ಕಾರ್ಪ್ ಬ್ಯಾಂಕ್ನಿಂದ 9 ಹೆಚ್ಚುವರಿ ಎಸ್ಎಂಇ ಸೆಂಟರ್: ಶ್ರೀವಾತ್ಸವ
ಮಂಗಳೂರು: 2014ನೇ ಮಾರ್ಚ್ನೊಳಗೆ ಜಿಲ್ಲೆಯಲ್ಲಿ ಕಾರ್ಪೊರೇಶನ್ ಬ್ಯಾಂಕ್ 9 ಹೆಚ್ಚುವರಿ ಎಸ್ಎಂಇ (ಸ್ಮಾಲ್ ಆ್ಯಂಡ್ ಮೀಡಿಯಂ ಎಂಟ್ರಪ್ರೈಸೆಸ್) ಸಾಲ ಕೇಂದ್ರ ಹೊಂದಲಿದೆ ಎಂದು ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಕೆ. ಶ್ರೀವಾತ್ಸವ ಹೇಳಿದ್ದಾರೆ.
ಕಾರ್ಪೊರೇಶನ್ ಬ್ಯಾಂಕ್ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ ಅನುಕೂಲಕ್ಕಾಗಿ ಶನಿವಾರ ಡೊಂಗರಕೇರಿ ಕೆನರಾ ಪ್ರೌಢಶಾಲೆಯ ಭುವನೇಂದ್ರ ಸಭಾಂಗಣದಲ್ಲಿ ನಡೆದ 'ಎಸ್ಎಂಇ ಎಕ್ಸ್ಪೊ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಹಕರು ಮತ್ತು ಬ್ಯಾಂಕ್ಗಳ ಮಧ್ಯೆ ಉತ್ತಮ ಸಂಬಂಧವಿದ್ದರೆ ಬ್ಯಾಂಕ್ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.
ಮಹಾಪ್ರಬಂಧಕ ಯು.ಎಸ್. ಕಾರ್ತಿಕೇಯ ಮಾತನಾಡಿ, ಎಸ್ಎಂಇ ಸಂಸ್ಥೆ ಸಣ್ಣ ಮತ್ತು ಕಿರು ಉದ್ಯಮ ಸಾಲ ಸೌಲಭ್ಯಕ್ಕಾಗಿ ಸುಮಾರು ರು. 450 ಕೋಟಿ ಮೊತ್ತ ನೀಡಿದೆ. ಮಂಗಳೂರಿನಲ್ಲಿ ಸೇವಾಕ್ಷೇತ್ರ ಹೆಚ್ಚಾಗಿದ್ದು, ಮೀನುಗಾರಿಕೆ, ಸಾಗಾಟ ಮತ್ತಿತರ ಸಣ್ಣ ಉದ್ಯಮಗಳಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಎಸ್ಎಂಇ ಸಾಲ ಸೌಲಭ್ಯವನ್ನು ರು. 650ಕ್ಕೆ ಹೆಚ್ಚಿಸುವ ಯೋಜನೆಯಿದೆ. ಮಳೆಗಾಲ ಅವಧಿಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳಿಗೆ ನೆರವಾಗಲು 'ಎಸ್ಎಂಇ ಗ್ರ್ಯಾಂಡ್ ಫೆಸ್ಟಿವಲ್ ಲೋನ್ ಬೋನಾನ್ಝಾ' ಯೋಜನೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಬೆಂಗಳೂರು ಕಾರ್ಪ್ ಬ್ಯಾಂಕ್ ಮಹಾಪ್ರಬಂಧಕ ಡಿ.ಎಂ. ಮುಜುಮ್ದಾರ್, ಎಂಎಸ್ಎಂಇ ಉಪನಿರ್ದೇಶಕ ಕೆ.ಎಸ್. ಸಾಕ್ರಾಟಿಸ್ ಇದ್ದರು. ಮೇಳದಲ್ಲಿ ಐಡಿಯಲ್ ಐಸ್ಕ್ರೀಂ, ಜೋನ್ಸ್ ಪೆಟ್ರೋ ಉತ್ಪನ್ನ, ಹರ್ಬಲ್ ಫೆರನೆಸ್, ಟೂರ್ ಅಂಡ್ ಟ್ರಾವೆಲ್, ಎಸ್ಎಲ್ ಶೀಟ್ ಮತ್ತು ಆಭರಣ ಜ್ಯುವೆಲ್ಲರ್ಸ್ ಸೇರಿ ಒಟ್ಟು 16 ಮಳಿಗೆಗಳಿದ್ದವು.
ಶೇ. 0.50 ಬಡ್ಡಿದರ ರಿಯಾಯಿತಿ, ಮಹಿಳಾ ಫಲಾನುಭವಿಗಳಿಗೆ ಹೆಚ್ಚುವರಿ ಶೇ. 0.25 ಬಡ್ಡಿ ರಿಯಾಯಿತಿ, ಶ್ರೇಯಾಂಕಿತ ಎಸ್ಎಂಇ ಗ್ರಾಹಕರಿಗೆ ಹೆಚ್ಚುವರಿಯಾಗಿ ಶೇ. 0.25 ರಿಂದ ಶೇ. 0.50 ರವರೆಗೆ ಬಡ್ಡಿ ರಿಯಾಯಿತಿ, ಕ್ರೆಡಿಟ್ ಗ್ಯಾರಂಟಿ ಯೋಜನೆ ವ್ಯಾಪ್ತಿಯ ಖಾತೆಗಳಿಗೆ ಹೆಚ್ಚುವರಿಯಾಗಿ ಶೂನ್ಯ ಬಡ್ಡಿ ರಿಯಾಯಿತಿ, ಅರ್ಜಿ ಪರಿಶೀಲನಾ ಶುಲ್ಕದಲ್ಲಿ ಶೇ. 50 ರಿಯಾಯಿತಿ ಇವು 'ಎಸ್ಎಂಇ ಮಾನ್ಸೂನ್ ಬೋನಾನ್ಝಾ'ದ ಕೆಲವು ಕೊಡುಗೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

