ಹೆಂಡ ಆಮಿಷದ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಿ
ಮಂಗಳೂರು: ಪರಿಶಿಷ್ಟರ ಮತ ಸೆಳೆಯುವ ಪ್ರಯುಕ್ತ ಪರಿಶಿಷ್ಟ ಕಾಲೋನಿಯಲ್ಲಿ ಹೆಂಡದ ಆಮಿಷ ಒಡ್ಡುವ ಮಂದಿಯ ವಿರುದ್ಧ ದೌರ್ಜನ್ಯ ಕಾಯ್ದೆ ಪ್ರಕರಣ ದಾಖಲಿಸುವಂತೆ ದಲಿತ ಸಂಘಟನೆ ಮುಖಂಡ ಪಿ. ಕೇಶವ್ ಮನವಿ ಮಾಡಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ದಲಿತ ಅಭಿವೃದ್ಧಿ ವೇದಿಕೆಯ ಮುಖಂಡ ಅಶೋಕ್ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಾದ ಪ್ರಯುಕ್ತ ಶಾಂತಿ ಭಂಗವಾಗದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾವೂರು ವ್ಯಾಪ್ತಿಯ ಪರಿಶಿಷ್ಟ ಜಾತಿಯ ಪುರುಷರು ಸೇರಿದಂತೆ ಮಹಿಳೆಯರ ಹೆಸರು ಸೇರಿಸಿ ತೇಜೋವಧೆ ಮಾಡಲಾಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಧರ್ಮಯ್ಯ, ಚುನಾವಣೆ ಸಂದರ್ಭ ಸಣ್ಣ ಗಲಾಟೆನೂ ಮಾಡದಿರಲಿ ಎಂಬುದಾಗಿ ತಹಸೀಲ್ದಾರರು ಮುಚ್ಚಳಿಕೆ ಬರೆದಿದ್ದಾರೆ ಹೊರತು ಇದು ಪ್ರಕರಣ ಎಂದು ಅನ್ವಯವಾಗುವುದಿಲ್ಲ. ಚುನಾವಣೆ ಮುಗಿದ ಬಳಿಕೆ ವಾಪಸ್ ಪಡೆಯಲಾಗುವುದು ಎಂದರು.
ಮಹಿಳೆಯರ ಹೆಸರನ್ನು ತೆಗೆಯುವಂತೆ ಒತ್ತಾಯಿಸಿದಾಗ, ಪ್ರತಿಕ್ರಿಯಿಸಿದ ಕಾವೂರು ಠಾಣೆ ಎಸ್ಪಿ ಹಿಂದೆ ವಠಾರದಲ್ಲಿ ಗಲಾಟೆ ಮಾಡಿ ಕೇಸು ದಾಖಲಾಗಿರುವವರ ಹೆಸರನ್ನು ಮಾತ್ರ ಸೇರಿಸಲಾಗಿದೆ ಹೊರತು ಹೆಚ್ಚುವರಿಯಾಗಿ ಯಾರನ್ನೂ ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ಗಿರೀಶ್ ಕುಮಾರ್ ಮಾತನಾಡಿ, ತೊಕ್ಕೊಟ್ಟಿನಲ್ಲಿ ವಿಶಾಲವಾದ ಬಸ್ ನಿಲ್ದಾಣವಿದ್ದರೂ, ರಸ್ತೆ ಬದಿಯಲ್ಲಿ ಬಸ್ ನಿಲ್ಲಿಸುವುದರ ಪರಿಣಾಮ ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಮನೀಷ್ ಕರ್ಬಿಕರ್, ಡಿಸಿಪಿ ಮುತ್ತುರಾಯ ಹಾಜರಿದ್ದರು.
ಕೊಲೆ ಪ್ರಕರಣ- ಕ್ರಮಕ್ಕೆ ಆಗ್ರಹ: ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ಗಿರೀಶ್ ಕುಮಾರ್ ಮಾತನಾಡಿ, ಸಿಂಡಿಕೇಟ್ ಬ್ಯಾಂಕ್ ಮಹಿಳಾ ಸಿಬ್ಬಂದಿಯ ಕೊಲೆ ಪ್ರಕರಣ ಆಘಾತ ಮೂಡಿಸಿದ್ದು, ಇಂಥ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಆಯುಕ್ತರು, ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಜನಸಂಖ್ಯೆಯಿದೆ. ಪೊಲೀಸ್ ಸಿಬ್ಬಂದಿಗಳಿರುವುದು ಕೇವಲ 1ಸಾವಿರ ಮಂದಿ. ಘಟನೆ ನಡೆದ ಬಳಿಕ ತನಿಖೆ ನಡೆಸಿ ಅಪರಾಧಿಯನ್ನು ಹಿಡಿಯಬಹುದೇ ಹೊರತು, ಹುಡುಗ- ಹುಡುಗಿಯರ ಪ್ರೀತಿ ವಿಷಯ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

