ದಕ್ಷಿಣ ಕನ್ನಡ

ಕುದ್ದುಪದವು ರಸ್ತೆ ದುರವಸ್ಥೆ: ಬಾಳೆ ಗಿಡ ನೆಟ್ಟು ಪ್ರತಿಭಟನೆ

Published On :

ವಿಟ್ಲ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮೂಲಕ ಮರುನಿರ್ಮಾಣಗೊಂಡಿದ್ದ ಕುದ್ದುಪದವು- ಬಾಳಶೆಟ್ಟಿಮೂಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಭಾನುವಾರ ರಸ್ತೆ ಹೊಂಡದಲ್ಲಿ ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು.
ಡಿ.ವಿ. ಸದಾನಂದ ಗೌಡ ಮಂಗಳೂರು ಲೋಕಸಭೆ ಸದಸ್ಯರಾಗಿದ್ದಾಗ ಸುಮಾರು ರು. 399.55 ಲಕ್ಷ ವೆಚ್ಚದಲ್ಲಿ ಕುದ್ದುಪದವು- ಪೆರುವಾಯಿ- ಬಾಳಶೆಟ್ಟಿ ಮೂಲೆಯ 8.74 ಕಿ.ಮೀ. ರಸ್ತೆ ದುರಸ್ತಿಗೆ ಮಂಗಳೂರು ಕೊಣಾಜೆ ಮೂಲದ ಕಂಪನಿಯೊಂದು ಗುತ್ತಿಗೆ ಪಡೆದಿತ್ತು. ಮಂಗಳೂರು ಯೋಜನಾ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎನ್. ನರಸಿಂಹರಾಜು, ಸಹಾಯ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಎಸ್. ಲೋಕೇಶ್, ಸಹಾಯಕ ಎಂಜಿನಿಯರ್ ಬಿ. ಉದಯ ಕುಮಾರ್ ಮೇಲ್ವಿಚಾರಣೆಯಲ್ಲಿ 2009 ಜನವರಿಯಿಂದ ಅಕ್ಟೋಬರ್ ಅವಧಿಯಲ್ಲಿ ಕಾಮಗಾರಿ ನಡೆದಿತ್ತು.
ಆದರೆ ನಾಲ್ಕು ವರ್ಷ ಪೂರ್ಣಗೊಳ್ಳುವ ಮೊದಲೇ ರಸ್ತೆ ಹೀನಾಯ ಸ್ಥಿತಿ ತಲುಪಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ನಾದುರಸ್ತಿಯ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಸಮಸ್ಯೆಗೆ ತಾತ್ಕಾಲಿಕ ಪರಿಹಾರವೂ ದೊರೆತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸ್ಥಳೀಯರು ಒಟ್ಟುಸೇರಿ ಬಾಳೆ ಮತ್ತು ಹೂವಿನ ಸಸಿಗಳನ್ನು ರಸ್ತೆ ಗುಂಡಿಗಳಲ್ಲಿ ನೆಟ್ಟು, ರಿಕ್ಷಾವೊಂದನ್ನು ರಸ್ತೆಯ ಹೊಂಡಕ್ಕೆ ಇಳಿಸಿ ಎತ್ತುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
 ರಸ್ತೆಗೆ ಸಂಪೂರ್ಣವಾಗಿ ಮರುಡಾಂಬರಿಕರಣ ನಡೆಸಬೇಕು. ಅಲ್ಲಿಯವರೆಗೆ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರಗೆ ಯಾವುದೇ ಬಿಲ್ ಪಾವತಿಸಬಾರದು ಎಂದು ಒತ್ತಾಯಿಸಿರುವ ಪ್ರತಿಭಟನಾಕಾರರು, ಸಮಸ್ಯೆಗೆ ಸೂಕ್ತ ಪರಿಹಾರ ದೊರಕದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.