ಮಂಗಳೂರು ದಕ್ಷಿಣ: ಒಳರಸ್ತೆ ಸ್ಥಿತಿ ವಿಲಕ್ಷಣ!
ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರ ಎಂದರೆ ಮಹಾನಗರ ಪಾಲಿಕೆ. ಇಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲಿಕೆ ಅಭಿವೃದ್ಧಿಯೂ ಒಳಗೊಳ್ಳುತ್ತದೆ. ಈಗ ನೀತಿ ಸಂಹಿತೆ ತಡೆಒಡ್ಡಿರುವುದು ಟೆಂಡರ್ ಆಗಿ ಶುರುವಾದ ಕಾಮಗಾರಿಗಳಿಗೆ. ಅದೂ ಒಳರಸ್ತೆಗಳ ಅಭಿವೃದ್ಧಿ. ನೀತಿ ಸಂಹಿತೆ ಹೆಸರಲ್ಲಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಒಳರಸ್ತೆಗಳ ಸ್ಥಿತಿ ಅಯೋವುಯ ಎನ್ನುವಂತಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 200ಕ್ಕಿಂತಲೂ ಅಧಿಕ ಒಳರಸ್ತೆಗಳಿದ್ದು ಅವುಗಳ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎನ್ನುವುದು ನಾಗರಿಕರ ಹಲವು ವರ್ಷಗಳ ಬೇಡಿಕೆ. ಕೊನೆಗೂ ಹಣವೇನೋ ಮಂಜೂರಾಯಿತು, ಟೆಂಡರ್ ಕೂಡ ಕರೆಯಲಾಯಿತು. ಆದರೆ ಕಾಮಗಾರಿ ಶುರುವಾಗಬೇಕು ಎನ್ನುವಾಗ ಪಾಲಿಕೆ ಚುನಾವಣೆಯ ನೀತಿ ಸಂಹಿತೆ, ಮತ್ತೆ ವಿಧಾನಸಭಾ ಚುನಾವಣೆ ನೀತಿ ಸಂಹಿತೆ. ರು. 8 ಕೋಟಿಯಲ್ಲಿ 200 ಒಳರಸ್ತೆ ಕಾಮಗಾರಿ ನಡೆಯಬೇಕಿತ್ತು. ನೀತಿ ಸಂಹಿತೆ ಮುಗಿಯುವುದು ಮೇ 10ರಂದು. ನಂತರ ಡಾಂಬರೀಕರಣ ಕಾಮಗಾರಿ ಶುರುವಾಗಬೇಕು. ಮಳೆ ಬಂದರೆ ಮುಂದಿನ ವರ್ಷವೇ ಗತಿ.
ರೋಪ್ವೇ ತೂಗುಯ್ಯಾಲೆ: ದಕ್ಷಿಣ ಭಾರತದಲ್ಲೇ ಅತೀ ಉದ್ದದ ತಣ್ಣೀರುಬಾವಿ-ಬೆಂಗ್ರೆ ನಡುವಿನ ರೋಪ್ವೇ ಕಾಮಗಾರಿ ಸದ್ಯ ಸ್ಥಗಿತಗೊಂಡಿದೆ. ಚುನಾವಣೆ ಘೋಷಣೆ ಮೊದಲೇ ರು. 12 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಯೋಜಕ ಕಂಪನಿ ಟೆಂಡರ್ ವಹಿಸಿ ಪಿಲ್ಲರ್ ಕಾಮಗಾರಿಗೆ ಮುಂದಾಗಿತ್ತು. ಬಳಿಕ ನೀತಿಸಂಹಿತೆ ಕಾರಣಕ್ಕೆ ಕಾಮಗಾರಿ ತಡೆಹಿಡಿಯಲ್ಪಟ್ಟಿದೆ. ಚಾಲನೆಯಲ್ಲಿರುವ ಕಾಮಗಾರಿಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಇಲ್ಲಿ ಮಾತ್ರ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕೋರ್ಟ್ ಸಮುಚ್ಛಯ, ಮಿನಿ ವಿಧಾನಸೌಧ, ಸಿಂಥೆಟಿಕ್ ಟ್ರ್ಯಾಕ್ನ ಅಂತಿಮ ಹಂತದ ಕಾಮಗಾರಿ, ಕೆಲವೆಡೆ ಫುಟ್ಪಾತ್, ಒಳಚರಂಡಿ ಕಾಮಗಾರಿಗೆ ತೊಡಕಾಗಿಲ್ಲ.
ಮಳೆಗಾಲಕ್ಕೆ ಮುನ್ನ “AËÚþÚß’ ಇಲ್ಲ: ನಗರ ಆಶ್ರಯ ಯೋಜನೆಯಲ್ಲಿ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಿ, 600 ಮಂದಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಿದಾಗ ನೀತಿ ಸಂಹಿತೆ ಅಡ್ಡಿಬಂದಿದೆ. ಇನ್ನೂ 100 ಮಂದಿ ಹಕ್ಕುಪತ್ರಕ್ಕೆ ಅರ್ಜಿ ಹಾಕಿದ್ದಾರೆ.
