ದಕ್ಷಿಣ ಕನ್ನಡ

ಮಹಿಳೆ ಮೇಲೆ ಹಲ್ಲೆ: ಆರೋಪಿಗೆ ನ್ಯಾಯಾಂಗ ಬಂಧನ

Published On :

ಸುಳ್ಯ: ಕ್ರೆಡಿಟ್ ಸೊಸೈಟಿಯೊಂದರಲ್ಲಿ ಇಟ್ಟಿದ್ದ ಪಾಲು ಬಂಡವಾಳವನ್ನು ಹಿಂದಕ್ಕೆ ಪಡೆಯಲು ಬ್ಯಾಂಕ್ ಕಚೇರಿಗೆ ಹೋದ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಯನಗರ ಮಿಲಿಟ್ರಿ ಗ್ರೌಂಡ್ ನಿವಾಸಿ ತೈವಾಣಿ ಅಮ್ಮನ್ ಕ್ರೆಡಿಟ್ ಸೊಸೈಟಿಯಲ್ಲಿ ಎರಡೂವರೆ ವರ್ಷಗಳ ಹಿಂದೆ ರು. 35 ಸಾವಿರ ಪಾಲು ಬಂಡವಾಳ ಹೂಡಿದ್ದರು. ಮಗಳ ಮದುವೆಗೆ ಹಣದ ಅಗತ್ಯವಿದ್ದು, ಪಾಲು ಬಂಡವಾಳವನ್ನು ಹಿಂದಕ್ಕೆ ನೀಡಬೇಕು ಎಂದು ಮಾ. 18ರಂದು ಅರ್ಜಿ ಹಾಕಿದ್ದರು. ಏ. 16ರಂದು ಬ್ಯಾಂಕಿಗೆ ಹೋದಾಗ ಶಿವ ಪೆರುಮಾಳ್ ಎಂಬಾತ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹಣ ವಾಪಾಸು ಕೋರಿದ್ದ ಅರ್ಜಿ ತಿರಸ್ಕೃತ
ಸುಳ್ಯ: ನೀತಿಸಂಹಿತೆ ಕಾರಣ ಪೋಲೀಸರು ವಶಪಡಿಸಿಕೊಂಡ ಹಣ ನೀಡಲು ಗುತ್ತಿಗೆದಾರ ಕೆ.ಎಸ್. ಗೋಪಾಲಕೃಷ್ಣ ಸುಳ್ಯ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.ಗೋಪಾಲಕೃಷ್ಣ ಕೆ.ಎಸ್. ರು. 8 ಲಕ್ಷ ಹಣ ಬ್ಯಾಂಕಿನಿಂದ ಡ್ರಾ ಮಾಡಿ ಹೋಗುತ್ತಿದ್ದಾಗ ಪೋಲೀಸರು ಅದನ್ನು ನೀತಿಸಂಹಿತೆ ಹಿನ್ನಲೆಯಲ್ಲಿ ಏ. 13ರಂದು ವಶಪಡಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡು ಹಣವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.