ದಕ್ಷಿಣ ಕನ್ನಡ

ಮೆರವಣಿಗೆ ಪಲುಕು

Published On :

ಮಂಗಳೂರು: ಯಕ್ಷಗಾನ ವೇಷಧಾರಿಗಳಾದ ಚಿಣ್ಣರು, ಜೋಕರ್ ಗೊಂಬೆಗಳು, ಬಣ್ಣ ಬಣ್ಣದ ಬಟ್ಟೆ ಧರಿಸಿದ ಮಕ್ಕಳು, ಕೈಯಲ್ಲಿ ಕನ್ನಡದ ಧ್ವಜ ಹಿಡಿದ ಭುವನೇಶ್ವರಿ, ಹಳದಿ ಕೆಂಪು ಬಣ್ಣದ ಸೀರೆಯುಟ್ಟ ಶಿಕ್ಷಕರು, ವಿವಿಧ ಸಂಘದ ಸದಸ್ಯರು ಕನ್ನಡ ಭುವನೇಶ್ವರಿ ದಿಬ್ಬಣಕ್ಕೆ ಮೆರುಗು ನೀಡಿದರು.
ಇದು ಕುಳಾಯಿಯಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಭಾನುವಾರ ನಡೆದ ಮಂಗಳೂರು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಝಲಕ್.ಕುಳಾಯಿ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ದೇವಾನಂದ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.
ಹಳೆಯ ಕಾರು: 112 ವರ್ಷದ ಹಳೆಯ ತೆರೆದ ಕಾರಿನಲ್ಲಿ ಸಮ್ಮೇಳನಾಧ್ಯಕ್ಷೆ ಲೀಲಾವತಿ ಅವರನ್ನು ದಿಬ್ಬಣದಲ್ಲಿ ಸಮ್ಮೇಳನದ ಸಭಾಂಗಣಕ್ಕೆ ಕರೆ ತರಲಾಯಿತು. ಇವರೊಂದಿಗೆ ಗಣ್ಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ದೇವಸ್ಥಾನದ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಕನ್ನಡ ದೇವಿ ಭುವನೇಶ್ವರಿ ರಂಗೋಲಿ ಕಣ್ಮನ ಸೆಳೆಯುತ್ತಿತ್ತು. ಪುಸ್ತಕ ಮಳಿಗೆಯನ್ನು ಜ್ಯೋತಿಷಿ ನಾಗೇಂದ್ರ ಭಾರದ್ವಾಜ್ ಕಟ್ಲ ಉದ್ಘಾಟಿಸಿದರು. ಇನ್ನೊಂದು ಬದಿಯಲ್ಲಿ ಸುರತ್ಕಲ್‌ನ ಜಾನ್ ಎಫ್ ಕೆನಡಿ ಸಂಗ್ರಹಿಸಿರುವ ಹಳೆಯ ವಸ್ತುಗಳಾದ 500 ವರ್ಷದ ಹಿಂದಿನ ಚಾಕುವಿನ ಹಿಡಿ, ಸಾವಿರಕ್ಕೂ ಮಿಕ್ಕಿದ ವಿದೇಶಿ ಮತ್ತು ದೇಶಿ ನಾಣ್ಯಗಳ ಸಂಗ್ರಹ, ಹಳೆಯ ಕರಪತ್ರ, ಕವರುಗಳು, ಮರದ, ಕಬ್ಬಿಣದ ಪೆಟ್ಟಿಗೆ, ತಕ್ಕಡಿ, ಅಲರಾಂ, ಗೋಡೆ ಗಡಿಯಾರಗಳು ಗಮನ ಸೆಳೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.