ಸಂಭ್ರಮದ ಸಿದ್ದೇಶ್ವರ ಸ್ವಾಮಿ ರಥೋತ್ಸವ
ಕ.ಪ್ರ.ವಾರ್ತೆ ಭರಮಸಾಗರ ಮಾ.16
ಸಮೀಪದ ಇಸಾಮುದ್ರದಲ್ಲಿ ಶನಿವಾರ ಸಿದ್ದೇಶ್ವರ ಸ್ವಾಮಿಯ ದೊಡ್ಡ ರಥೋತ್ಸವ ಜಾನಪದ ಕಲಾ ತಂಡಗಳ ಸಡಗರದ ಮಧ್ಯೆ ಸಂಭ್ರಮದಿಂದ ಆಚರಿಸಲಾಯಿತು.
ಸಂಜೆ ಗೋಧೂಳಿ ಲಗ್ನದಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಬಣ್ಣ ಬಣ್ಣದ ಬಟ್ಟೆ, ಹೂವಿನ ಹಾರ, ಬಾಳೆ ಗೊನೆ, ನಾನಾ ಹೂಗಳಿಂದ ಶೃಂಗರಿಸಿದ್ದ ರಥದ ಸುತ್ತ ಸಿದ್ದೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕರೆ ತಂದು ರಥದ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ರಥದಲ್ಲಿ ಇರಿಸಲಾಯಿತು.
ನಂತರ ಸ್ವಾಮಿಗೆ ಮಹಾಮಂಗಳಾರತಿ ಪೂಜೆ ನೆರವೇರಿಸಿ ದೇವರ ಪಟ ಮತ್ತು ಹೂವಿನ ಹಾರಗಳ ಹರಾಜು ಪ್ರಕ್ರಿಯೆ ನಡೆಸಲಾಯಿತು. ನಂತರ ಭಕ್ತರು ರಥದ ಗಾಲಿಗಳಿಗೆ ತೆಂಗಿನಕಾಯಿ ಹೊಡೆಯುವ ಮೂಲಕ ತಮ್ಮ ಇಷ್ಟಾರ್ಥ ಈಡೇರಿಕೆಗೆ ಮನವಿ ಅರ್ಪಿಸಿದರು.
ಡೊಳ್ಳು ಕುಣಿತ: ಭಕ್ತರು ತೇರಿಗೆ ಲವಂಗ, ಬೆಲ್ಲ, ಮೆಣಸು, ಮಂಡಕ್ಕಿಗಳಿಂದ ತಯಾರಿಸಿದ ತುರುಬೆಲ್ಲ ಮೆಣಸನ್ನು ಎಸೆಯುವ ಮೂಲಕ ನೆಲದಲ್ಲಿ ಬೀಳುವ ಈ ಪದಾರ್ಥ ರಥೋತ್ಸವ ವೇಳೆ ಉಂಟಾಗುವ ಧೂಳನ್ನು ತಡೆಯುತ್ತದೆ ಮತ್ತು ಗ್ರಾಮದಲ್ಲಿ ಸಾಂಕ್ರಮಿಕ ಕಾಯಿಲೆಗಳು ಉಲ್ಬಣವಾಗದಂತೆ ತಡೆಯುತ್ತದೆ ಎಂಬ ನಂಬಿಕೆಯನ್ನು ಪ್ರದರ್ಶಿಸಿದರು. ನಂದಿ ಕೋಲು, ಉರುಮೆ, ಡೊಳ್ಳು, ತಮಟೆ, ಭಜನಾ ತಂಡಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದವು.
ಮಹಾಮಂಗಳಾರತಿ ನಂತರ ರಥವನ್ನು ಊರ ಹೊರಗಿನ ಪಾದಗಟ್ಟೆವರೆಗೆ ಎಳೆದೊಯ್ದು ಅಲ್ಲಿನ ದೇಗುಲ ಮತ್ತು ಬನ್ನಿ ಮಹಾಕಾಳಿಗೆ ಪೂಜೆ ಸಲ್ಲಿಸಿದ ನಂತರ ಪುನಃ ದೇಗುಲದ ಬಳಿ ಎಳೆ ತರಲಾಯಿತು. ಭಾನುವಾರ ಬಿಡುವು, ಬಾಯಿ ಬೀಗ, ಜವಳ ಮತ್ತು ದೇವಸ್ಥಾನ ಸಮಿತಿಯಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಸೋಮವಾರ ಓಕಳಿ, ಗುಡಿ ದುಂಬಿಸುವ ಶಾಸ್ತ್ರಗಳ ಮೂಲಕ ಕಳೆದ ಆರು ದಿನಗಳಿಂದ ಆಚರಿಸುತ್ತಿರುವ ರಥೋತ್ಸವ ತೆರೆ ಕಾಣಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

