ದಕ್ಷಿಣ ಕನ್ನಡ

ಅಂದು ಲಘುವಾಗಿ ಪರಿಗಣಿಸಲಾಗಿದ್ದ ರುಡ್‌ಸೆಟ್ ಇಂದು ಮಾದರಿ ಸಂಸ್ಥೆ

Published On :

ಬೆಳ್ತಂಗಡಿ: ಪ್ರಾರಂಭದಲ್ಲಿ ಉಜಿರೆಯಂತಹ ಗ್ರಾಮೀಣ ಪ್ರದೇಶದಲ್ಲಿ ರುಡ್‌ಸೆಟ್ ಪ್ರಾರಂಭವಾಗಿರುವುದು ಹಾಸ್ಯಕ್ಕೆ ಕಾರಣವಾಗಿತ್ತು. ಆದರೆ ಈಗ ದೇಶದ 549 ಆರ್ಸೆಟಿಗಳಿಗೆ ಮಾರ್ಗದರ್ಶನ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಗುರುವಾರ ಧರ್ಮಸ್ಥಳದ ಸನ್ನಿಧಿ ಅತಿಥಿ ಗೃಹದಲ್ಲಿ ರುಡ್ ಸೆಟ್ ಸಂಸ್ಥೆಯ ದೇಶವ್ಯಾಪಿ ಶಾಖೆಗಳ ಮುಖ್ಯಸ್ಥರ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಗರಗಳು ಬೆಳೆಯುತ್ತಿವೆ. ಆದರೆ ನಗರಕ್ಕೆ ಆತುಕೊಂಡಿರುವ ಹಳ್ಳಿಗಳು ಬಡತನದ ಸೀಮೆಯಲ್ಲಿಯೇ ದಿನಗಳೆಯುತ್ತಿವೆ. ಆದ್ದರಿಂದ ಹಳ್ಳಿಜನರ ಅಭಿವೃದ್ಧಿಯ ದೃಷ್ಟಿಯಿಂದ ಅವಕಾಶಗಳು ಹಳ್ಳಿಯ ಕಡೆಗೆ ವಾಲಬೇಕು. ಆದರೆ ಇಂದು ಎಲ್ಲ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ. ಉಜಿರೆಯಂತಹ ಹಳ್ಳಿಯಲ್ಲಿ ರುಡ್‌ಸೆಟ್ ಸ್ಥಾಪನೆಯಾದಾಗ ಅನೇಕರು ನಗೆಯಾಡಿದ್ದರು. ಕೇಂದ್ರ ಸರ್ಕಾರವೇ ರುಡ್‌ಸೆಟ್ ಮಾದರಿಯನ್ನು ಅನುಸರಿಸಿ, ಸ್ವ ಉದ್ಯೋಗಕ್ಕೆ ಅವಕಾಶ ಸೃಷ್ಟಿಸಿ ಎಂದು ಹೇಳಿ ರುಡ್ಸೆಟ್ ಆಕಾಡೆಮಿ ಸ್ಥಾಪಿಸಿದೆ. ತನ್ಮೂಲಕ ದೇಶದ 549 ಆರ್ಸೆಟಿಗಳಿಗೆ ಮಾರ್ಗದರ್ಶನ ನೀಡಲು ರುಡ್‌ಸೆಟ್ ಅವಕಾಶ ನೀಡಿದೆ ಎಂದರು.
ರುಡ್‌ಸೆಟ್ ರಾಷ್ಟ್ರೀಯ ಅಕಾಡೆಮಿಯ ಮುಖ್ಯ ಸಂಯೋಜಕ ಕೆ.ಎನ್. ಜನಾರ್ದನ್ ಮಾತನಾಡಿ, ದೇಶದ 619 ಜಿಲ್ಲೆಗಳಲ್ಲಿ 549 ಆರ್ಸೆಟಿಗಳಿದ್ದು ಬಹುತೇಕ ಸಂಸ್ಥೆಗಳಲ್ಲಿ ಉತ್ತಮ ಫಲಿತಾಂಶ ಲಭ್ಯವಾಗುತ್ತಿದೆ. ಕೇಂದ್ರ ಸರ್ಕಾರ ಇದರ ವಿವರಗಳನ್ನು ಪಡೆಯುತ್ತಿದ್ದು ಪ್ರಧಾನಿ ಸಚಿವಾಲಯವೇ ಖುದ್ದು ಮಾಹಿತಿ ಬಯಸಿದೆ ಎಂದರು.
ಕೆಟಲಿಸ್ಟ್ ಮೆನೇಜ್ಮೆಂಟ್ ಸರ್ವರ್ಸ್‌ನ ವಿಜಯ್ ಕುಲಕರ್ಣಿ ಮಾತನಾಡಿ, ದ.ಕ.ದ ಹಳ್ಳಿಯೊಂದರಲ್ಲಿ ಹುಟ್ಟಿದ ರುಡ್‌ಸೆಟ್ ಸಂಸ್ಥೆ ಇಡೀ ದೇಶವ್ಯಾಪಿಯಾಗಿ ವಿಸ್ತರಿಸಿ ದೇಶಾಡಳಿತದ ಗಮನ ಸೆಳೆದು ಮಾದರಿ ಎಂದು ಗುರುತಿಸಲ್ಪಟ್ಟದ್ದು ಶ್ಲಾಘನೀಯ ಎಂದು ಹೇಳಿದರು.
ರುಡ್‌ಸೆಟ್ ರಾಷ್ಟ್ರೀಯ ಅಕಾಡೆಮಿಯ ಮಹಾನಿರ್ದೇಶಕ ಎಚ್. ಸೋಮಶೇಖರ್ ಉಪಸ್ಥಿತರಿದ್ದರು.
ರುಡ್‌ಸೆಟ್ ಕೇಂದ್ರ ಕಚೇರಿ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಪಿ. ಜಗದೀಶ್ ಮೂರ್ತಿ ಸ್ವಾಗತಿಸಿ, ಉಜಿರೆ ನಿರ್ದೇಶಕ ಎಂ.ಕೆ.ಎಸ್. ಪ್ರಭು ನಿರ್ವಹಿಸಿದರು. ಧಾರವಾಡ ರುಡ್‌ಸೆಟ್ ನಿರ್ದೇಶಕ ಎಂ.ಡಿ. ವೀರಾಪುರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.