ಮಹಿಳಾ ಸಾಹಿತಿಗಳ ಯೋಗದಾನ-ಕಾಲದ ಅವಶ್ಯಕತೆ-ಡಾ. ಮಂದಾ ಖಾಂಡಕೆ
ಪುಣೆ: ಪ್ರತಿಯೊಬ್ಬರೂ ಮಾತೃ ಭಾಷೆಯ ಜತೆ-ಜತೆಗೆ ಹೆಚ್ಚು ಹೆಚ್ಚು ಭಾರತೀಯ ಭಾಷೆಗಳನ್ನು ಅರಿತುಕೊಳ್ಳ ಬೇಕೆಂಬ ವಿಶಾಲ ದೃಷ್ಟಿಕೋನ ಪಂಡಿತ್ ಜವಹರ್ಲಾಲ್ ನೆಹರೂ ಅವರದ್ದಾಗಿತ್ತು. ಹಾಗಾಗಿ ಅಂತರ್ ಭಾರತಿಯಂತಹ ಸಂಕಲ್ಪನೆ ಸಮೃದ್ಧಗೊಳಿಸಲು ಅವರು ಒತ್ತುಕೊಟ್ಟರು. ಭಾರತೀಯ ಸಂವಿಧಾನ ಮಾನ್ಯತೆ ಹೊಂದಿದ್ದ 20 ಭಾಷೆಗಳಲ್ಲಿ ಅಧ್ಯಯನ ನಡೆಸಿದಾಗ, ಸ್ತ್ರೀವಾದಿ ಲೇಖಕಿಯರ, ವಿಶೇಷವಾಗಿ ಮಹಿಳಾ ಲೇಖಕಿಯ ಯೋಗದಾನ ಹೆಚ್ಚಿಸುವುದೂ ಕಾಲದ ಅವಶ್ಯಕತೆಯಾಗಿದೆ ಅನ್ನಿಸುತ್ತದೆ.
ಡಾ. ಜಯದೇವಿ ತಾಯಿ ಲಿಗಾಡೆಯಂತಹ ಬಹುಭಾಷಿಕ ಕವಯತ್ರಿಯರು, ಸಮಾಜ ಸುಧಾರಕರೂ, ಸ್ತ್ರೀ ಸಬಲೀಕರಣದ ಪುರಸ್ಕೃತರು ಇಂದು ಅಪರೂಪವಾಗಿ ಕಾಣಸಿಗುತ್ತಾರೆ. ಮರಾಠಿಯಿಂದ ಶ್ರೀಗಣೇಶ ಮಾಡಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ, ನಿಜವಾದ ಅರ್ಥದಲ್ಲಿ "ಎರಡು ಧೃವಗಳ ಜನ್ಮಶತಮಾನೋತ್ಸವವನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಈ ಯೋಗಾಯೋಗ ಅಪೂರ್ವವೂ, ಅನನ್ಯ ಸ್ವರೂಪದ್ದಾಗಿದೆ ಎಂದು 20 ಭಾರತೀಯ ಭಾಷೆಗಳಲ್ಲಿ ಮಹಿಳಾ ಸಾಹಿತಿಗಳ ಯೋಗದಾನದ ಕುರಿತು ಅಭ್ಯಾಸ ನಡೆಸಿದ ಮರಾಠಿಯ ಜ್ಯೇಷ್ಠ ಲೇಖಕಿ ಡಾ. ಮಂದಾ ಖಾಂಡಕೆ ನುಡಿದರು.
ಅವರು ಪುಣೆಯ ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರವು ಇಲ್ಲಿಯ ಕನ್ನಡ ಸಭಾಗೃಹದಲ್ಲಿ ಆಯೋಜಿಸಿದ ಡಾ. ಜಯದೇವಿ ತಾಯಿ ಲಿಗಾಡೆ ಮತ್ತು ಪ್ರೊ. ವಿ.ಎಂ. ಇನಾಮದಾರ ಅವರ ಜನ್ಮಶತಾಬ್ದಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಸಂಗಮೇಶ್ವರ ಕಾಲೇಜಿನ ಮರಾಠಿ ವಿಭಾಗದ ಡಾ. ಸುಹಾಸ ಪೂಜಾರಿಯವರು ಡಾ. ಜಯದೇವಿ ತಾಯಿ ಲಿಗಾಡೆಯರ ಸಮಗ್ರ ಜೀವನ-ಸಾಹಿತ್ಯದ ಕುರಿತು ವಿವರವಾಗಿ ಮಾತನಾಡಿದರು.
