ರಸ್ತೆ ಮಧ್ಯೆ ಪಾರ್ಕಿಂಗ್ ಗುರುತು ಹಾಕಿ ಪಾಲಿಕೆ ಶುಲ್ಕ ವಸೂಲಿ!
ಮಂಗಳೂರು: ಅಲ್ಲಿ ಪಾರ್ಕಿಂಗ್ ಜಾಗ ನಮೂದಿಸಬೇಕು. ಆದರೆ ರಸ್ತೆ ಬದಿ ಜಾಗ ಕಾಣುತ್ತಿಲ್ಲ, ಮತ್ತೇನು ಮಾಡುವುದು ಎಂದು ಯೋಚಿಸುವ ಗೋಜಿಗೆ ಹೋಗದೆ ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆ ಮಧ್ಯೆಯೇ ಪಾರ್ಕಿಂಗ್ ಗುರುತು ಹಾಕಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ!
ಈಗ ಮಂಗಳೂರು ಹೃದಯ ಭಾಗ ಹಂಪನಕಟ್ಟೆ ಬಳಿಯ ಪಿ.ಎಂ.ರಾವ್ ರಸ್ತೆಯ ಹೊಟೇಲ್ ಶ್ರೀನಿವಾಸದಿಂದ ಫೀಲ್ಡ್,ಸ್ಟಾರ್ ವರೆಗಿನ ರಸ್ತೆಯಲ್ಲಿ ವಾಹನಕ್ಕೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ರಸ್ತೆಯುದ್ದಕ್ಕೂ ಪಾರ್ಕಿಂಗ್ ಗೆರೆ ಅಣಕಿಸುತ್ತಿದೆ. ಅಷ್ಟೊಂದು ಅವೈಜ್ಞಾನಿಕವಾಗಿ ಪಾರ್ಕಿಂಗ್ ಸ್ಥಳ ನಿಗದಿಪಡಿಸಿದ್ದು, ಸ್ಥಳೀಯರು ಈ ಸಮಸ್ಯೆಯನ್ನು ಸಂಬಂಧಿತರ ಗಮನಕ್ಕೆ ತಂದರೂ ಮೌನವಹಿಸಿದ್ದಾರೆ.
ತಿರುವಲ್ಲಿ ದ್ವಿಚಕ್ರ ಪಾರ್ಕಿಂಗ್: ಹೊಟೇಲ್ ಶ್ರೀನಿವಾಸ ತಿರುವಿನಲ್ಲಿ ದ್ವಿಚಕ್ರ ವಾಹನಕ್ಕೆ ಪಾರ್ಕಿಂಗ್ ಸ್ಥಳ ಗುರುತಿಸಿದ್ದಾರೆ. ತಿರುವಿನಲ್ಲಿ ವಾಹನ ಬಂದರೆ ನಿಂತಿದ್ದ ವಾಹನಕ್ಕೆ ಅಪಘಾತವಾಗದಂತೆ ಸಂಚರಿಸುವುದೇ ದುಸ್ತರ. ಅದೇ ರೀತಿ ಅಂಚೆ ಕಚೇರಿಯಿಂದ ಹಂಪನಕಟ್ಟೆ ಮುಖ್ಯ ರಸ್ತೆ ವರೆಗೆ ರಸ್ತೆ ಮಧ್ಯೆಯೇ ಪಾರ್ಕಿಂಗ್ ಗೆರೆ. ಇಲ್ಲಿ ಇಕ್ಕೆಲಗಳಲ್ಲಿ ಕಟ್ಟಡ, ಸುಗಮ ಸಂಚಾರಕ್ಕೆ ಈಗ ಪಾರ್ಕಿಂಗ್ ಗೆರೆ ತೊಂದರೆ ಕೊಡುತ್ತಿದೆ.
ನೋ ಪಾರ್ಕಿಂಗ್,ನಲ್ಲಿ ಪಾರ್ಕಿಂಗ್: ವಿಚಿತ್ರವೆಂದರೆ, ಈ ಏಕಮುಖ ರಸ್ತೆಯಲ್ಲಿ ಸಂಚಾರಿ ಪೊಲೀಸರ ಪ್ರಕಾರ ನೋ ಪಾರ್ಕಿಂಗ್. ಕಿರಿದಾದ ರಸ್ತೆ ಇದಾದ್ದರಿಂದ ಏಕಮುಖ ಸಂಚಾರದಲ್ಲಿ ತೊಂದರೆ ಆಗಬಾರದು ಎಂದು. ಆದರೆ ಪಾಲಿಕೆ ಇದನ್ನು ಪಾರ್ಕಿಂಗ್,ಗೆ ಪರಿವರ್ತಿಸಿದ್ದು, ವಾಹನ ಚಾಲಕರು ಯಾವುದನ್ನು ಪಾಲಿಸಬೇಕು ಎಂಬ ಗೊಂದಲ ಉಂಟು ಮಾಡುವಂತಾಗಿದೆ. ಇಲ್ಲಿ ಎ.1ರಿಂದ ಪಾರ್ಕಿಂಗ್ ಶುಲ್ಕವನ್ನು ಗುತ್ತಿಗೆದಾರರು ವಸೂಲಿ ಮಾಡುತ್ತಿದ್ದಾರೆ. ಆಯಾ ಅಂಗಡಿ ಮಾಲಕರು ತಮ್ಮ ಅಂಗಡಿ ಎದುರು ತಮ್ಮದೇ ವಾಹನ ನಿಲ್ಲಿಸಬೇಕಾದರೂ ಶುಲ್ಕ ತೆರಬೇಕು! ಇಲ್ಲಿ ಪಾರ್ಕಿಂಗ್,ಗೆ ಕಾದಿರಿಸಲು ಸರಿಯಾದ ಜಾಗವಿಲ್ಲ. ಹೀಗಿದ್ದೂ ಶುಲ್ಕ ಕೀಳಲು ಬೇಕಾಬಿಟ್ಟಿ ಪಾರ್ಕಿಂಗ್ ಜಾಗ ನಿಗದಿಪಡಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪಾಲಿಕೆಯು ನಗರದ 15 ಕಡೆಗಳಲ್ಲಿ ಪೇ ಪಾರ್ಕ್,ಗೆ ಅನುಮತಿ ನೀಡಿದೆ. ಈ ಬಗ್ಗೆ ಪ್ರಶ್ನಿಸಿದಾಗ, ತನಗೆ ದೂರುಗಳು ಬಂದಿದ್ದು ಸ್ಥಳ ಪರಿಶೀಲನೆ ಮಾಡುವುದಾಗಿ ಪಾಲಿಕೆ ಜಂಟಿ ಆಯುಕ್ತ ಶ್ರೀಕಾಂತ್ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ್ದಾರೆ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

