ಇಂದಿನಿಂದ ಕವತ್ತಾರು ಅಬ್ಬಗದಾರಗ ಮಹಾಲಿಂಗೇಶ್ವರ ದೇವಳದ ಸಿರಿ ಜಾತ್ರೆ
ಮೂಲ್ಕಿ: ಇಲ್ಲಿನ ಸಮೀಪದ ಕವತ್ತಾರಿನ ಶ್ರೀ ಅಬ್ಬಗ ದಾರಗ ಮಹಾಲಿಂಗೇಶ್ವರ ದೇವಳದಲ್ಲಿ ಹುಣ್ಣಿಮೆ ಸಿರಿಗಳ ಜಾತ್ರೆಯು ಗುರುವಾರ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವವು ಬುಧವಾರದಿಂದ 28ರವರೆಗೆ ಜರಗಲಿದೆ.
ಬುಧವಾರ ಮಧ್ಯಾಹ್ನ ಧ್ವಜಾರೋಹಣ, ಅನ್ನಸಂತರ್ಪಣೆ, ರಾತ್ರಿ ಬಲಿ ಉತ್ಸವ, ಗುರುವಾರ ರಾತ್ರಿ ಹುಣ್ಣಿಮೆ ಸಿರಿ ಜಾತ್ರೆ, 26ರಂದು ಬೆಳಗ್ಗೆ ತುಲಾಭಾರ ಸೇವೆ, ಅಂಬೋಡಿ, ರಾತ್ರಿ ಉತ್ಸವ ಬಲಿ, 27ರಂದು ವರಸರಿ, ಮಹಾಪೂಜೆ, ರಾತ್ರಿ ಶ್ರೀ ಭೂತ ಬಲಿ, ಶಯನ ಕಾರ್ಯಕ್ರಮ ನಡೆಯಲಿದೆ.
28ರಂದು ಬೆಳಗ್ಗೆ ಕವಾಟೋದ್ಘಾಟನೆ, ರಾತ್ರಿ ಧೂಮಾವತಿ ದೈವದ ಭಂಡಾರ ಆಗಮನ, ಓಕುಳಿ, ಅವಭ್ರತ, ಧ್ವಜಾವರೋಹಣ, 29ರಂದು ಧೂಮಾವತಿ ದೈವದ ನೇಮೋತ್ಸವ ಜರುಗಲಿದೆ.
30ರಂದು ಬ್ರಹ್ಮಸ್ಥಾನದಲ್ಲಿ ಸಮಾರಾಧನೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಪಿಲಿಮೊಗರು ಶಾಲೆ ವಿದ್ಯಾರ್ಥಿಗಳು
ಬಂಟ್ವಾಳ: ದೂರದರ್ಶನ ಚಂದನ ವಾಹಿನಿಯಲ್ಲಿ 24, 25, 30 ಮತ್ತು ಮೇ 1ರಂದು ಬೆಳಗ್ಗೆ 11 ಗಂಟೆಗೆ ಹಾಗೂ ರಾತ್ರಿ 10.30ಕ್ಕೆ ಪ್ರಸಾರವಾಗುವ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪಿಲಿಮೊಗರು ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಜೆನಿಶಾ, 7ನೇ ತರಗತಿಯ ತೇಜಸ್, 6ನೇ ತರಗತಿಯ ರಕ್ಷಿತ್, 6ನೇ ತರಗತಿಯ ಅರುಣ್ ಪ್ರಭು ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