ಮರಾಠಿಯ ಜ್ಯೇಷ್ಠ ಲೇಖಕಿ 'ನಿಹಾರಾ' ಪ್ರಕಾಶನದ ಸಂಚಾಲಿಕೆ ಡಾ. ಸ್ನೇಹಸುಧಾ ಕುಲಕರ್ಣಿ ಅವರು ಪ್ರಾ. ವಿ.ಎಂ. ಇನಾಮದಾರ ಸಾಹಿತ್ಯ-ಜೀವನವನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರಿನಲ್ಲಿ ಇತ್ತೀಚೆಗೆ ವಿಶ್ವೇಶ್ವತೀರ್ಥ ಪೇಜಾವರ ಮಠ ಅವರು ಪ್ರಕಾಶನಗೊಳಿಸಿದ ಪಿ.ಹೆಚ್.ಡಿ. ಗ್ರಂಥ (ಇಂಗ್ಲೀಷ್) "ಬ್ರಹ್ಮ ಸೂತ್ರದಲ್ಲಿಯ ಪರಮಾತ್ಮನ ಸ್ವರೂಪ" ಸಂಶೋಧಕ ಸಂಸ್ಕೃತ ವಿದ್ವಾಂಸ ಮತ್ತು ಕೇಂದ್ರದ ವಿಶ್ವಸ್ಥ ಡಾ. ರಾಘವೇಂದ್ರ ಕಟ್ಟಿಯವರನ್ನು ಕೇಂದ್ರದ ಅಧ್ಯಕ್ಷ ಡಾ. ಭಾ.ರ. ಸಾಬಡೆ ಅವರ ಹಸ್ತದಿಂದ ಸತ್ಕರಿಸಿ ಅಭಿನಂದಿಸಲಾಯಿತು.
ಕೇಂದ್ರದ ಅಧ್ಯಕ್ಷ ಡಾ. ಭಾ.ರ. ಸಾಬಡೆ ಸ್ವಾಗತಿಸಿದರೆ, ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೃ.ಶಿ. ಹೆಗಡೆ ಈ ಜನ್ಮಶತಮಾನೋತ್ಸವ ಆಚರಣೆಯ ಉದ್ದೇಶಗಳನ್ನು ವಿವರಿಸಿ, ಈ ಸಂದರ್ಭದಲ್ಲಿ ಬಂದ ಸಂದೇಶಗಳ ವಾಚನ ಮಾಡಿದರು. ಪ್ರಾ. ವಿ.ಎಂ. ಇನಾಮದಾರರ ಕನ್ಯೆ ಶ್ರೀಮತಿ ಮೀನಾ ವಾಂಗೀಕರ ಮತ್ತು ಜಯದೇವಿ ತಾಯಿ ಲಿಗಾಡೆಯವರ ಸೊಸೆ ಶ್ರೀಮತಿ ಮಧುಮಾಲಾ ಲಿಗಾಡೆ ಸಾಹಿತಿದ್ವಯರ ಸಮಗ್ರ ಗ್ರಂಥ ಪ್ರದರ್ಶನ ಏರ್ಪಡಿಸಿದರು. ಕೇಂದ್ರದ ವಿಶ್ವಸ್ಥೆ ಶ್ರೀಮತಿ ವಾಯ್. ಪಿ. ಮೋರೆ ಅಭಾರಗೈದರು. ಕನ್ನಡ ಕಲಿಕಾ ವರ್ಗದ ಮಾಜಿ ವಿದ್ಯಾರ್ಥಿನಿ ಡಾ. ಸಂಪದಾ ಕಾಳೆ ಈಶಸ್ತವವನ್ನು ಕೊನೆಯಲ್ಲಿ ಜ್ಞಾನೇಶ್ವರಿಯಲ್ಲಿಯ ಮಾಯದಾನವನ್ನು ಹಾಡಿದರು. ವಿದ್ಯಾರ್ಥಿ ಚಂದ್ರಶೇಖರ ಮೇಡೇಕರ ಸಮಾರಂಭದ ಸೂತ್ರ ಸಂಚಾಲನೆಯನ್ನು ಸಮರ್ಥವಾಗಿ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

