ದಕ್ಷಿಣ ಕನ್ನಡ

ಮಂಗಳೂರು: ಲ್ಯಾಂಡ್‌ಟ್ರೇಡ್ಸ್ ಅಟ್ಲಾಂಟಿಸ್ ಶಂಕುಸ್ಥಾಪನೆ

Published On :

ಮಂಗಳೂರು: ಖ್ಯಾತ ಕಟ್ಟಡ ನಿರ್ಮಾಣ ಸಂಸ್ಥೆ ಲ್ಯಾಂಡ್‌ಟ್ರೇಡ್ಸ್‌ನ ಬೆಂದೂರ್‌ವೆಲ್ ಅಟ್ಲಾಂಟಿಸ್ ವಸತಿ ಸಂಕೀರ್ಣಕ್ಕೆ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ್ ಭಟ್ ಶಂಕುಸ್ಥಾಪನೆ ನೆರವೇರಿಸಿದರು. ಅಂತಾರಾಷ್ಟ್ರೀಯ ಸಂಸ್ಥೆ ಕ್ರಿಸಿಲ್ ಲ್ಯಾಂಡ್ ಟ್ರೇಡ್ಸ್ ವಸತಿ ಸಂಕೀರ್ಣಗಳಿಗೆ ಅತ್ಯುತ್ತಮ ಸ್ಟಾರ್ ರೇಟಿಂಗ್ ನೀಡಿದೆ. ಇನ್ನು ಮುಂದೆಯೂ ಇದೇ ರೀತಿ ಉತ್ತಮ ವಸತಿ ಸಂಕೀರ್ಣಗಳನ್ನು ನಿರ್ಮಿಸಲಿ ಎಂದು ಅವರು ಹಾರೈಸಿದರು.
 ಕಾರ್ಪೊರೇಶನ್ ಬ್ಯಾಂಕ್ ಉಪಮಹಾಪ್ರಬಂಧಕ ಎಂ.ಎ. ರಶೀದ್ ಮಾತನಾಡಿ, ರಿಯಲ್ ಎಸ್ಟೇಟ್ ಉದ್ಯಮ ಏರುಗತಿಯಲ್ಲಿದ್ದು, ಮೌರಿಷ್ಕಾ, ಅಟ್ಲಾಂಟಿಸ್ ಮೊದಲಾದ ಅತ್ಯುತ್ತಮ ವಸತಿ ಯೋಜನೆ ರೂಪಿಸುತ್ತಿರುವ ಹೆಬ್ಬಾರ್ ವಿಶ್ವಾಸಾರ್ಹ ಉದ್ಯಮಿ ಎಂದು ರೂಪಿಸಿದ್ದಾರೆ. ಇದರಲ್ಲಿರುವ ಪ್ರತಿ ಮನೆ ಅರಮನೆಯಂತಿದೆ ಎಂದರು.
 ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ನಿತ್ಯಾನಂದ ಸ್ವಾಮೀಜಿ ಧಾರ್ಮಿಕ ವಿಧಿ ನಡೆಸಿಕೊಟ್ಟರು. ಬೆಂದೂರ್ ಚರ್ಚ್‌ಧರ್ಮಗುರು ಆ್ಯಂಟನಿ ಸೆರಾವೊ, ಧಾರ್ಮಿಕ ಮುಖಂಡ ಅಝೀಝ್ ದಾರಿಮಿ, ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಕಾರ್ಪೊರೇಟರ್ ನವೀನ್ ಡಿಸೋಜ, ಕ್ರೆಡಾಯ್ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಇದ್ದರು.
ಅತ್ಯಾಧುನಿಕ ಸೌಲಭ್ಯ: ಮನೆಯವರಿಗೆ ಮಾತ್ರವಲ್ಲದೆ ಅತಿಥಿಗಳ ಕಾರುಗಳಿಗೂ ಪಾರ್ಕಿಂಗ್ ಅವಕಾಶ. ಅತ್ಯಾಧುನಿಕ ಸೌಲಭ್ಯಗಳು. ಹವಾ ನಿಯಂತ್ರಿತ ಜಿಮ್, ಸ್ಪಾ, ಹೋಮ್ ಥಿಯೇಟರ್ ಸಹಿತ ಅನೇಕ ಸೌಲಭ್ಯಗಳಿಲಿವೆ. ಪತ್ರಕರ್ತ ಮನೋಹರ ಪ್ರಸಾದ್ ಸ್ವಾಗತಿಸಿದರು. ಲ್ಯಾಂಡ್‌ಟ್ರೇಡರ್ಸ್‌ನ ಶ್ರೀನಾಥ ಹೆಬ್ಬಾರ್ ಗಣ್ಯರನ್ನು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.