ರಾಜೀವ್ ಚಂದ್ರಶೇಖರ್ಗೆ ವಿಟಿಯು ಗೌರವ ಡಾಕ್ಟರೇಟ್ ಪ್ರದಾನ
ಕ.ಪ್ರ.ವಾರ್ತೆ, ಬೆಳಗಾವಿ, ಏ.5
ಉದ್ಯಮಿ ಹಾಗೂ ರಾಜ್ಯಸಭೆ ಸದಸ್ಯ ಡಾ.ರಾಜೀವ್ ಚಂದ್ರಶೇಖರ್ ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 'ಡಾಕ್ಟರ್ ಆಫ್ ಸೈನ್ಸ್' ಎಂಬ ಗೌರವ ಡಾಕ್ಟರೇಟ್ ಪದಮಿಂುನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಶುಕ್ರವಾರ ಪ್ರದಾನ ಮಾಡಿದರು.
ವಿವಿಯ 12ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅಣು ಶಕ್ತಿ ಆಂೋಗದ ಮಾಜಿ ಅಧ್ಯಕ್ಷ ಡಾ.ಎಂ.ಆರ್.ಶ್ರೀನಿವಾಸನ್ 'ದೇಶಾದ್ಯಂತ ವಿದ್ಯುಚ್ಛಕ್ತಿ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಡಿಕೆ ಹೆಚ್ಚಾದಂತೆ ವಿದ್ಯುಚ್ಛಕ್ತಿ ಉತ್ಪಾದಿಸಲು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಕಲ್ಲಿದ್ದಲು ದರವೂ ಗಗನಕ್ಕೇರುತ್ತಿದೆ. ಇಂಧನ ಉತ್ಪಾದನೆಂುಲ್ಲಿ ಭಾರತ ಸ್ವಾವಲಂಬನೆಂಾಗದ ಹೊರತು ಆರ್ಥಿಕವಾಗಿ ಬೆಳವಣಿಗೆಂಾಗಲು ಸಾಧ್ಯವಿಲ್ಲ' ಎಂದರು.
ಇಂಧನ ಉತ್ಪಾದಿಸಿ: ಅದಕ್ಕಾಗಿ ಬದಲಿ ಇಂಧನ ಉತ್ಪಾದನೆಗೆ ನಿಸರ್ಗದ ಕೊಡುಗೆಂಾಗಿರುವ ಸೌರ ಶಕ್ತಿ, ಪವನ ಶಕ್ತಿ, ಜಲವಿದ್ಯುತ್ನಿಂದ ಸಾಕಷ್ಟು ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ. ಅಲ್ಲದೇ ಇವು ಮಾಲಿನ್ಯ ರಹಿತ ಇಂಧನ ಮೂಲಗಳಾಗಿರುವುದರಿಂದ ಈ ಮೂರು ಕ್ಷೇತ್ರದಲ್ಲಿ ಆಳವಾದ ಸಂಶೋಧನೆ ನಡೆಸಿ, ದೇಶದ ಜನತೆಗೆ ಕೈಗೆಟಕುವ ದರದಲ್ಲಿ ವಿದ್ಯುತ್ ಪೂರೈಸುವ ಅಗತ್ಯವಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಿದರೆ ಮಾತ್ರ ದೇಶದ ಆರ್ಥಿಕ ಬೆಳವಣಿಗೆಂಾಗಲು ಸಾಧ್ಯವಿದೆ ಎಂದರು. ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ತ್ರಾನಿಕ್ಸ್ ಎಂಜಿನಿಂುರಿಂಗ್ (ಬಿಇ) ಪದವಿಯಲ್ಲಿ ಏಳು ಚಿನ್ನದ ಪದಕಗಳನ್ನು ಪಡೆದ ಅಭಿನವ್ ರಾವ್ನನ್ನು ಭಾರದ್ವಾಜ್ ಅಭಿನಂದಿಸಿದರು. ಎಲ್ಲ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಡಾ.ರಾಜೀವ್ ಚಂದ್ರಶೇಖರ್ ಹಾಗೂ ಡಾ.ಎಂ.ಆರ್ ಶ್ರೀನಿವಾಸನ್ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

