ದಕ್ಷಿಣ ಕನ್ನಡ

ಬಿಜೆಪಿ, ಕಾಂಗ್ರೆಸ್ ಸೋಲಿಗೆ ನನ್ನನ್ನು ಬೆಂಬಲಿಸಿ: ಚೆಂಗಪ್ಪ

Published On :

ಮಂಗಳೂರು: ಅಧಿಕಾರದಲ್ಲಿದ್ದು ಯಾವುದೇ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ತನ್ನನ್ನು ಬೆಂಬಲಿಸುವಂತೆ ಮಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಪಿ.ಚೆಂಗಪ್ಪ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಈಗಾಗಲೇ ಒಂದು ಲಕ್ಷ ಮತದಾರರನ್ನು ಭೇಟಿ ಮಾಡಿದ್ದೇನೆ. ಕ್ಷೇತ್ರದಲ್ಲಿ  ನಾಲ್ಕು ಬಾರಿ ಶಾಸಕರಾಗಿದ್ದ ಬಿಜೆಪಿ ಅಭ್ಯರ್ಥಿ ಅಭಿವೃದ್ಧಿಯನ್ನೇ ಮಾಡಿಲ್ಲ. ಕುಡಿವ ನೀರು, ತುಂಬೆ ಡ್ಯಾಂ, ಬಸ್ ನಿಲ್ದಾಣ, ಮಂಗಳಾ ಕಾರ್ನಿಶ್ ಇನ್ನೂ ನನಸಾಗಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರು ಔಷಧ ಬೇಕಾದರೆ ಹಣ ತೆರಬೇಕಾಗುತ್ತದೆ. ರೇಲ್ವೆ ಮೇಲ್ಸೇತುವೆ ಕೂಡ ಆಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಹಿಂದೆ ಪಾಲಿಕೆ ಆಯುಕ್ತರಾಗಿದ್ದ ನಗರದ ಅಭಿವೃದ್ಧಿಗೆ ಏನೂ ಮಾಡಿಲ್ಲ. ಇವರ ವಿರುದ್ಧ ಲೋಕಾಯುಕ್ತ ದೂರು ಇದ್ದು ನಾಮಪತ್ರ ವೇಳೆ ಅಫಿದವಿತ್‌ನಲ್ಲಿ ಇದನ್ನು ಕಾಣಿಸಿಲ್ಲ. ಈ ಬಾರಿ ಇವರಿಬ್ಬರಿಗೆ ಶಾಶ್ವತ ನಿವೃತ್ತಿ ನೀಡಬೇಕು ಎಂದು ಹೇಳಿದರು. ಚುನಾವಣೆ ದಿನ ಬೂತ್ ಸ್ಥಾಪಿಸಿ ಮತ ಕೇಳಲು ಅವಕಾಶ ನೀಡಬಾರದು. ಈ ಬಗ್ಗೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವರಸೆ ಬದಲಿಸಿದ ಹಿರಿಯ ವಕೀಲ: ಮೊನ್ನೆ ಕಾಂಗ್ರೆಸ್ ಅಭ್ಯರ್ಥಿ ಕರೆದ ವಕೀಲರ ಸಮಾವೇಶದಲ್ಲಿ ಕಾಣಿಸಿದ್ದ ನಗರದ ಹಿರಿಯ ವಕೀಲ ಪುರುಷೋತ್ತಮ ಪೂಜಾರಿ ಜೆಡಿಎಸ್ ಸುದ್ದಿಗೋಷ್ಠಿಯಲ್ಲಿ ಕಾಣಿಸಿ ಅಚ್ಚರಿ ಮೂಡಿಸಿದರು. ಇದಕ್ಕೆ ಅವರು ಸ್ಪಷ್ಟೀಕರಣ ನೀಡಿದ್ದು ಹೀಗೆ-60 ಮಂದಿ ವಕೀಲರು ತನ್ನನ್ನು ಸಭೆಗೆ ಬರುವಂತೆ ಕರೆದಿದ್ದರು. ಹಾಗೆ ಹೋದಾಗ ಅಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿ ಪರ ಮಾತನಾಡಿದ್ದು ನಿಜ. ವಕೀಲರ ಸಂಘದ ಅಧ್ಯಕ್ಷತೆಯ ಅವಧಿಯಲ್ಲಿ ಕೋರ್ಟ್ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಹೋರಾಟಗಳಲ್ಲಿ ಸಕ್ರೀಯವಾಗಿರುವ ಚೆಂಗಪ್ಪ ಪರವಾಗಿದ್ದೇನೆ. ತಾನು ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಿಲ್ಲ, ಜೆಡಿಎಸ್ ಅಭ್ಯರ್ಥಿ ಪರವಾಗಿದ್ದೇನೆ ಅಷ್ಟೇ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.