ದಕ್ಷಿಣ ಕನ್ನಡ

ನಿಮಿತ್ತ ಮಾತ್ರವೆಂಬ ಭಾವವಿದ್ದರೆ ಭಗವಂತ ಲಾಲಿ ಹಾಡುತ್ತಾನೆ: ಕೆ.ಕಲ್ಯಾಣ್

Published On :

ಬೆಳ್ತಂಗಡಿ:ನಾವು ಸೊನ್ನೆಯಾಗಿ ಬದುಕನ್ನು ಸಾಗಿಸಬೇಕು. ನಾವು ನಿಮಿತ್ತ ಮಾತ್ರ ಎಂಬ ಭಾವನೆ ಇದ್ದರೆ ಭಗವಂತ ಭಕ್ತನನ್ನು ಕೂರಿಸಿ ಲಾಲಿ ಹಾಡುತ್ತಾನೆ ಎಂದು ಸಂಗೀತ ನಿರ್ದೇಶಕ ಮತ್ತು ಗೀತ ರಚನೆಕಾರ ಕೆ. ಕಲ್ಯಾಣ್ ಹೇಳಿದ್ದಾರೆ.
ಭಾನುವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್‌ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರಾಥಮಿಕ ಶಾಲೆ ಮಕ್ಕಳಿಗಾಗಿ 'ಜ್ಞಾನನಿಧಿ' ಮತ್ತು ಪ್ರೌಢಶಾಲೆ ಮಕ್ಕಳಿಗಾಗಿ 'ಜ್ಞಾನಸುಧೆ' ಎಂಬ 2013ನೇ ಸಾಲಿನ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು  ಬಿಡುಗಡೆ ಮಾಡಿ ಮಾತನಾಡಿದರು.
ಭಕ್ತಿಯ ಕೊರತೆಯಿದ್ದರೂ ಶರಣಾಗತಿಯ ಕೊರತೆ ಇರಬಾರದು. ತಮ್ಮ ಭಾವನೆಗಳನ್ನು ತಾವು ಪ್ರಯಾಣದಲ್ಲಿ ರಚಿಸಿದ 'ನೆನೆಯದೆ ಹೇಗಿರಲಿ ಸ್ವಾಮಿ?' ಎಂಬ ಭಕ್ತಿಗೀತೆಯನ್ನು ಸುಶ್ಯಾವ್ಯವಾಗಿ ಹಾಡಿ ಭಕ್ತಿಯ ಸಿಂಚನ ಮೂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಬುದ್ಧಿ ಮತ್ತು ಮನಸ್ಸು ಬಲಿಷ್ಠವಾಗಬೇಕಾದರೆ ಸಂಸ್ಕಾರ ಮುಖ್ಯ. ಎಳವೆಯಲ್ಲಿಯೇ ಸಂಸ್ಕಾರವನ್ನು ಮೂಡಿಸುವ ದೃಷ್ಟಿಯಿಂದ 1993ರಿಂದ ನೈತಿಕ ಶಿಕ್ಷಣದ ಪುಸ್ತಕಗಳನ್ನು ಪ್ರಕಟಿಸಿ ಅವುಗಳ ಮೂಲಕ ಪ್ರಬಂಧ, ಭಾಷಣ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಯಶಸ್ಸೂ ದೊರಕಿದೆ. ಶಾಲೆಗಳಲ್ಲಿ ಈ ಪುಸ್ತಕಗಳನ್ನು ಕುರಿತ ಚಟುವಟಿಕೆಗಳನ್ನು ನಡೆಸಲು ಶಿಕ್ಷಣ ಇಲಾಖೆ ನಿರಂತರ ಪ್ರೋತ್ಸಾಹಿಸುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.