ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ವಿರುದ್ಧ ತೀವ್ರ ಹೋರಾಟಕ್ಕೆ ನಿರ್ಧಾರ
ಮೂಲ್ಕಿ: ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 4000 ಮೆಗಾ ವ್ಯಾಟ್ನ ಉಷ್ಣ ವಿದ್ಯುತ್ ಸ್ಥಾವರದಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿರುವ ಕಟೀಲು ದೇವಳ ಹಾಗೂ ದೇವಳದ ಸುತ್ತ ಹರಿಯುತ್ತಿರುವ ನಂದಿನಿ ನದಿಗೆ ತೊಂದರೆಯಾಗಲಿದೆ. ಹಾಗಾಗಿ ಇದರ ವಿರುದ್ಧ 'ಕಟೀಲು ಉಳಿಸಿ, ನಂದಿನಿ ನದಿ ಉಳಿಸಿ, ನಿಡ್ಡೋಡಿ ಉಳಿಸಿ, ವಿದ್ಯುತ್ ಸ್ಥಾವರ ಅಳಿಸಿ' ಘೋಷಣೆಯೊಂದಿಗೆ ತೀವ್ರ ಹೋರಾಟ ಮಾಡುವ ಬಗ್ಗೆ ಕಟೀಲಿನ ಶಾಲಾ ಸರಸ್ವತಿ ಸದನದಲ್ಲಿ ಜರುಗಿದ ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರ ಸಭೆಯಲ್ಲಿ ನಿರ್ಧರಿಸಲಾಯಿತು. ಈಗಾಗಲೇ ನಿಡ್ಡೋಡಿಯಿಂದ ಕಟೀಲು ರಸ್ತೆಗೆ ಸಂಪರ್ಕಿಸಲು 30 ಅಡಿ ಅಗಲದ ರಸ್ತೆ ನಿರ್ಮಿಸಲು ಗುಪ್ತವಾಗಿ ಸರ್ವೆ ಕಾರ್ಯ ನಡೆದಿದ್ದು ರಸ್ತೆ ಸಂಪರ್ಕ ಕಲ್ಪಿಸಿ ನಂದಿನಿ ನದಿಯಿಂದ ನೀರನ್ನು ಪಡೆಯುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಹೋರಾಡಲು ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಕೊಂಡೆಮೂಲ, ಕಿಲೆಂಜೂರು, ನಡುಗೋಡು ಸೇರಿದಂತೆ ಎಲ್ಲ ಗ್ರಾಮಗಳ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಜಿ.ಪಂ. ಸದಸ್ಯ ಈಶ್ವರ್ ಕಟೀಲು ತಿಳಿಸಿದರು. ಸಭೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಕೆ. ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಕೆ. ಭುವನಾಭಿರಾಮ ಉಡುಪ, ಡಾ. ಸೋಂದಾ ಭಾಸ್ಕರ ಭಟ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

