ಚಿತ್ರದುರ್ಗ

ಪೂರಕ ಪ್ರಶ್ನೆಪತ್ರಿಕೆಯಿಂದ ಒತ್ತಡ ನಿವಾರಣೆ

Published On :

ಹಿರಿಯೂರು: ಪರೀಕ್ಷಾ ಪೂರ್ವ ಸಿದ್ಧತೆಗಾಗಿ ಪೂರಕ ಪ್ರಶ್ನೆಪತ್ರಿಕೆ ರೂಪಿಸಿ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಣೆ ಮಾಡಲು ಸಾಧ್ಯವೆಂದು ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಎಚ್.ಎಸ್. ಸುಂದರ್ ರಾಜ್ ಅಭಿಪ್ರಾಯಪಟ್ಟರು.
ಹಿರಿಯೂರಿನ ರೆಡ್ ಕ್ರಾಸ್, ಲಯನ್ಸ್ ಕ್ಲಬ್, ವಾಗ್ದೇವಿ ವಿದ್ಯಾಸಂಸ್ಥೆ, ಆಳ್ವಾಸ್ ನುಡಿಸಿರಿ ಕಾರ್ಯಾಲಯ, ತುಮಕೂರಿನ ಕೋರ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಪಟ್ಟಣದ ವಾಗ್ದೇವಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹತ್ತಾರು ಪ್ರಯೋಗಗಳನ್ನು ನಿರಂತರವಾಗಿ ಮಾಡುವ ಅವಶ್ಯಕತೆಯಿದ್ದು ವಿವಿಧ ತಜ್ಞರು ಸೇರಿ ರಚಿಸಿರುವ ಇಂತಹ ಮಾದರಿ ಪ್ರಶ್ನೆ ಪತ್ರಿಕೆಗಳಿಂದ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಲು ವಿಧ್ಯಾರ್ಥಿಗಳಿಗೆ ನೆರವಾಗುತ್ತದೆಯೆಂದು ಹೇಳಿದರು.
ತುಮಕೂರು ಕಾಲೇಜಿನ ಪ್ರಾಂಶುಪಾಲ ವಾಸುದೇವ ಮೂರ್ತಿ ಮಾತನಾಡಿ, ನಿಯಮಿತವಾಗಿ ಶ್ರಮ ಹಾಕಿ ಅಧ್ಯಯನದಲ್ಲಿ ತೊಡಗಿದರೆ ಯಶಸ್ಸು ಸಾಧ್ಯವಿದ್ದು ಅದರ ಹೊರತಾಗಿ ಯಾವುದೇ ವಾಮ ಮಾರ್ಗಗಳಿಲ್ಲವೆಂದರು. ಈ ಹಿನ್ನೆಲೆಯಲ್ಲಿ ನುರಿತ ಅಧ್ಯಾಪಕರಿಂದ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇದರಿಂದ ಪರೀಕ್ಷಾ ಸಂದರ್ಭದಲ್ಲಿ ಅನವಶ್ಯಕ ಗೊಂದಲ, ಒತ್ತಡಗಳಿಗೆ ಬಲಿಯಾಗುವುದು ತಪ್ಪುತ್ತದೆಯೆಂದು ಹೇಳಿದರು.
ತುಮಕೂರಿನ ಕೋರ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಜಯಕುಮಾರ್, ಕೆ.ವಿ. ಅಮರೇಶ್, ಎಂ. ಜಗದೀಶ್, ಲ.ಕೆ. ಮಂಜುನಾಥ್, ಆರ್. ಪ್ರಕಾಶ್ ಕುಮಾರ್, ತಾಪಂ ಸದಸ್ಯ ಮಹಮ್ಮದ್ ಫಕೃದ್ದೀನ್, ವಾಗ್ದೇವಿ ಶಾಲೆಯ ಶಿಕ್ಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.