ಮಂಗಳೂರು ರಸ್ತೆಯಲ್ಲಿ ವಿದೇಶಿ ರಿಕ್ಷಾವಾಲಗಳ ದಂಡು !
ಮಂಗಳೂರು: ವಿದೇಶಿಯರೇ ತುಂಬಿದ್ದ ಮುಂಬಯಿ ಎಕ್ಸ್ಪ್ರೆಸ್ ರಿಕ್ಷಾ ಜಾಥಾ ಸೋಮವಾರ ಮಂಗಳೂರು ನಗರಕ್ಕೆ ಆಗಮಿಸಿತು.
ಮಲ್ಲಕಟ್ಟ ಪ್ರಾಥಮಿಕ ಶಾಲೆ ಆವರಣದಲ್ಲಿ ವಿದೇಶಿಯರು ಸ್ಥಳೀಯ ಶಾಲೆಯ ಮಕ್ಕಳನ್ನು ರಿಕ್ಷಾದಲ್ಲಿ ಕುಳ್ಳಿರಿಸಿ ಸಂಭ್ರಮಿಸಿದರು. ಬಳಿಕ ಅಲ್ಲಿಂದ ಚೆನ್ನೈಯತ್ತ ಪ್ರಯಾಣ ಬೆಳೆಸಿದರು.
ಈ ಜಾಥಕ್ಕೆ ಮಂಗಳೂರು ರೌಂಡ್ ಟೇಬಲ್ ತಂಡದ ಡೇನ್ ಡಿಸೋಜ ಹಸಿರು ನಿಶಾನೆ ತೋರಿದರು. 12 ದಿನಗಳ ಕಾಲ ನಡೆಯುವ ಈ ಜಾಥ ಜು.29ರಂದು ಮುಂಬಯಿಯಿಂದ ಪ್ರಾರಂಭಗೊಂಡಿದ್ದು, ಆ.9ರಂದು ಚೆನ್ನೈ ತಲುಪಲಿದೆ.
'ಪ್ರತಿ ವರ್ಷ ಇಂಥ ಐದು ಜಾಥ ಆಯೋಜಿಸುತ್ತಿದ್ದು, ವಿಶ್ವದ ಬೇರೆ, ಬೇರೆ ದೇಶದ ಜನರು ರಿಕ್ಷಾಚಾಲೆಂಜ್ಡಾಟ್ಕಾಮ್ನಲ್ಲಿ ನೋಂದಣಿ ಮಾಡುತ್ತಾರೆ. ಅವರಿಗೆ ನಾನಾ ಸ್ಪರ್ಧೆ ಆಯೋಜಿಸುತ್ತೇವೆ. ಜಾಥ ತೆರಳುವ ದಾರಿ, ಊರುಗಳ ಬಗ್ಗೆ ಮಾಹಿತಿ ನೀಡುತ್ತೇವೆ' ಎಂದು ರೌಂಡ್ಟೇಬಲ್ ತಂಡದ ಪ್ರಿನ್ಸ್ಲಿ ಹೇಳಿದರು.
ಜಾಥದಲ್ಲಿ ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯ, ರಷ್ಯಾ, ನ್ಯೂಜಿಲೆಂಡ್ ದೇಶದ ರಿಕ್ಷಾ ಚಾಲಕರಿದ್ದರು.
ಜಾಥದಲ್ಲಿ ಪಾಲ್ಗೊಂಡ ಜರ್ಮನಿಯ ಮೈಕಲ್ ತಾನು ಮೊದಲ ಬಾರಿಗೆ ಜಾಥದಲ್ಲಿ ಪಾಲ್ಗೊಳ್ಳುತ್ತಿದ್ದು, ಭಾರತದ ಸಂಸ್ಕೃತಿ ತಿಳಿಯಲು ಸಹಕಾರಿಯಾಗಿದೆ. ಭಾರತದ ಬಗ್ಗೆ ಇನ್ನಷ್ಟು ಆಸಕ್ತಿ ಮೂಡುವಂತೆ ಮಾಡಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

