶಂಕರಲಿಂಗಯ್ಯನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಜೆಎಂಎಫ್ಸಿ ನ್ಯಾಯಾಧೀಶರು 11 ರ ತನಕ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಪದೇ ಪದೇ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗುತ್ತಿದ್ದ ಶಂಕರಲಿಂಗಯ್ಯನನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

