ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸದೊಂದಿಗೆ ಜೈನ ಬಂಧುಗಳ ಸೇವೆ ಶ್ರೀರಕ್ಷೆ: ರೈ
ಬಂಟ್ವಾಳ: ಸಮಾಜದ ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸದ ಜೊತೆಜೊತೆಯಲ್ಲಿ ಜೈನ ಬಂಧುಗಳ ಸೇವೆಯೂ ನನ್ನೆಲ್ಲಾ ಕಾಯಕಗಳಿಗೆ ಶ್ರೀ ರಕ್ಷೆ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಅವರು ಭಾನುವಾರ ಬಂಟ್ವಾಳದ ಮಂಜುನಾಥೇಶ್ವರ ಕಲ್ಯಾಣಮಂಟಪದಲ್ಲಿ ಜೈನ್ ಮಿಲನ್ ಬಂಟ್ವಾಳ ಹಾಗೂ ಯುವಜೈನ್ ಮಿಲನ್ ಬಂಟ್ವಾಳ ಜಂಟಿಯಾಗಿ ಆಯೋಜಿಸಿದ್ದ '7ನೇ ವರ್ಷದ ತಿಂಡಿ ತಿನಸ್ಲೆನ ಪರಪುದ ಪರ್ಬ ಬೊಕ್ಕ ಮಂತ್ರಿಲೆಗ್ ಮಾನಾದಿಗೆದ ಲೇಸ್ ಕಾರ್ಯಕ್ರಮ'ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಜಕೀಯವಾಗಿ ತನ್ನ ಸೋಲು ಗೆಲವಿನಲ್ಲಿಯೂ ಜೈನ ಬಂಧುಗಳು ಬಲ ನೀಡಿದ್ದಾರೆ ಎಂದು ಸ್ಮರಿಸಿಕೊಂಡ ಅವರು, ತನ್ನ ಮೇಲಿರಿಸಿದ ವಿಶ್ವಾಸವನ್ನು ಉಳಿಸಿಕೊಂಡು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಭಾರತೀಯ ಜೈನ್ ಮಿಲನ್‌ನ ಮಂಗಳೂರು ವಿಭಾಗದ ಅಧ್ಯಕ್ಷ ಡಾ.ಬಿ. ಯಶೋವರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಜೈನ ಸಂಸ್ಕೃತಿಯನ್ನು ಒಟ್ಟುಗೂಡಿಸುವ ಮತ್ತು ಅದರ ಉಳಿವು ಹಾಗೂ ಬೆಳೆಯುವಿಕೆಗೆ ಇಂತಹಾ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.
ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ ಅಜಿಲರು ಸಚಿವರನ್ನು ಸನ್ಮಾನಿಸಿದರು.
ಜೈನ್ ಮಿಲನ್ ಸ್ಥ್ಥಾಪಕಾಧ್ಯಕ್ಷ ಅನಂತರಾಜ್ ಇಂದ್ರ ಅವರನ್ನು ಕಾರ್ಯಕ್ರಮದಲ್ಲಿ ಮಿಲನೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಂಟ್ವಾಳ ಜೈನ್ ಮಿಲನ್ ಅಧ್ಯಕ್ಷ ವೃಷಭ ಕುಮಾರ್ ಇಂದ್ರ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಜೈನ್ ಮಿಲನ್ ನಿರ್ದೇಶಕ ಸುದರ್ಶನ್ ಜೈನ್ ಪ್ರಸ್ತಾವನೆಗೈದರು, ಜೈನ್ ಮಿಲನ್ ಕಾರ್ಯದರ್ಶಿ ಶಿವಪ್ರಕಾಶ್ ಶೆಟ್ಟಿ ಸ್ವಾಗತಿಸಿದರು.
ಯುವ ಜೈನ್ ಮಿಲನ್ ಅಧ್ಯಕ್ಷ ಶ್ರೇಯಂಶ ಜೈನ್ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರ್ವಹಿಸಿದರು.
ತಿಂಡಿತಿನಿಸು ಪ್ರದರ್ಶನ: ಕಾರ್ಯಕ್ರಮದಲ್ಲಿ 117 ಬಗೆಯ ತಿಂಡಿತಿನಿಸುಗಳನ್ನು ಪ್ರದರ್ಶಿಸಲಾಯಿತು. ಸಚಿವ ಬಿ. ರಮಾನಾಥ ರೈ ಸಹಿತ ಸಾವಿರಕ್ಕೂ ಅಧಿಕ ಮಂದಿ ತಿಂಡಿ ತಿನಿಸುಗಳನ್ನು ಸವಿದರು.
ಇದೇ ಸಂದರ್ಭ, ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

