ಮದ್ಯಪಾನಿಗಳಿಗೆ ಮತದಾನ ನಿಷೇಧಿಸಿ: ಸಚ್ಚಿದಾನಂದ ಹೆಗಡೆ
ಮಂಗಳೂರು: 'ಚುನಾವಣೆ ಸಂದರ್ಭ ಮದ್ಯಪಾನ ಮಾಡಿ ಮತ ಹಾಕಲು ಬಂದವರಿಗೆ ಮತದಾನ ನೀಡಲು ಅವಕಾಶ ನೀಡಬಾರದು' ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭ ಮದ್ಯದ ಹೊಳೆ ಹರಿಸುವ ಪ್ರವೃತ್ತಿ ನಿಲ್ಲಬೇಕು. ರಾಜ್ಯದಲ್ಲಿ ಹೊಸದಾಗಿ ಸುಮಾರು 25 ಲಕ್ಷ ಮಂದಿ ಕುಡಿತದ ಚಟಕ್ಕೆ ಒಳಗಾಗುತ್ತಿದ್ದಾರೆ. ಪ್ರತಿ ಚುನಾವಣೆ ಸಂದರ್ಭವೂ ಮದ್ಯಪಾನಿಗಳ ಸಂಖ್ಯೆ ಶೇ. 8.33 ಏರಿಕೆಯಾಗಿರುತ್ತದೆ ಎಂದರು.
ಆದ್ದರಿಂದ ಮುಂಬರುವ ವಿಧಾನಸಭಾ, ಲೋಕಸಭಾ ಚುನಾವಣೆ ಸಂದರ್ಭ ರಾಜಕೀಯ ಪಕ್ಷಗಳು ಮತದಾರರಿಗೆ ಮದ್ಯದ ಆಮಿಷ ಒಡ್ಡದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಮತದಾರರಲ್ಲಿ ಮತ ನೀಡದಂತೆ ಮಂಡಳಿ ಎಚ್ಚರಿಕೆ ನೀಡಬೇಕಾಗುತ್ತದೆ ಎಂದು ಹೇಳಿದರು.
ಸಂಶೋಧನೆ ಪ್ರಕಾರ ಕುಡಿತದಿಂದ ಮೆದುಳು ನಿಷ್ಕ್ರೀಯವಾಗುತ್ತದೆ. ಇದರಿಂದ ಸ್ಥೀಮಿತ ಕಳೆದುಕೊಳ್ಳುವುದರ ಜತೆಗೆ ನೆನಪಿನ ಶಕ್ತಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಮದ್ಯಮುಕ್ತ ಸಮಾಜದ ಸೃಷ್ಟಿಗೆ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದರು.
ಮತದಾರರ ಗಮನಕ್ಕೆ: ಮತದಾರರು ಚುನಾವಣೆ ಸಂದರ್ಭ ಹಣ ಮತ್ತು ಮದ್ಯಪಾನದ ಆಮಿಷಕ್ಕೆ ಬಲಿಯಾಗದಂತೆ ಎಚ್ಚರವಹಿಸಿ. ಹೆಂಡದ ಆಮಿಷಕ್ಕೆ ಬಲಿಯಾಗಿ ಮತಚಲಾಯಿಸಿದಲ್ಲಿ ಹೆಂಡಕ್ಕಾಗಿ ನಮ್ಮನ್ನು ನಾವೇ ಮಾರಿದಂತೆ. ಈ ರೀತಿ ಮತ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಇವುಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ, ಪೊಲೀಸ್ ಠಾಣೆಗೆ ದೂರು ನೀಡುವುದು ಕರ್ತವ್ಯ. ಉತ್ತಮ ಚಾರಿತ್ರ್ಯ, ಗುಣ, ಸಮಾಜಪರ ಚಿಂತನೆಯುಳ್ಳ, ಆಡಳಿತ ನಡೆಸಲು ಯೋಗ್ಯ ಅಭ್ಯರ್ಥಿಯನ್ನು ಆರಿಸಿಕೊಳ್ಳಿ ಎಂಬ ಕರಪತ್ರವನ್ನು ಮಂಡಳಿಯು ಮುದ್ರಿಸಿ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುತ್ತಿದೆ ಎಂದು ಹೆಗಡೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

