ದಕ್ಷಿಣ ಕನ್ನಡ

ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಅವಮಾನ: ರೈ

Published On :

ಬಂಟ್ವಾಳ: ರಾಜ್ಯದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಅತಿ ಹೆಚ್ಚು ಭಿನ್ನಮತ ಅವರನ್ನು ಕಾಡಿತ್ತು. ಅದರಿಂದ ಪಾರಾಗಾಲು ವಿಧಾನ ಸೌಧದಲ್ಲೇ ವಾಮಾಚಾರಕ್ಕೆ ಇಳಿದಿದ್ದರು. ಕಚ್ಚಾಟದಿಂದಾಗಿ ಕೆಲಸ ಮಾಡಲಾಗದೆ ವಿಧಾನ ಸೌಧದ ಮಂತ್ರಿಗಳ ಕಚೇರಿಗಳಿಗೆ ಬೀಗ ಜಡಿದಿದ್ದ ದಿನಗಳೇ ಹೆಚ್ಚು. ಇವೆರಡೂ ಕೂಡ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನ ಎಂದು ಬಂಟ್ವಾಳ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಲೇವಡಿ ಮಾಡಿದ್ದಾರೆ.
ಬಿ.ಸಿ. ರೋಡ್‌ನ ಕೈಕುಂಜೆ ಎಂಬಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಮೇ 5ರಂದು ನಡೆಯುವ ಮತದಾನ ಸ್ವಚ್ಛ, ದಕ್ಷ ಕಾಂಗ್ರೆಸ್ ಆಡಳಿತಕ್ಕೆ ಮತದಾರರು ನೀಡುವ ಆದೇಶವಾಗಿರುತ್ತದೆ. ಅಭಿವೃದ್ಧಿಯೇ ಮೂಲಮಂತ್ರ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಬಡವರಿಗೆ ಹಕ್ಕುಪತ್ರ ವಿತರಿಸಲಿಲ್ಲ. ಆಶ್ರಯ ಮನೆ ಕೊಡಲಿಲ್ಲ ಎಂದು ಆರೋಪಿಸಿದರು. ಬಿಜೆಪಿ ಕಾರ್ಯಕರ್ತರಾಗಿದ್ದ ರವಿಶಂಕರ್ ಕೈಕುಂಜೆ, ಮಾಧವ ಕುಲಾಲ್ ಬಿ.ಸಿ. ರೋಡ್, ಯೋಗೀಶ್ ಪೂಜಾರಿ ಚಿಕ್ಕಯ್ಯ ಮಠ, ನಲೇಶ್ ಚಿಕ್ಕಯ್ಯಮಠ, ರಾಮಚಂದ್ರ ಗಟ್ಟಿ, ನಾರಾಯಣ ಪೂಜಾರಿ, ವಿಜಯ ಅಲೆತ್ತೂರು, ಚರಣರಾಜ ಗಟ್ಟಿ ಅಲೆತ್ತೂರು ಕಾಂಗ್ರೆಸ್ ಸೇರಿದ್ದು ಇವರಿಗೆ ರೈ ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಸ್ವಾಗತಿಸಿದರು. ಬಂಟ್ವಾಳ ಪುರಸಭೆಯ ಸದಸ್ಯರಾದ ಮುಹಮ್ಮದ್ ಅಂಬರಬೆಟ್ಟು, ಸದಾಶಿವ ಬಂಗೇರ, ಶರೀಫ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಗಟ್ಟಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಲುಕಮಾನ, ಸ್ಥಳೀಯ ನಾಯಕರಾದ ರಾಮಕೃಷ್ಣ ಆಳ್ವಾ, ರಾಜಶೇಖರ ನಾಯ್ಕ, ಜೊಸ್ತಿನ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.