ಜನ ಸಾಕಪ್ಪ ಸಾಕು ಎನ್ನುತ್ತಿದ್ದಾರೆ:ಪರಮೇಶ್ವರ
ಮಂಗಳೂರು: ಸರ್ಕಾರಿ ಜಾಗ ಮಾರಾಟ ಮಾಡಿ ಬಿಜೆಪಿಯವರು ಹಣ ಮಾಡಿದರು. ಪಿಂಚಣಿ ನೀಡಿಲ್ಲ, ಮಾಸಾಶನ ಕೊಟ್ಟಿಲ್ಲ, ಬಿಪಿಎಲ್ ಕಾರ್ಡ್, ಕುಡಿಯುವ ನೀರು ಕೊಡಲಿಲ್ಲ. ಜನರು ಸಾಕಪ್ಪ ಸಾಕು ಎನ್ನುತ್ತಿದ್ದಾರೆ, ಬದಲಾವಣೆ ಬಯಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದರು.
ನೆಹರು ಮೈದಾನದಲ್ಲಿ ಶನಿವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಬಂದರು ಪಟ್ಟಣವಾದ ಮಂಗಳೂರನ್ನು ಅಭಿವೃದ್ಧಿಯಲ್ಲಿ ಬೆಂಗಳೂರು ಬಳಿಕ ಎರಡನೇ ನಗರವನ್ನಾಗಿ ಮಾಡುತ್ತೇವೆ ಎಂದರು. ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮಾತನಾಡಿ, ಸೋನಿಯಾ ಗಾಂಧಿ ಅಪ್ಪಟ ದೇಶಭಕ್ತೆ. ಜಗತ್ತಿನಲ್ಲಿಯೇ ಅಪರೂಪದ ವ್ಯಕ್ತಿ. ಪ್ರಪಂಚದಲ್ಲಿ ಯಾರಾದರೂ ಪ್ರಧಾನಿ ಹುದ್ದೆ ಬೇಡ ಎನ್ನುವವರು ಯಾರೂ ಹುಟ್ಟಿಲ್ಲ. ಪ್ರಧಾನಿ ಹುದ್ದೆ ಸಿಕ್ಕರೆ ಬಿಡುತ್ತಾರೆಯೇ. ಸೋನಿಯಾ ಗಾಂಧಿ ದೇಶದ ಬಗ್ಗೆ ಕಾಳಜಿ ಹೊಂದಿದ್ದಾರೆ, ಭಾರತವನ್ನು ಸೂಪರ್ ಪವರ್ ಮಾಡುವ ಮಹದಾಸೆ ಹೊಂದಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

