ಮಚ್ಚೇಂದ್ರನಾಥರ ನಾಟಕ ಮುದ್ರಿಸಲು ಅಕಾಡೆಮಿ ಸಮ್ಮತಿ
ಮಂಗಳೂರು: ಮೇರು ರಂಗಕರ್ಮಿ ಮಚ್ಚೇಂದ್ರನಾಥ ಪಾಂಡೇಶ್ವರ ನೆನಪಲ್ಲಿ ವಾರ್ಷಿಕ ಸ್ಮರಣೀಯ ಕಾರ್ಯಕ್ರಮ ರೂಪಿಸಲು ಶುಕ್ರವಾರ ಮಹಾನಗರ ಪಾಲಿಕೆಯ ತುಳು ಆಕಾಡೆಮಿ ಚಾವಡಿ ಕೂಡದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನಿರ್ಣಯಿಸಲಾಯಿತು.
ತುಳು ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮಾತನಾಡಿ, ತುಳು ರಂಗಭೂಮಿಯ ಹಿಂದಿನ ಸ್ಟಾರ್ ಆಗಿದ್ದ ಪಾಂಡೇಶ್ವರ ವರ್ಷಕ್ಕೆ ಮೂರು ನಾಟಕ ಬರೆಯುತ್ತಿದ್ದರು. ಅವರ ಹಸ್ತಪ್ರತಿಯ 25ಕ್ಕೂ ಹೆಚ್ಚು ನಾಟಕಗಳಿವೆ. ತುಳು ಅಕಾಡೆಮಿ ವತಿಯಿಂದ ವರ್ಷಕ್ಕೆ ಕನಿಷ್ಠ 2 ನಾಟಕ ಪುಸ್ತಕಗಳನ್ನು ಮುದ್ರಿಸಲಾಗುವುದು ಎಂದರು. ಅವರ ಕೌನ್ಸಿಲರ್ ಕೊಗ್ಗಣ್ಣೆ, ಪೊರ್ತ್ ಕಂತುಂಡ ಎರಡು ನಾಟಕಗಳಲ್ಲಿ ನಾನು ಅಭಿನಯಿಸಿದ್ದೆ. ಹೊಟ್ಟೆ ಹೊರೆವ ಕೆಲಸ ಮಾಡುತ್ತಾ ಜತೆಯಲ್ಲಿ ನಾಟಕ ರಂಗದಲ್ಲಿ ಹೆಸರು ಚಿರಸ್ಥಾಯಿ ಮಾಡಿದರು. ಹುಟ್ಟುವಾಗ ಹೆಸರು ಇರುವುದಿಲ್ಲ, ಉಸಿರು ಇರುತ್ತದೆ, ಸಾಯುವಾಗ ಉಸಿರು ಇರುವುದಿಲ್ಲ, ಹೆಸರು ಇರುತ್ತದೆ. ತುಳು ರಂಗಭೂಮಿಯಲ್ಲಿ ಒಳ್ಳೆ ಹೆಸರು ಮಾಡಿದ ಮರೆಯಲಾಗದ ಮಹನೀಯರ ಬಗ್ಗೆ ಮಾಲಿಕೆ ರಚಿಸುತ್ತಿದ್ದು, ಇಂಥ ಅಪರೂಪದ ಮಹನೀಯರ ಬಗ್ಗೆ ಬರೆಯುವಂತೆ ಮನವಿ ಮಾಡಿದರು.
ನಾಟಕ ಕಲಾವಿದ ತಮ್ಮ ಲಕ್ಷ್ಮಣ ಮಾತನಾಡಿ, ಮಚ್ಚೇಂದ್ರನಾಥರು ಎಸ್ಸೆಸ್ಸೆಲ್ಸಿ ಮಾತ್ರ ಕಲಿತಿದ್ದರೂ ಅವರ ಇಂಗ್ಲಿಷ್ ಭಾಷೆ ಪ್ರೌಢಿಮೆ ಅಪಾರ. ಸಂಸ್ಥೆಯಲ್ಲಿ ಇಂಗ್ಲಿಷ್ನಲ್ಲಿ ಪತ್ರ ಬರೆಯಬೇಕಿದ್ದರೆ ಮಚ್ಚೇಂದ್ರರೇ ಬೇಕು. ಇವರು ಹಿಂದಿ ವಿಶಾರದ ಮಾಡಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಯಾರಾದರೂ ನಾಟಕ ಪ್ಲಾಟ್ ಬೇಕು ಎಂದರೆ ಹಗಲು ಕೆಲಸ ಮಾಡುತ್ತಿದ್ದರೂ ರಾತ್ರಿ ಒಳಗೆ ಅರ್ಧ ಗಂಟೆ ನಾಟಕಗಳನ್ನು ರಚಿಸಿ ನೀಡುತ್ತಿದ್ದ ಪ್ರತಿಭಾವಂತ ಎಂದು ಬಣ್ಣಿಸಿದರು.
ಸಹಾಯ ಸುದ್ದಿವಾಹಿನಿ ಮುಖ್ಯಸ್ಥ ಸದಾಶಿವದಾಸ್ ಪಾಂಡೇಶ್ವರ, ವಾಮನ ನಂದಾವರ, ಸೀತಾರಾಮ ಕುಲಾಲ್, ಲಕುಮಿ ನಾಟಕ ತಂಡ ಮುಖ್ಯಸ್ಥ ಕಿಶೋರ್ ಡಿ. ಶೆಟ್ಟಿ, ರಿಜಿಸ್ಟ್ರಾರ್ ಚಂದ್ರಹಾಸ ರೈ, ಕದ್ರಿ ನವನೀತ್ ಶೆಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

