ಬ್ರಾಹ್ಮಣರ ವಿರುದ್ಧ ವಿನಾ ದೂಷಣೆ ಯಾಕೆ? ರಾಘವೇಶ್ವರಶ್ರೀ
ಮಂಗಳೂರು: ತನಗಾಗಿ ಸ್ವಲ್ಪ, ಪ್ರಪಂಚವೇ ಸರ್ವಸ್ವ ಎನ್ನುತ್ತಾ ಜಗತ್ತಿಗೇ ಬೆಳಕು ಕೊಟ್ಟವರು ಬ್ರಾಹ್ಮಣರು. ನಿಸ್ವಾರ್ಥದಿಂದ ಜೀವನ ಸಾಗಿಸುವ ಬ್ರಾಹ್ಮಣರ ವಿರುದ್ಧ ವಿನಾ ಕಾರಣ ದೂಷಣೆ ಯಾಕೆ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ಸಂಜೆ ಬ್ರಾಹ್ಮಣ ಜಾಗೃತಿ ಸಮ್ಮೇಳನ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.
ಈಗಲೂ ಬ್ರಾಹ್ಮಣರನ್ನು ನಿಂದಿಸುವುದು ಮುಂದುವರಿದಿದೆ. ಅವರಿವರ ಲಾಭಕ್ಕಾಗಿ ನಿಂದಿಸುತ್ತಾರೆ ಹೊರತು ಹೊಟ್ಟೆಉರಿಯಿಂದ ಅಲ್ಲ. ಬ್ರಾಹ್ಮಣರು ಜಾತಿವಾದ ಮಾಡುತ್ತಿಲ್ಲ, ರಾಜಕೀಯವಾಗಿಯೂ ಬ್ರಾಹ್ಮಣರು ಮುಂದೆ ಬಂದಿಲ್ಲ. ಈ ಗೊಂದಲಗಳ ಮಧ್ಯೆ 'ಬ್ರಾಹ್ಮಣಿಸಂ' ಆಗಬೇಕು. ಇದರಿಂದ ಸಮಾಜಕ್ಕೆ ತೊಂದರೆಯಾಗದು. ಬ್ರಾಹ್ಮಣರ ಜೀವನ ನಂದಾದೀಪವಾಗಲಿ ಎಂದರು.
ಬೆಂಗಳೂರು ಮಯ್ಯಾಸ್ ಬಿವರೇಜಸ್ ಮತ್ತು ಫುಡ್ಸ್ನ ಅಧ್ಯಕ್ಷ ಡಾ.ಪಿ.ಸದಾನಂದ ಮಯ್ಯ ಅಧ್ಯಕ್ಷತೆ ವಹಿಸಿದ್ದರು.
ನಿಲುವುಗಳ ವಿರುದ್ಧ ಹೋರಾಡಿ: ವಿದ್ವಾಂಸ, ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ ಸಮಾರೋಪದಲ್ಲಿ ಮಾತನಾಡಿ, ಬ್ರಾಹ್ಮಣ ವಿರೋಧಿ ನಿಲುವುಗಳ ವಿರುದ್ಧ ಬ್ರಾಹ್ಮಣರು ಹೋರಾಟ ನಡೆಸಬೇಕು. ಬ್ರಾಹ್ಮಣರ ಹೆಣ್ಮಕ್ಕಳ ಮತಾಂತರ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದರು.
ಈ ಸಂದರ್ಭ ವಿವಿಧ ಸಾಧಕರನ್ನು ರಾಘವೇಶ್ವರಶ್ರೀ ಸನ್ಮಾನಿಸಿದರು. ವಿವಿಧ 15 ಬೇಡಿಕೆಯುಳ್ಳ ಠರಾವನ್ನು ಆರ್.ಡಿ.ಶಾಸ್ತ್ರಿ ಮಂಡಿಸಿದರು.
ಹೊರನಾಡು ಅನ್ನಪೂಣೇಶ್ವರಿ ದೇವಸ್ಥಾನ ಧರ್ಮಕರ್ತ ಭೀಮೇಶ್ವರ ಜೋಷಿ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಯರಾಮ ಭಟ್, ಇಂಡಿಯನ್ ಓವರ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನರೇಂದ್ರ, ಪಾವಂಜೆ ಕೃಷ್ಣಭಟ್, ಎಂ.ಬಿ. ಮುಳಿಯ ಹಾಜರಿದ್ದರು.
ಎಸ್.ಎಂ. ಹೆಗಡೆ ಸ್ವಾಗತಿಸಿ, ಪ್ರದೀಪ್ ಕುಮಾರ್ ಕಲ್ಕೂರ ವಂದಿಸಿದರು. ಮಾಧುರಿಶ್ರೀರಾಮ್ ನಿರೂಪಿಸಿದರು. ಬಳಿಕ ಚಿಟ್ಟಾಣಿ ರಾಮಚಂದ್ರ ಹೆಗಡೆ ಬಳಗದಿಂದ ಯಕ್ಷಗಾನ, ವಿವಿಧ ನಾಟ್ಯ ಶಾಲೆಗಳಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

