ಮುಂದುವರಿದ ಕಳವು ಪ್ರಕರಣ: ದೈವಸ್ಥಾನ, ಅಂಗಡಿಯಿಂದ ಕಳವು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಆಲಂಕಾರು ಎಂಬಲ್ಲಿ ದೈವಸ್ಥಾನ ಹಾಗೂ ಅಂಗಡಿಯಿಂದ ಸಾವಿರಾರು ರು. ಕಳ್ಳತನ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕಳೆದ ಗುರುವಾರ ರಾತ್ರಿ ಕುಂತೂರು- ಪೆರಾಬೆಯಲ್ಲಿ ಅಂಗಡಿ, ದೈವಸ್ಥಾನ, ಚರ್ಚ್, ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡಿದ ಕಳ್ಳರು, ಪೊಲೀಸ್ ಇಲಾಖೆಯ ದೌರ್ಬಲ್ಯವನ್ನು ಮನಗಂಡು ಇದೀಗ ಆಲಂಕಾರು ಪೇಟೆಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲಿನ ಕೆ.ಚಂದ್ರಶೇಖರ ಪೂಜಾರಿ ಎಂಬವರ ಜನರಲ್ ಸ್ಟೋರ್ಗೆ ನುಗ್ಗಿ ಅಂದಾಜು ಸುಮಾರು ರು. 3 ಸಾವಿರ ನಗದು ಲಪಟಾಯಿಸಿದ್ದಾರೆ. ಪೇಟೆಯ ರಕ್ತೇಶ್ವರಿ ದೈವಸ್ಥಾನದ ಬಾಗಿಲು ಮುರಿದು ಕಾಣಿಕೆ ಹುಂಡಿಯಿಂದ ಸುಮಾರು ರು. 3ಸಾವಿರ ನಗದು ದೋಚಿದ್ದಾರೆ. ಆದರೆ ಕಾಣಿಕೆ ಡಬ್ಬಿಯಲ್ಲಿದ್ದ ಬೆಳ್ಳಿಯ ಹರಕೆ ಸಾಮಾನುಗಳನ್ನು ಬಿಟ್ಟು ಹೋಗಿದ್ದು ವಿಶೇಷವಾಗಿದೆ. ಪ್ರಕರಣದ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳ್ಳರು ಸೀಟಿ ಊದಿ ಯಾಮಾರಿಸಿದರು: ಆಲಂಕಾರು ಪೇಟೆಯಲ್ಲಿ ಶುಕ್ರವಾರ ರಾತ್ರಿ ವೇಳೆ ಸಿಕ್ಕಾಪಟ್ಟೆ ಸೀಟಿ ಊದುವ ಶಬ್ದ ಕೇಳಿ ಬರುತ್ತಿತ್ತು. ನಾವು ಗಸ್ತುನಿರತ ಪೊಲೀಸರೆಂದು ಸುಮ್ಮನಾದೆವು ಎಂದು ಪೇಟೆಯಲ್ಲಿ ವಾಸ್ತವ್ಯವಿದ್ದ ಸಾರ್ವಜನಿಕರು ಹೇಳುತ್ತಿದ್ದರು.
ಆದರೆ ಶನಿವಾರ ಮುಂಜಾನೆ ಕಳ್ಳತನದ ಪ್ರಕರಣ ಬಯಲಾದಂತೆ ಸೀಟಿ ರಹಸ್ಯ ಬಯಲಾಯಿತು. ಇದೀಗ ಕಳ್ಳರು ಮನೆ ಮಂದಿ ಮನೆಯಲ್ಲಿ ಇದ್ದಾಗಲೇ ಕಳ್ಳತನ ನಡೆಸುತ್ತಿದ್ದು, ಈ ಹೊಸತನದ ಕಳ್ಳತನಕ್ಕೆ ಕಳ್ಳರು ಪೊಲೀಸರ ವೇಷ ತೊಡುತ್ತಾರೆಯೇ ಎಂಬ ಸಂದೇಹ ಮೂಡಿದೆ. ಅಲಂಕಾರು ಪೇಟೆಯಲ್ಲಿ ಸೀಟಿ ಊದಿರುವುದು ಇದಕ್ಕೆ ಪುಷ್ಟಿ ತಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

