ಡಿಸೆಂಬರ್ಗೆ 'ಭವಿಷ್ಯತ್ತಿಗಾಗಿ ಯೋಗ': ವೀರೇಂದ್ರ ಹೆಗ್ಗಡೆ
ಮಂಗಳೂರು: ವಿವೇಕಾನಂದರ 150ನೇ ಜನ್ಮಶತಮಾನೋತ್ಸವ ಸಲುವಾಗಿ ನವೆಂಬರ್ ಅಥವಾ ಡಿಸೆಂಬರ್ನಲ್ಲಿ 4 ಜಿಲ್ಲೆಗಳ 10 ಕಡೆಗಳಲ್ಲಿ ಏಕಕಾಲಕ್ಕೆ 3 ಲಕ್ಷ ವಿದ್ಯಾರ್ಥಿಗಳನ್ನು ಒಂದೇ ರೀತಿಯ ಯೋಗ ಪ್ರದರ್ಶನ ನಡೆಸಿ ದಾಖಲೆ ನಿರ್ಮಿಸುವ ಕಾರ್ಯಕ್ರಮ ನಡೆಸಲಾಗುವುದು. ಇದಕ್ಕೆ 'ಭವಿಷ್ಯತ್ತಿಗಾಗಿ ಯೋಗ' ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆ ನಡೆಯುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಶಾಂತಿವನ ಟ್ರಸ್ಟ್, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ಬುಧವಾರ ನಡೆದ 13ನೇ ರಾಜ್ಯ ಮಟ್ಟದ ಅಂಚೆ-ಕುಂಚ ಪುರಸ್ಕಾರ ಸಮಾರಂಭ ಮತ್ತು 22ನೇ ಬೃಹತ್ ಯೋಗ-ಆರೋಗ್ಯ ಶಿಬಿರ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ 16 ಜಿಲ್ಲೆಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ. 25 ಲಕ್ಷ ಸದಸ್ಯರಿದ್ದು, ರು. 2 ಸಾವಿರ ಕೋಟಿ ವ್ಯವಹಾರ ನಡೆದಿದೆ. ಮಂಗಳೂರು ತಾಲೂಕಲ್ಲಿ ಶೇ.ನೂರು ವ್ಯವಹಾರ ನಡೆಸಲಾಗಿದ್ದು, ಶೇ.ನೂರು ಮರುಪಾವತಿಯಾಗಿದೆ. ರು. 125 ಕೋಟಿ ವ್ಯವಹಾರ ನಡೆಸಲಾಗಿದೆ. ಇದು ದಾಖಲೆಯಾಗಿದ್ದು, ಇತರರಿಗೆ ಮಾದರಿಯಾಗಿದೆ ಎಂದರು.
ಕೆಟ್ಟ ಹೆಸರು ಒಳ್ಳೇದಲ್ಲ: ಪ್ರೊ.ನಿಸಾರ್: ಧರ್ಮದ ಹೆಸರಲ್ಲಿ ಧರ್ಮಬಾಹಿರ ಕೃತ್ಯವೆಸಗಿ ಒಂದು ಸಮುದಾಯಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಸರಿಯಲ್ಲ ಎಂದು ಹಿರಿಯ ಕವಿ ಪ್ರೊ.ನಿಸಾರ್ ಅಹಮ್ಮದ್ ಹೇಳಿದರು.
ಹಾಲು ಒಡೆಯುವುದಕ್ಕೆ ಹಸು ಕಾರಣವಲ್ಲ, ಹಾಲಿಗೆ ಸೇರಿದ ಕೆಟ್ಟ ಗುಣ ಕಾರಣ. ಹಸುವಿನ ಸ್ಥಾನದಲ್ಲಿರುವ ಸಮುದಾಯದ ದೂಷಣೆ ಮಾಡಬಾರದು. ಎಲ್ಲ ಧರ್ಮದ ತಿರುಳು ಒಂದೇ ಆಗಿದೆ. ಬಳಸುವ ಬಗೆ ವ್ಯತ್ಯಾಸವಾಗಿದೆ ಅಷ್ಟೇ ಎಂದರು.
ಈ ಸಂದರ್ಭ ಸ್ಪರ್ಧಾ ವಿಜೇತರನ್ನು ಡಾ.ವೀರೇಂದ್ರ ಹೆಗ್ಗಡೆ ಪುರಸ್ಕರಿಸಿದರು. ವಿದ್ಯಾಲಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಯೋಗ ಶಿಬಿರಾರ್ಥಿ ಶಶಿ ಸುರೇಶ್, ಸೀಲಾ ವಾಮಂಜೂರು, ಶಿಕ್ಷಕ ಕಾಶೀನಾಥ್, ಭಾಮಿಕಾ ಭಟ್ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಸಂಪತ್ ಕುಮಾರ್, ಯೋಗ, ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಶಶಿಕಾಂತ್ ಜೈನ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಲಕ್ಷ್ಮೀಶ ತೋಳ್ಪಾಡಿತ್ತಾಯ, ಯೋಜನಾಧಿಕಾರಿ ರಾಘವ, ಕಾಲೇಜು ಪ್ರಾಂಶುಪಾಲ ದಯಾನಂದ ಕಟೀಲ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

