ಫ್ರೀವೀಸಾದಲ್ಲಿ ಸೌದಿಗೆ ಹೋದರೆ ಸ್ವಉದ್ಯೋಗ ಮಾಡುವಂತಿಲ್ಲ
ಸುಳ್ಯ: ಸೌದಿ ಅರೇಬಿಯಾ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ಹೊಸ ಕಾನೂನುಗಳಿಂದಾಗಿ ಆ ದೇಶದಲ್ಲಿರುವ ಭಾರತೀಯರು ಸಂಕಷ್ಟ ಎದುರಿಸಬೇಕಾಗಿದೆ.
ಇತ್ತೀಚೆಗಷ್ಟೆ ಕೆಂಪು ಕಾರ್ಡ್ ಮತ್ತು ಹಳದಿ ಕಾರ್ಡ್ ವ್ಯವಸ್ಥೆ ಜಾರಿಗೆ ತಂದು ಸ್ವಲ್ಪ ಪ್ರಮಾಣದ ಭಾರತೀಯರು ಸ್ವದೇಶಕ್ಕೆ ತೆರಳುವಂತೆ ಮಾಡಿದ್ದ ಸೌದಿ ಸರ್ಕಾರದ ಕಣ್ಣು ಈಗ ಫ್ರೀ ವೀಸಾದಲ್ಲಿ ದೇಶಕ್ಕೆ ಬಂದು ಉದ್ಯೋಗ ಮಾಡಿ ಕೊಂಡಿರುವವರ ಮೇಲೆ ನೆಟ್ಟಿದೆ.
ಹೊಸ ಕಾಯಿದೆಯ ಪ್ರಕಾರ ಸೌದಿ ಅರೇಬಿಯದಲ್ಲಿರುವ ಫ್ರೀ ವೀಸಾದ ಉದ್ಯೋಗದಲ್ಲಿರುವವರು ಇನ್ನು ಮುಂದೆ ಸ್ವ ಟ ಉದ್ಯೋಗವನ್ನು ಮಾಡುವಂತಿಲ್ಲ. ವಿದೇಶದಿಂದ ಫ್ರೀ ವೀಸಾದಲ್ಲಿ ಸೌದಿಗೆ ಬರುವ ಉದ್ಯೋಗಾರ್ಥಿಗಳು ಒಬ್ಬ ಕಫೀಲ್ (ಸಾಹುಕಾರ)ನ ಹೆಸರಿನಲ್ಲಿ ಬಂದಿದ್ದರೂ ದೇಶದ ಎಲ್ಲಿ ಬೇಕಾದರೂ ಕೆಲಸ ಮಾಡಬಹುದಿತ್ತು.
ಇನ್ನು ಮುಂದೆ ಯಾವ ಕಫೀಲ್.ನ ಹೆಸರಿನಲ್ಲಿ ಅವರು ದೇಶಕ್ಕೆ ಬರುತ್ತಾರೊ ಅದೇ ಕಫೀಲ್.ನ ಅಧೀನದಲ್ಲಿ ಉದ್ಯೋಗ ನಿರ್ವಹಿಸಬೇಕು. ಹಿಂದೆ ಕಫೀಲ್.ಗೆ ಮಾಸಿಕ ಮೊತ್ತ ಪಾವತಿಸಿ ದೇಶದ ಎಲ್ಲಿ ಬೇಕಾದರೂ ಉದ್ಯೋಗ ಮಾಡಬಹುದಿತ್ತು. ಇನ್ನು ಮುಂದೆ ಕಫೀಲ್.ಗಳು ತಮ್ಮ ಸಂಸ್ಥೆಗಳಿಗೆ ಅಗತ್ಯವಿರುವ ಉದ್ಯೋಗಿಗಳನ್ನು ಮಾತ್ರ ಆಯ್ದುಕೊಳ್ಳಬೇಕು.
ಉಳಿದವರು ದೇಶ ಬಿಟ್ಟು ತೆರಳಬೇಕು. ಈ ಬಗ್ಗೆ ಸರ್ಕಾರ ತೀವ್ರ ತಪಾಸಣೆಯಲ್ಲಿ ತೊಡಗಿದೆ. ಸಾಮಾನ್ಯವಾಗಿ ಹೆಚ್ಚಿನ ಮಂದಿ ಫ್ರೀ ವೀಸಾದಲ್ಲಿ ಸೌದಿಗೆ ಹೋಗಿ ಅಲ್ಲಿ ಎಲ್ಲಾದರೊಂದು ಕಡೆ ಕಷ್ಟಪಟ್ಟು ಉದ್ಯೋಗ ಮಾಡಿ ಊರಿಗೆ ಹಣ ಕಳುಹಿಸುತ್ತಿದ್ದರು. ಇನ್ನು ಮುಂದೆ ಕಫೀಲ್.ಗಳು ಕೆಲಸಕ್ಕೆ ಇರಿಸಿಕೊಂಡರೆ ಉಂಟು, ಇಲ್ಲದಿದ್ದರೆ ಹಿಂತಿರುಗಬೇಕಾಗಿದೆ. ಕಂಪನಿ ವೀಸಾದಲ್ಲಿ ಹೋದವರಿಗೆ ಈ ಸಮಸ್ಯೆ ಇಲ್ಲ. ಸುಳ್ಯದ ನೂರಾರು ಮಂದಿ ಸೌದಿ ಅರೇಬಿಯಾದಲ್ಲಿದ್ದು, ಈ ಹೊಸ ಕಾನೂನಿನಿಂದ ಸಂಕಷ್ಟ ಅನುಭವಿಸುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

