ದಕ್ಷಿಣ ಕನ್ನಡ

ಸ್ಥಳೀಯ ಮಸೀದಿ, ಮಂದಿರ ಮೊದಲು ಸರಿಪಡಿಸಿ, ಆಮೇಲೆ ಅಯೋಧ್ಯೆ ರಾಮಮಂದಿರ ಕಟ್ಟಿ: ದೇವಿಪ್ರಸಾದ್ ಶೆಟ್ಟಿ

Published On :

ಕಾಪು: ಪುರಾತನ ಹಿನ್ನೆಲೆಯಿರುವ ದೇವಸ್ಥಾನಗಳು, ಐತಿಹಾಸಿಕ ಚರ್ಚು, ಮಸೀದಿಗಳು ಶಿಥಿಲಾವಸ್ಥೆ ತಲುಪಿ ಪಾಳು ಬಿದ್ದಿದ್ದರೂ ಬಿಜೆಪಿ ಸರ್ಕಾರ ಚುನಾವಣೆ ಬಂದಾಗ ಅಯೋಧ್ಯೆಯ ರಾಮ ಮಂದಿರದ ವಿಷಯವೆತ್ತಿ ಬೇಳೆ ಬೇಯಿಸ ಹೊರಡುತ್ತಿದೆ. ಬಿಜೆಪಿ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರೇ ಮುಖ್ಯಸ್ಥರಾಗಿರುವ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಕೆಲವು ದೇವಸ್ಥಾಗಳಲ್ಲಿ ಎಣ್ಣೆಯಿದ್ದರೆ ಬತ್ತಿಕಟ್ಟು ಇಲ್ಲ ಎಂಬಂಥ ಪರಿಸ್ಥಿತಿ ಇದೆ. ಮೊದಲು ಇದನ್ನು ಸರಿಪಡಿಸಿ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಮುಂದಾಗಲಿ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಉಚ್ಚಿಲದ ಭಾಸ್ಕರ ನಗರದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ರಾಜಕಾರಣವನ್ನು ಜತೆಗೂಡಿಸುವುದು ತಪ್ಪು ಮಾತ್ರವಲ್ಲ, ಅಪಾಯಕಾರಿ ಕೂಡ. ಧಾರ್ಮಿಕ ಪ್ರಚೋದನೆಯಿಂದ ಯಾರಿಗೂ ಲಾಭವಿಲ್ಲ. ಆದ್ದರಿಂದ ಧರ್ಮಗಳ ವಿರುದ್ಧ ಅನಗತ್ಯ ಗೊಂದಲಗಳಿಗೆ ಕಾರಣವಾಗುತ್ತದೆ. ಇದಕ್ಕೆಲ್ಲಾ ಜೆಡಿಎಸ್ ಅಧಿಕಾರ್ಕೇರುವುದೇ ಉತ್ತರ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಕಾಪು ಪರಿಸರದ ದೈವಸ್ಥಾನ- ದೇವಸ್ಥಾನಗಳು, ಮಸೀದಿ- ಚರ್ಚುಗಳಿಗೆ ಭೇಟಿ ನೀಡಿ ಸಾಲ್ಯಾನ್ ಪರ ಮತಯಾಚಿಸಿದರು. ಪಕ್ಷದ ಮುಖಂಡರಾದ ವಾಸುದೇವ್ ರಾವ್, ಶಾಲಿನಿ ಶೆಟ್ಟಿ ಕೆಂಚನೂರು, ಏ.ಕೆ. ಸುಲೇಮಾನ್, ರಫೀಕ್ ಉಚ್ಚಿಲ, ರಜಾಕ್, ಉಸ್ಮಾನ್, ವಿಶ್ವನಾಥ್ ದೊಡ್ಡಮನೆ, ಸುನಿಲ್, ಪುಷ್ಪರಾಜ್ ಸಾಲಿಯಾನ್, ಪ್ರದೀಪ್, ಜಹೀರ್ ಮುಂತಾದವರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.