ಚಿತ್ರದುರ್ಗ

ಫುಟ್‌ಪಾತ್‌ವ್ಯಾಪಾರಿಗಳಿಗೆ ಪರ್ಯಾಯ ಸ್ಥಳಕ್ಕೆ ನಿರ್ಧಾರ

Published On :

ಕ.ಪ್ರ.ವಾರ್ತೆಚಳ್ಳಕೆರೆ,ಮಾ.16 ತೆರವುಗೊಳಿಸಿದ್ದ ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು, ಅಧಿಕಾರಿಗಳ ನಿರ್ಧಾರವನ್ನು ವ್ಯಾಪಾರಿಗಳು ಸ್ವಾಗತಿಸಿದ್ದಾರೆ.
 ತಹಸೀಲ್ದಾರ್ ಡಿ.ಕೆ. ರಾಮಚಂದ್ರಪ್ಪ, ವೃತ್ತ ನಿರೀಕ್ಷಕ ಟಿ. ಮಂಜುನಾಥ, ಮುಖ್ಯಾಧಿಕಾರಿ ಐ. ಬಸವರಾಜ, ಉಪ ನಿರೀಕ್ಷಕ ಡಿ.ಜೆ. ಶ್ರೀನಿವಾಸ ಪುರಸಭಾ ಸದಸ್ಯರಾದ ಟಿ.ಜೆ. ವೆಂಕಟೇಶ್, ಸಾಲೇಹ, ದೊಡ್ಡ ಉಳ್ಳಾರ್ತಿ ಕರಿಯಣ್ಣ ಇಂದಿರಾ ಶಾಂಪಿಂಗ್ ಕಾಂಪ್ಲೆಕ್ಸ್ ಒಳಾಂಗಣಕ್ಕೆ ಬೇಟಿ ನೀಡಿ ಚರ್ಚೆ ನಡೆಸಿದರು. ಒಂದೇ ಕಡೆ ಗ್ರಾಹಕರಿಗೆ ಎಲ್ಲಾ ವಸ್ತುಗಳು ದೊರೆಯುವಂತೆ ಮಾಡಲು ಈ ವ್ಯವಸ್ಥೆ ಮಾಡಲಾಗಿದ್ದು, ವ್ಯಾಪಾರಸ್ಥರು ನೂತನ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಸೂಚಿಸಲಾಯಿತು.
 ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಡಿ.ಕೆ. ರಾಮಚಂದ್ರಪ್ಪ, ಜಿಲ್ಲಾಧಿಕಾರಿಗಳು ನೀಡಿದ ಸೂಚನೆಯಂತೆ ವ್ಯಾಪಾರಸ್ಥರಿಗೆ ವ್ಯವಸ್ಥೆ ಮಾಡಲಿದೆ. ವ್ಯಾಪಾರಿಗಳು ತೊಂದರೆಯಾದಲ್ಲಿ ಅಧಿಕಾರಿಗಳೊಂದಿಗೆ ಸೌಹಾರ್ಧಯುತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕೆಂದರು.  
  ವೃತ್ತ ನಿರೀಕ್ಷಕ ಟಿ. ಮಂಜುನಾಥ ಮಾತನಾಡಿ, ಅನಗತ್ಯ ಅಪಘಾತಗಳನ್ನು ತಪ್ಪಿಸಲು ತೆರವುಗೊಳಿಸಿ ಒಂದೇ ಕಡೆ ಎಲ್ಲರೂ ಸೇರಿ ತಮ್ಮ ವ್ಯಾಪಾರ ಮುಂದುವರೆಸಲು ಪುರಸಭೆ ಈ ವ್ಯವಸ್ಥೆ  ಮಾಡಿದ್ದು, ಮತ್ತೆ ರಸ್ತೆ ಬದಿ ವ್ಯಾಪಾರಕ್ಕೆ ಮುಂದಾಗಬಾರದೆಂದು ಸೂಚಿಸಿದರು. ಮುಖ್ಯಾಧಿಕಾರಿ ಐ. ಬಸವರಾಜ ಮಾತನಾಡಿ, ನಾಳೆಯಿಂದಲೇ ಈ ಪ್ರದೇಶವನ್ನು ಸ್ವಚ್ಛಗೊಳಿಸಿ ಅನುವು ಮಾಡಿಕೊಡಲಾಗುವುದೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.