ಆದರೆ ನೀತಿ ಸಂಹಿತೆ ಎದುರು ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಇದರಿಂದ ಮಳೆಗಾಲಕ್ಕೆ ಮುನ್ನ ಬಡವರ ಸೂರು ಕನಸು ಭಗ್ನವಾದಂತಾಗಿದೆ ಎನ್ನುತ್ತಾರೆ ಫಲಾನುಭವಿ ಮಂಜುನಾಥ್.
ಆಶ್ರಯ ಯೋಜನೆಯಲ್ಲಿ ಕಣ್ಣೂರು ಗ್ರಾಮದಲ್ಲಿ 10.50 ಎಕರೆ ಪ್ರದೇಶದಲ್ಲಿ ಫ್ಲ್ಯಾಟ್( ಜಿ ಪ್ಲಸ್ ಟು)ಮಾದರಿಯಲ್ಲಿ ನಿರ್ಮಿಸಿ ಮನೆ ಹಂಚಿಕೊಡಲು ತೀರ್ಮಾನಿಸಲಾಗಿತ್ತು. ಹಕ್ಕುಪತ್ರ ನೀಡಿದ್ದರೆ ಜಾಗ ಸಮತಟ್ಟುಗೊಳಿಸಿ ನಿರ್ಮಾಣಕ್ಕೆ ಸುಲಭವಿತ್ತು ಎನ್ನುತ್ತಾರೆ ಸ್ಥಳೀಯರು.
ರೈಲ್ವೇ ಕೆಳಸೇತುವೆ: ಬಹು ನಿರೀಕ್ಷಿತ ಬಜಾಲ್ನ ರೇಲ್ವೆ ಕೆಳ ಸೇತುವೆ ಕಾಮಗಾರಿಗೂ ನೀತಿ ಸಂಹಿತೆ ಅಪಸ್ವರ ತೆಗೆದಿದೆ. ಒಟ್ಟು ರು. 5.16 ಕೋಟಿಯಲ್ಲಿ ರು. 2.28 ಕೋಟಿಯನ್ನು ರಾಜ್ಯ ಸರ್ಕಾರ ಭರಿಸಬೇಕು.
ಉಳಿದದ್ದು ಕೇಂದ್ರದ್ದು. ರಾಜ್ಯದ ಮೊತ್ತವನ್ನು ಮಹಾನಗರ ಪಾಲಿಕೆ ಪಾವತಿಸುತ್ತದೆ. ಈ ಕುರಿತ ಆದೇಶ ಸಿದ್ಧವಾಗಿ ಇನ್ನೇನು ಪಾವತಿ ಸಮಯದಲ್ಲಿ ನೀತಿ ಸಂಹಿತೆ ಜಾರಿಗೆ ಬಂತು.
ಮೂಲಗೇಣಿ ಜಾರಿ ಬಾಕಿ: ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮೂಲಗೇಣಿ ಕುಮ್ಕಿ ಹಕ್ಕನ್ನು ಜಾರಿಗೊಳಿಸಲಾಗಿದೆ. ಸುಮಾರು 600ಕ್ಕೂ ಅಧಿಕ ಮಂದಿ ಇದರ ಫಲಾನುಭವಿಗಳಿದ್ದರೂ ನೀತಿ ಸಂಹಿತೆ ಸದ್ಯಕ್ಕೆ ತಡೆಹಾಕಿದೆ.
ಉಳಿದಂತೆ ಬೆಂದೂರಿನಲ್ಲಿ ರು. 15 ಕೋಟಿಯಲ್ಲಿ ರಂಗಮಂದಿರ, ರು. 6 ಕೋಟಿಯಲ್ಲಿ ಅತ್ಯಾಧುನಿಕ ಈಜುಕೊಳ ಆಡಳಿತಾತ್ಮಕ ಮಂಜೂರಾತಿ ಹಂತದಲ್ಲಿ ಬಾಕಿಯುಳಿದಿದೆ. ಪಿಳಿಕುಳದಲ್ಲಿ ಅಕ್ವೇರಿಯಂ ಪಾರ್ಕ್, ತಣ್ಣೀರುಬಾವಿಯಲ್ಲಿ ಅಂತಾರಾಷ್ಟ್ರೀಯ ಗಾರ್ಲ್ಫ್ ಕೋರ್ಸ್, ಕದ್ರಿಯಲ್ಲಿ ಸಂಗೀತ ಕಾರಂಜಿ ಸದ್ಯಕ್ಕೆ ಕನಸು.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

