'ಪ್ರಕೃತಿ ಚಿಕಿತ್ಸೆಗೆ ಶಾಂತಿವನದ ಕೊಡುಗೆ ಅಪಾರ'
ಬೆಳ್ತಂಗಡಿ: ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಶಾಂತಿವನದ ಕೊಡುಗೆ ಅಪಾರ. ಇಡೀ ವಿಶ್ವಕ್ಕೆ ಇದೊಂದು ಮಾದರಿ ಚಿಕಿತ್ಸಾಲಯ ಎಂದು ಟರ್ನರ್ ಮಾರಿಸನ್ ಪ್ರೈ.ಲಿ. ಅಧ್ಯಕ್ಷ ಅಮಿತ್ ಜಡ್ಜ್ ಹೇಳಿದರು.
ಅವರು ಧರ್ಮಸ್ಥಳದ ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ನವೀಕರಣಗೊಂಡ ಸುವ್ಯವಸ್ಥಿತ ಭೋಜನಗೃಹ ಉದ್ಘಾಟಿಸಿ ಮಾತನಾಡಿದರು. ಶಾಂತಿವನದ ವಿವಿಧ ಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿದ ಅವರು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಆಯುಷ್ ಗ್ರಾಮ ಯೋಜನೆ ಮುಂತಾದ ಯೋಜನೆಗಳು ಶ್ಲಾಘನೀಯ ಎಂದರು. ಶಾಂತಿವನದ ಟ್ರಸ್ಟಿ ಡಿ. ಹರ್ಷೇಂದ್ರ ಕುಮಾರ್, ಶಾಂತಿವನ ಬೆಳೆದು ಬಂದ ರೀತಿ ವಿವರಸಿ ಇಲ್ಲಿನ ಆಡಳಿತ ನಿರ್ವಹಣೆ, ವೈದ್ಯರು ಮತ್ತು ಸಿಬಂದಿ ವರ್ಗದವರ ಸೇವೆಯನ್ನು ಅಭಿನಂದಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಡಿ.ಎಂ.ಸಿಯ ಪ್ರಬಂಧಕ ಗೋಪಾಲ್ ಮೆನನ್ ಉಪಸ್ಥಿತರಿದ್ದರು. ಮುಖ್ಯ ವೈದ್ಯಾಧಿಕಾರಿ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡಾ. ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಆವಂತಿಕಾ ನಿರೂಪಿಸಿದರು.
ಭವಿಷ್ಯ ನಿಧಿ ಖಾತೆಗೆ ವೆಬ್ಸೈಟ್
ಮಂಗಳೂರು: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ವತಿಯಿಂದ ತನ್ನ ಸದಸ್ಯರ ಭವಿಷ್ಯ ನಿಧಿ ಖಾತೆಗಳ ವರ್ಗಾವಣೆಯನ್ನು ಪಾರದರ್ಶಕತೆ ಮತ್ತು ಶೀಘ್ರವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಢಿಢಿಢಿ.ಜಠಜ್ಝಿಟಿಜ್ಝಛ.್ಜ್ಟಢ.್ಝಟಿ ವೆಬ್ಸೈಟ್ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬೀಡಿ ಸ್ಕಾಲರ್ಶಿಪ್ಗೆ
ಆಧಾರ್ ಕಡ್ಡಾಯವಲ್ಲ
ಮಂಗಳೂರು: ವಿದ್ಯಾರ್ಥಿಗಳು ಬೀಡಿ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆ ಕಡ್ಡಾಯವಿಲ್ಲ ಎಂಬ ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಎಐಟಿಯುಸಿ ಹೇಳಿಕೆಯನ್ನು ಸ್ವಾಗತಿಸಿದೆ. ತುಮಕೂರು ಮೈಸೂರು ಹಾಗೂ ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ನಾಗರಿಕರಿಗೆ ಆಧಾರ್ ಗುರುತು ಸಂಪೂರ್ಣ ಲಭಿಸದ ಕಾರಣ ಬೀಡಿ ಸ್ಕಾಲರ್ಶಿಪ್ಗಾಗಿ ವಿದ್ಯಾರ್ಥಿಗಳು ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯವಿಲ್ಲ. ಆದರೆ ಆಧಾರ್ ಗುರುತು ಹೊಂದಿರುವವರು ಹಾಗೂ ನೋಂದಾಣೆ ಮಾಡಿರುವವರು ಅವುಗಳ ವಿವರ ಸಲ್ಲಿಸಬೇಕು ಎಂದು ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಪಿ. ಸಂಜೀವ ಹೇಳಿದ್ದಾರೆ. ಮಾಹಿತಿಗಾಗಿ ಸೀತಾರಾಂ ಬೇರಿಂಜ-9448437754.
ಪಂಜಿನ ಮೆರವಣಿಗೆಗೆ ವಿದ್ಯಾರ್ಥಿಗಳು: ತನಿಖೆಗೆ ಆಗ್ರಹ
ಸುಳ್ಯ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಆ. 14ರಂದು ರಾತ್ರಿ ಸುಳ್ಯದಲ್ಲಿ ನಡೆದ ಅಖಂಡ ಸಂಕಲ್ಪ ದಿನಾಚರಣೆಯ ಪಂಜಿನ ಮೆರವಣಿಗೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಒತ್ತಡ ಪೂರಕವಾಗಿ ಕರೆತರಲಾಗಿದೆ ಎಂದು ನ.ಪಂ. ಸದಸ್ಯ ಗೋಕುಲ್ ದಾಸ್ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಮಗೆ ಲಭಿಸಿದ ಮಾಹಿತಿಯ ಆಧಾರದಲ್ಲಿ ನಾವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಸ್ಟೆಲ್ಗೆ ಹೋದಾಗ ಅಲ್ಲಿ ವಿದ್ಯಾರ್ಥಿಗಳಿರಲಿಲ್ಲ. ಕೆಲವು ಜನಪ್ರತಿನಿಧಿಗಳು ಬಂದು ಅಲ್ಲಿದ್ದ ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಪಂಜಿನ ಮೆರವಣಿಗೆಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಬಂತು. ಈ ಕುರಿತಂತೆ ತನಿಖೆ ನಡೆಸಬೇಕು, ಸಚಿವರಿಗೂ ಈ ವಿಷಯ ತಿಳಿಸುತ್ತೇವೆ. ಎಲ್ಲಿಂದಲೋ ಬಂದು ಅಧ್ಯಯನ ನಡೆಸುವ ವಿದ್ಯಾರ್ಥಿಗಳನ್ನು ರಾತ್ರಿ ವೇಳೆ ಈ ರೀತಿ ಅನ್ಯ ಉದ್ದೇಶಕ್ಕೆ ಕರೆದೊಯ್ಯುವುದು ಸರಿಯಲ್ಲ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

