ದಕ್ಷಿಣ ಕನ್ನಡ

ರು. 80 ಕೋಟಿ ಭಂಡಾರ ಆಮಿಷ ಒಡ್ಡಿದರೂ ಪಕ್ಷ ಬಿಡದ ಭಂಡಾರಿ: ಮೊಯ್ಲಿ

Published On :

ಹೆಬ್ರಿ: ಬಿಜೆಪಿ ಮಂತ್ರಿಗಳಿಂದ ಬಿಜೆಪಿ ಸೇರಲು ರು. 80 ಕೋಟಿ ಡಿಮ್ಯಾಂಡ್ ಬಂದರೂ ತನ್ನ ಶಿಷ್ಯ, ಶಾಸಕ ಗೋಪಾಲ ಭಂಡಾರಿ ಹಣದ ಮುಖ ನೋಡದೆ ಪಕ್ಷದ ಶಿಸ್ತು ಪ್ರದರ್ಶಿಸಿ ಆ ಮೂಲಕ ಗುರು ಗುರು ಕಾಣಿಕೆ ಸಲ್ಲಿಸಿದ್ದಾರೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ. ಹೆಬ್ರಿಯಲ್ಲಿ ಭಾನುವಾರ ಬಸ್ ನಿಲ್ದಾಣ ವಠಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಭಂಡಾರಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕರಾವಳಿಯ ಯಾವ ಕಾಂಗ್ರೆಸ್ ಶಾಸಕರೂ ಹಣಕ್ಕೆ ಅಧಿಕಾರಕ್ಕೆ ಮಣೆ ಹಾಕಿಲ್ಲ. ಅವರನ್ನು ಬೆಂಬಲಿಸಿ ಶಾಸಕರಾಗುವಂತೆ ಮಾಡಿ ಎಂದು ಮೊಯ್ಲಿ ಮನವಿ ಮಾಡಿದರು.

ಬೇಂಗಮಲೆ ಪ್ರಕರಣ: ನವೀನ್ ಮೇನಾಲ ಸತ್ಯ ಪ್ರಮಾಣ
ಸುಳ್ಯ: ಬೇಂಗಮಲೆ ಕಾಲೊನಿಗೆ ಶಾಸಕ ಎಸ್.ಅಂಗಾರ ಮತ್ತಿತರರು ಮತಯಾಚನೆಗೆ ಹೋದಾಗ ನಡೆದ ಅಹಿತಕರ ಘಟನೆ ಸಂದರ್ಭ ಕಾಲೊನಿಯ ಮಹಿಳೆಯರ ಮೇಲೆ ಹಲ್ಲೆ ನಡೆದಿದೆ ಎಂಬ ದೂರು ಸುಳ್ಳು ಎಂದು ಜಿ.ಪಂ. ಸದಸ್ಯ ನವೀನ್ ಕುಮಾರ್ ಮೇನಾಲ, ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಪ್ರಮಾಣ ಮಾಡಿದ್ದಾರೆ. ಕಲ್ಕುಡ ದೇವಸ್ಥಾನ, ತೊಡಿಕಾನ ಪಾಷಾಣಮೂರ್ತಿ ದೈವಸ್ಥಾನ ಹಾಗೂ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೋಮವಾರ ನವೀನ್ ಕುಮಾರ್ ಮೇನಾಲ ತೆರಳಿ ಪ್ರಮಾಣ ಮಾಡಿ ಪ್ರಾರ್ಥನೆ ಸಲ್ಲಿಸಿದರು. ನವೀನ್ ಸಾರಕೆರೆ, ಕಿಶನ್ ಜಬಳೆ, ಮಹೇಶ್ ಜಬಳೆ, ಶೇಖರ ಮಡ್ತಿಲ, ಗಣೇಶ ಕೊಚ್ಚಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.