ಕಾರಿಂಜ ಕೆರೆಗೆ ಸ್ನಾನಕ್ಕೆ ಇಳಿದ ಇಬ್ಬರು ಯುವಕರ ಸಾವು
ಬಂಟ್ವಾಳ: ತಾಲೂಕಿನ ವಗ್ಗ ಸಮೀಪದ ಕಾರಿಂಜದ ಶ್ರೀ ಕಾರಿಂಜೇಶ್ವರ ದೇವಾಲಯದ ಕೆರೆಗೆ ಸ್ನಾನಕ್ಕೆಂದು ಇಳಿದ ಇಬ್ಬರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಮೃತರನ್ನು ಪರ್ಲ ನಿವಾಸಿಗಳಾದ ಥೋಮಸ್ ಎಂಬವರ ಪುತ್ರ ಆತ್ವಿನ್ ಡಿ ಮೆಲ್ಲೊ (21) ಮತ್ತು ಜಾನ್ ಅವರ ಪುತ್ರ ರೋಶನ್ ಲಸ್ರಾದೊ(17) ಎಂದು ಗುರುತಿಸಲಾಗಿದೆ.
ಆತ್ವಿನ್ ಬಂಟ್ವಾಳ ಕೆಪಿಟಿಯ ಐಟಿಐ ವಿದ್ಯಾರ್ಥಿಯಾಗಿದ್ದಾನೆ. ಐಸಿವೈಎಂ ಪರ್ಲ ಟ್ರಸ್ಟ್‌ನ ಅಧ್ಯಕ್ಷನೂ ಆಗಿದ್ದಾನೆ. ರೋಶನ್ ಮೊಡಂಕಾಪು ದೀಪಿಕಾ ಕಾಲೇಜಿನ ಪಿಯುಸಿ ವಿದ್ಯಾರ್ಥಿ. ವೃತ್ತಿಯಲ್ಲಿ ಇಲೆಕ್ಟ್ರೀಶನ್ ಆಗಿರುವ ಪ್ರಕಾಶ ವೇಗಸ್ ಈ ಘಟನೆಯಿಂದ ಬಚಾವಾಗಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ಈ ಮೂರು ಸ್ನೇಹಿತರು ಈಜಾಡಲೆಂದು ಕಾರಿಂಜೇಶ್ವರ ದೇವಾಲಯದ ಕೆರೆಗೆ ಇಳಿದಿದ್ದರು. 3.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ.
ಅತಿ ಎತ್ತರದ ದಂಡೆಯ ಕೆಳಭಾಗದಲ್ಲಿರುವ ಈ ಅಪಾಯಕಾರಿ ಕೆರೆಗೆ ಈಜಾಡಲು ಅಥವಾ ಸ್ನಾನಕ್ಕಿಳಿಯುವುದು ತೀರಾ ಅಪರೂಪವಾಗಿದೆ.
ಕೆಳಗಿಳಿದ ಆತ್ವಿನ್ ಹಾಗೂ ರೋಶನ್‌ಗೆ ಸರಿಯಾಗಿ ಈಜಲು ಬರುತ್ತಿರಲಿಲ್ಲ. ಈಜುತ್ತಾ ಕೊಂಚ ದೂರ ಹೋಗುತ್ತಿದ್ದಂತೆ ನಿಯಂತ್ರಣ ತಪ್ಪಿ ಇಬ್ಬರು ಕೆರೆಯಲ್ಲಿ ಮುಳುಗಿ ಕೆಸರಿನಲ್ಲಿ ಸಿಲುಕಿದರು. ಇದನ್ನು ಕಂಡ ಪ್ರಕಾಶ್ ಭಯಗೊಂಡು ಕೆರೆಯಿಂದ ದಡಕ್ಕೆ ಬಂದವನು ಸ್ನೇಹಿತರ ರಕ್ಷಣೆಗೆ ಬೊಬ್ಬೆ ಹಾಕಿದನು.
ಈತನ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಲಾಯಿತು. ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಧಾವಿಸಿ ಸುಮಾರು ಮುಕ್ಕಾಲು ಗಂಟೆಯ ಪರಿಶ್ರಮಿಸಿದ ಬಳಿಕ ಕೆರೆಯಲ್ಲಿ ಅನತಿ ದೂರದಲ್ಲಿ ಆತ್ವಿನ್ ಹಾಗೂ ರೋಶನ್ ಶವ ಪತ್ತೆಯಾಗಿದೆ.
ಸುದ್ದಿ ತಿಳಿದ ಪೂಂಜಾಲಕಟ್ಟೆ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಗೊಂಡರು. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

