ನೈತಿಕ ಮತದಾನಕ್ಕೆ ಪ್ರೇರಣೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಪ್ರಥಮ ಹಂತದ ಸ್ವೀಪ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ದ್ವಿತೀಯ ಹಂತವನ್ನು ಯಶಸ್ಸುಗೊಳಿಸಲು ಇದೇ ಹುಮ್ಮಸ್ಸಲ್ಲಿ ಮುಂದುವರಿಯಬೇಕು ಎಂದು ಸ್ವೀಪ್ ಅಧ್ಯಕ್ಷ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯ ಪ್ರಕಾಶ್ ಹೇಳಿದ್ದಾರೆ.
ಮಂಗಳವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸ್ವೀಪ್ ಸಭೆಯಲ್ಲಿ ನೈತಿಕ ಮತದಾನ ಹಾಗೂ ಮತದಾನಕ್ಕೆ ಪ್ರೇರೇಪಿಸುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.
ಒಂದೊಂದು ಶೇಕಡಾ ಮತದಾನ ಜಾಸ್ತಿ ಮಾಡುವುದು ನಮ್ಮ ಗುರಿ. ಪ್ರಥಮ ಹಂತದ ಸ್ವೀಪ್ನಲ್ಲಿ 70 ಸಾವಿರ ಅರ್ಜಿ ಸ್ವೀಕೃತವಾಗಿದೆ. ಇದೇ ಮಾದರಿಯಲ್ಲಿ ನೈತಿಕ ಮತದಾನ(ಉತ್ತಮ, ಸಚ್ಛಾರಿತ್ರ್ಯ ಅಭ್ಯರ್ಥಿ ಆಯ್ಕೆ), ಮತದಾನ ಹೆಚ್ಚಿಸುವ ಬಗ್ಗೆ ಗಂಭೀರ ಚಿಂತನೆ ಆಗಬೇಕು ಎಂದರು. ಮಹಿಳೆಯರನ್ನು, ಕಾರ್ಮಿಕರನ್ನು, ಕೃಷಿಕರನ್ನು ತಲಪುವ ನಿಟ್ಟಿನಲ್ಲಿ ಆಯಾ ಇಲಾಖೆಗಳು ಪ್ರಯತ್ನ ನಡೆಸಬೇಕು ಎಂದರು.
ಎಪಿಕ್ ಕಡ್ಡಾಯವಲ್ಲ: ಚುನಾವಣಾ ಆಯೋಗ ಬಿಎಲ್ಒಗಳ ಮುಖೇನನೀಡುವ ವೋಟರ್ ಸ್ಪಿಲ್ ಮುಖ್ಯ ಎಂದು ಪ್ರತ್ಯೊಬ್ಬರಿಗೂ ಮಾಹಿತಿ ನೀಡಬೇಕು.
ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಸ್ವೀಪ್ ಬಗ್ಗೆ ಪ್ರದರ್ಶನ ಏರ್ಪಡಿಸಿದೆ. ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕರ್ತವ್ಯ ಬಗ್ಗೆ ಸೂಚಿಸಲಾಯಿತು. ಮುಂದಿನ ಹಂತ ಸವಾಲಿನದ್ದಾಗಿದ್ದು, ಪ್ರತ್ಯೊಬ್ಬರ ಮನೆ, ಮನ ತಲಪಬೇಕು ಎಂದರು.
12ರಿಂದ ವಿಶೇಷ ಕಾರ್ಯಕ್ರಮ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ, ಕೊರಗರು, ಮಲೆಕುಡಿಯರು ವಾಸಿಸುವಲ್ಲಿ ವಿಶೇಷ ಮತದಾನ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ.12ರಂದು ಮದ್ಯಪದವಿನಿಂದ ಆರಂಭಿಸಿ 17ರ ವರೆಗೆ ಮೇಲಂತಬೆಟ್ಟುವರೆಗೆ ಐಟಿಡಿಪಿ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಅರಣ್ಯ ಇಲಾಖೆ, ಎಪಿಎಂಸಿ, ಬೇಸಿಗೆ ಶಿಬಿರಗಳಲ್ಲಿ, ಕೋಟಿಂಗ್ ಕ್ಲಾಸ್ಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಎನ್ವೈಕೆಯಿಂದ ಕ್ಯಾಂಡಲ್ ಲೈಟ್ ಆಂದೋಲನ ಆಯೋಜಿಸುವ ಬಗ್ಗೆ ಚರ್ಚಿಸಲಾಯಿತು.
1627 ಪೊಲಿಂಗ್ ಬೂತ್ನ ಅಧಿಕಾರಿಗಳ ಜತೆ ವನ್ ಟು ವನ್ ಮತದಾನ ಬಗ್ಗೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಉತ್ತಮ ಪ್ರೇರಕರು, ಎನ್ಜಿಒ ಸಹಕಾರದಲ್ಲಿ ಶೇಕಡಾವಾರು ಮತದಾನ ಹೆಚ್ಚಿಸಲು ಸಾಧ್ಯ. ಇಲಾಖಾ ಮುಖ್ಯಸ್ಥರು ಚುನಾವಣಾ ಪ್ರಕ್ರಿಯೆಯಲ್ಲಿ ನಿರತವಾಗಿದ್ದರೆ ನಂತರದ ಅಧಿಕಾರಿಗಳು ಸ್ವೀಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಅಧಿಕಾರಿಗಳು ಸಭೆಗೆ ಗೈರಾದರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೀಚ್ಗಳಲ್ಲಿ, ಬಂದರುಗಳಲ್ಲಿ ಮೀನುಗಾರಿಕಾ ಇಲಾಖೆ ಮತದಾನಕ್ಕೆ ಪ್ರೇರೇಪಿಸಬೇಕು.
ಖಾಸಗಿ ಮತದಾರರಿಗೆ ನೈತಿಕ ಮತದಾನ ಮತ್ತು ಮತದಾನ ಮಾಡುವ ಬಗ್ಗೆ ಪ್ರಮಾಣವಚನ ನೀಡಿ ಮತದಾನಕ್ಕೆ ಪ್ರೇರೇಪಿಸಬೇಕು. ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಇಲಾಖೆ ಆದೇಶಿಸಬೇಕು ಎಂದು ಕಾರ್ಮಿಕ ಇಲಾಖೆಗೆ ತಿಳಿಸಿದರು.
ನಗರದ ಪ್ರಮುಖ ಖಾಸಗಿ ಟ್ಯೂಷನ್ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ರಜೆ ನೀಡಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಪತ್ರಿಕೆಗಳಲ್ಲಿ ಮತದಾನ ಪ್ರೇರೇಪಣೆಯ ಲೇಖನ ಬರೆಯುವಂತೆ ತಿಳಿಸಲಾಯಿತು. ಅಂಚೆ ಇಲಾಖೆಯಿಂದ 'ಮತದಾನ ಮಾಡಿ' ಘೋಷಣೆಯನ್ನು ಗ್ರಾಹಕರಿಗೆ ತಲುಪಿಸುವಂತೆ ಸೂಚಿಸಲಾಯಿತು. ಬ್ಯಾಂಕ್ಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಕೋರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

