ಮಕ್ಕಳ ವೇಶ್ಯಾವಾಟಿಕೆ ಜಾಲ ಬಯಲು
ಮಂಗಳೂರು: ಮಕ್ಕಳ ಕಳ್ಳ ಸಾಗಾಟ ನಡೆಸಿ ವೇಶ್ಯಾವಾಟಿಕೆ ನಡೆಸುವ ಜಾಲವನ್ನು ಒಡನಾಡಿ ಸಂಸ್ಥೆ ಮತ್ತು ಸಿಐಡಿ ಪೊಲೀಸರು ಮಂಗಳವಾರ ಭೇದಿಸಿದ್ದಾರೆ. ಮಂಗಳೂರು ಕುಳಾಯಿ ಹೊನ್ನಕಟ್ಟೆ ಬಳಿ ಸೂತ್ರಧಾರಿ ಮಹಿಳೆ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದು, 4 ಬಾಲಕಿಯರನ್ನು ರಕ್ಷಿಸಿದ್ದಾರೆ.
ವಿವರ: ಹಿಂದೆ ಬಾರ್‌ಗರ್ಲ್ ಆಗಿದ್ದ ಹಾಸನ ಬೇಲೂರಿನ ತಾರಾ ಹೊನ್ನಕಟ್ಟೆ ಬಳಿಯ ಕುಳಾಯಿಯಲ್ಲಿ ಈ ದಂಧೆ ನಡೆಸುತ್ತಿದ್ದಳು.
ಸಿಐಡಿ ಪೊಲೀಸರು ಒಡನಾಡಿ ಸಂಸ್ಥೆ ಮಗಳವಾರ ಜಂಟಿ ಕಾರ್ಯಾಚರಣೆ ನಡೆಸಿದರು. ಮೈಸೂರು, ಮಂಡ್ಯ, ಎಚ್.ಡಿ.ಕೋಟೆಯ ಹಿಂದುಳಿದ, ಬಡ ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆಗೆ ಬಳಸುತ್ತಿದ್ದರು.
ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯ ಅನೇಕ ಲಾಡ್ಜ್‌ಗಳಲ್ಲಿ ಈಕೆ ವ್ಯವಹಾರ ಮತ್ತು ಒಪ್ಪಂದ ಇತ್ತು.
ಪ್ರತಿಷ್ಠಿತರೇ ಈಕೆಯ ಗಿರಾಕಿಗಳು ಎಂದು ರಕ್ಷಿತ ಬಾಲಕಿ ಸುದ್ದಿಗಾರರಿಗೆ ತಿಳಿಸಿದ್ದಾಳೆ. ಪೊಲೀಸರಿಗೆ ಮಾಮೂಲಿ ಕಳುಹಿಸುತ್ತಿದ್ದೆ ಎಂದು ಬಂಧಿತೆ ತಾರಾ ಬಾಯಿ ಬಿಟ್ಟಿದ್ದಾಳೆ.
ಕರ್ನಾಟಕ ಸಂಘಟಿತ ಕಟ್ಟಡ ಹಾಗೂ ಟೈಲರಿಂಗ್ ಕ್ಷೇಮಾಭಿವೃದ್ಧಿ ಸಂಘ ಎಂಬ ಸಂಸ್ಥೆ ಪದಾಧಿಕಾರಿ ಎಂಬ ಗುರುತು ಚೀಟಿ ಹೊಂದಿರುವ ತಾರಾ ವಿವಿಧ ಮಹಿಳೆಯರ ಸಹಾಯದಿಂದ ಬಾಲಕಿಯರನ್ನು ಕರೆ ತರುತ್ತಿದ್ದಳು. ಬಾಲಕಿ ಪ್ರೌಢಳಾದ ತಕ್ಷಣ ಹೆದರಿಸಿ, ಬೆದರಿಸಿ ಪಾಪಕೃತ್ಯಕ್ಕೆ ತಳ್ಳುತ್ತಿದ್ದಳು.
ತಂಗಿಗೆ ವಿದ್ಯೆ, ಅಕ್ಕನಿಗೆ ಶಿಕ್ಷೆ: ತನ್ನ ತಂಗಿಗೆ ವಿದ್ಯಾಭ್ಯಾಸಕ್ಕೆ ಹಣ ಒದಗಿಸಲು ತನ್ನನ್ನು ಈ ದಂಧೆಗೆ ದೂಡಿದರು ಎಂದು ಬಾಲಕಿ ಅಳಲು ತೋಡಿಕೊಂಡಿದ್ದಾಳೆ. ರಕ್ಷಿತರಲ್ಲಿ ಇಬ್ಬರು ಬಾಲಕಿಯರನ್ನು ದಂಧೆಗೆ ಬಳಸಲಾಗಿದೆ. ಇನ್ನಿಬ್ಬರನ್ನು ಮನೆಗೆಲಸಕ್ಕೆ ಬಳಸಲಾಗಿದೆ.
ತಲಪಾಡಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಮನೆಯಲ್ಲಿದ್ದ 14ರ ಹರೆಯದ ಬಾಲಕಿಯನ್ನು ಚೈಲ್ಡ್ ಲೈನ್ ತಂಡದ ಉಪಸ್ಥಿತಿಯಲ್ಲಿ ರಕ್ಷಿಸಲಾಗಿದೆ. ಈಕೆಯ ಅಕ್ಕ ತಾರಾ ವಶದಲ್ಲಿದ್ದಳು.
ಆಕೆಯನ್ನು ರಕ್ಷಿಸಲಾಗಿದೆ. ರಕ್ಷಿಣೆಗೊಂಡ ಬಾಲಕಿಯರ ವಯಸ್ಸು 12, 14, 16 ವರ್ಷ, ಇನ್ನೊಬ್ಬ 8ವರ್ಷದ ಬಾಲಕಿ ಮನೆಗೆಲಸ ಮಾಡುತ್ತಿದ್ದಳು.
ಮೂವರ ಸೆರೆ: ಚಿಕ್ಕಮಗಳೂರಿನ ದೀಪು ಹಾಗೂ ಮಂಗಳೂರು ಸುರತ್ಕಲ್‌ನ ಜಯಣ್ಣ ಮಕ್ಕಳನ್ನು ಸರಬರಾಜು ಮಾಡುತ್ತಿದ್ದ ಜಾಲದಲ್ಲಿ ಶಾಮೀಲಾಗಿದ್ದು, ತಾರಾ ಸಹಿತ ಈ ಮೂವರನ್ನೂ ಬಂಧಿಸಲಾಗಿದೆ.
ಇಬ್ಬರು ಬಾಲಕಿಯರನ್ನು ಬೆಂಗಳೂರು, ಮಂಗಳೂರು, ಚಾಮರಾಜನಗರ, ಮೂಡುಬಿದಿರೆ ಸಹಿತ ರಾಜ್ಯದ ವಿವಿಧೆಡೆ ಲಾಡ್ಜ್‌ಗಳಲ್ಲಿ ವೇಶ್ಯಾವಾಟಿಕೆಗೆ ಬಳಸಲಾಗಿತ್ತು.
ಸಿಐಡಿ ಡಿಐಜಿ ಸೋನಂದಾ ಮುಖರ್ಜಿ ಮಾರ್ಗದರ್ಶನದಲ್ಲಿ ಸಿಐಡಿ ಅಧಿಕಾರಿ ಅನಿಲ್ ಕುಮಾರ್ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

