ಮಂಗಳೂರು: ಹಣ ಸುಲಿಗೆ ಮಾಡಿ ಚಾಲಕನ ಕೊಂದರು
ಕ.ಪ್ರ.ವಾರ್ತೆ ಮಂಗಳೂರು ಏ.29
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಸುಲಿಗೆಕೋರರು ಹಣಕ್ಕಾಗಿ ಲಾರಿ ಚಾಲಕರ ಮೇಲೆ ಕಂಡ, ಕಂಡಲ್ಲಿ ಚೂರಿಯಿಂದ ಇರಿದಿದ್ದರಿಂದ ಒಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ರಾಜಸ್ಥಾನದ ಭರತ್ಪುರ ಜಿಲ್ಲೆಯ ಇಸ್ಮಾಯಿಲ್ ಖಾನ್ (20) ಕೊಲೆಯಾದವರು. ಸೋಮವಾರ ಬೆಳಗ್ಗಿನ ಜಾವ 3.30ಕ್ಕೆ ಕೆಂಪು ಬೈಕ್ನಲ್ಲಿ ಬಂದ ದೃಢಕಾಯ ಶರೀರವುಳ್ಳ ಯುವಕರು ಮೊದಲಿಗೆ ಬೈಕಂಪಾಡಿ ಬಳಿಯ ಹಸನಾಜಿ ಗೋಡೌನ್ ಬಳಿ ಚಾಲಕರಾಗಿದ್ದ ಗಂಗಾಧರ ಮತ್ತು ಬಸವರಾಜ್ಗೆ ಚೂರಿಯಿಂದ ಇರಿದು ಮೊಬೈಲ್ ದೋಚಿದರು. ಇಬ್ಬರ ಬಳಿ ಇದ್ದ 2,450 ಕಸಿದುಕೊಂಡು ಅಲ್ಲಿಂದ ಹೊರಟ ಹಂತಕರು ಸಿಪಿಸಿ ಕಂಪನಿ ಎದುರು ನಿಲ್ಲಿಸಿದ್ದ ಲಾರಿಯಿಂದ ಚಾಲಕರನ್ನು ಹೊರಗೆಳೆದು ಮೊಬೈಲ್ ಕಿತ್ತುಕೊಂಡರು. ಪ್ರತಿಭಟಿಸಿದ ಇಸ್ಮಾಯಿಲ್ ಖಾನ್ಗೆ ಚೂರಿಯಿಂದ ಇರಿದಿದ್ದಾರೆ. ಹಣ ಪಡೆದು ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಸ್ಮಾಯಿಲ್ ಖಾನ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.
ನಂಬರ್ ಪ್ಲೇಟ್ ಇಲ್ಲದ ಕೆಂಪು ಬೈಕ್ನಲ್ಲಿ ಇಬ್ಬರು ಬಂದಿದ್ದು, ಮೊಬೈಲ್ ಕಿತ್ತುಕೊಂಡು ಚೂರಿಯಿಂದ ಇರಿದಿದ್ದಾರೆ ಎಂದು ಗಂಗಾಧರ್ ಪಣಂಬೂರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ಪತ್ತೆಯಾಗಿಲ್ಲ. ರಾಜಸ್ಥಾನದ ಸಂಬಂಧಿಕರಿಗೆ ಮಾಹಿತಿ ರವಾನಿಸಿದ್ದು, ಇನ್ನಷ್ಟೇ ಮಂಗಳೂರಿಗೆ ಬರಬೇಕಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

