ದಕ್ಷಿಣ ಕನ್ನಡ

21ರಂದು ಪುರಾಣ ಪ್ರವಚನ ಮಾಲಿಕೆ, ಆರ್.ಗಣೇಶ್ ಅಷ್ಟಾವಧಾನ

Published On :

ಪುತ್ತೂರು: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಮತ್ತು ಬ್ರಹ್ಮಶ್ರೀ ಮಿತ್ತೂರು ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಸಹಯೋಗದಲ್ಲಿ ಪುರಾಣ ಪ್ರವಚನ ಮಾಲಿಕೆ ಉದ್ಘಾಟನೆ, ಗ್ರಂಥ ಅನಾವರಣ ಮತ್ತು ಅಷ್ಟಾವಧಾನ ಕಾರ್ಯಕ್ರಮ 21ರಂದು ಪುತ್ತೂರಿನ ಜೈನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಮಹೇಶ್ ಭಟ್ ಎಲ್ಯಡ್ಕ ತಿಳಿಸಿದ್ದಾರೆ.
ಅವರು ಶನಿವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿ.ವಿ.ಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ವಹಿಸಲಿದ್ದಾರೆ. ಬೆಂಗಳೂರಿನ ಶತಾವಧಾನಿ ಡಾ.ಆರ್. ಗಣೇಶ್ ಉದ್ಘಾಟನೋಪನ್ಯಾಸ ನೀಡಲಿದ್ದಾರೆ. ಜ್ಯೋತಿಷ ವಿದ್ವಾನ್ ಪುರೋಹಿತ ವೇ.ಬ್ರ. ಬೋಳಂತಕೋಡಿ ರಾಮ ಭಟ್ಟ ಗ್ರಂಥಾವಲೋಕನ ಮಾಡಲಿದ್ದಾರೆ.
ಈ ಸಂದರ್ಭ ದಿ. ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟರ ಕನ್ನಡ ಸಂಧ್ಯಾಭಾಷ್ಯ(ಪುನರ್ ಮುದ್ರಣ) ಗ್ರಂಥ ಮತ್ತು ವೇ.ಬ್ರ. ಮಂಜುಳಗಿರಿ ವೆಂಕಟರಮಣ ಭಟ್ಟರ ಶ್ರೀ ವರದ ಶಂಕರಪೂಜಾವಿಧಿ(ಪ್ರಥಮ ಮುದ್ರಣ) ಗ್ರಂಥ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು.
ವಿಷು ವಿಶೇಷ ಬಹುಮಾನ ವಿತರಣೆ: ಅಂದು ಮಧ್ಯಾಹ್ನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾದ ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಬಿ. ಅರ್ತಿಕಜೆ ವಹಿಸಲಿದ್ದಾರೆ. ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ ಬಹುಮಾನ ವಿತರಿಸಲಿದ್ದಾರೆ ಎಂದರು.
ಶತಾವಧಾನಿ ಆರ್. ಗಣೇಶ್ ಅವರಿಂದ ಅಷ್ಟಾವಧಾನ ಕಾರ್ಯಕ್ರಮ ನಡೆಯಲಿದ್ದು, ಡಾ. ಪಾದೇಕಲ್ಲು ವಿಷ್ಣು ಭಟ್ಟ (ನಿಷೇಧಾಕ್ಷರಿ), ಅಂಬಾತನಯ ಮುದ್ರಾಡಿ (ದತ್ತಪದಿ), ರಾಮಚಂದ್ರ ಕೆಕ್ಕಾರು (ಸಮಸ್ಯಾಪೂರಣ), ಡಾ. ಶಂಕರ ಬೆಂಗಳೂರು (ಚಿತ್ರಕವಿತೆ), ಸೋಮಶೇಕರ ಶರ್ಮ ಬೆಂಗಳೂರು (ಆಶುಕವಿತೆ), ಚಂದ್ರಶೇಖರ ಕೆದಿಲಾಯ (ಕಾವ್ಯ ವಾಚನ), ಡಾ. ಚಂದ್ರಶೇಖರ ದಾಮ್ಲೆ (ಸಂಖ್ಯಾಬಂಧ) ಮತ್ತು ಶಂಕರನಾರಾಯಣ ಉಪಾಧ್ಯಾಯ (ಅಪ್ರಸ್ತುತಪ್ರಸಂಗ) ಮಂಡಿಸಲಿದ್ದಾರೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.